ನವದೆಹಲಿ: ಕಾರು ತಯಾರಿಕಾ ಕಂಪನಿಗಳು 2022ರ ಡಿಸೆಂಬರ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕ ವಾಹನಗಳ ಮಾರಾಟವು ಸ್ಥಿರವಾಗಿದೆ, ಆದರೂ ತಿಂಗಳ ಆಧಾರದ ಮೇಲೆ ಕುಸಿತ ದಾಖಲಿಸಿವೆ. ದೊಡ್ಡ ಕಾರುಗಳಿಗೆ ಅದರಲ್ಲೂ ಎಸ್ಯುವಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಎಂಟ್ರಿ ಲೆವೆಲ್ ಮತ್ತು ಸಣ್ಣ ಕಾರುಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ.
ಹೆಚ್ಚು ಮಾರಾಟವಾಗುತ್ತಿರುವ ಎಸ್ಯುವಿಗಳ ಪೈಕಿ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಮತ್ತು ಹ್ಯುಂಡೈ ನಡುವೆ ಪ್ರಬಲ ಸ್ಪರ್ಧೆಯಿದೆ. ಡಿಸೆಂಬರ್ನಲ್ಲಿ ಯಾವ SUV ಗ್ರಾಹಕರಿಗೆ ಹೆಚ್ಚು ಇಷ್ಟವಾಯಿತು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
- ಟಾಟಾ ನೆಕ್ಸಾನ್ ಮತ್ತೊಮ್ಮೆ ದೇಶದಲ್ಲಿ ಹೆಚ್ಚು ಮಾರಾಟವಾಗುವ SUV ಆಗಿದೆ. ಇದು ಟಾಪ್ 10 SUVಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಂಪನಿಯು ಡಿಸೆಂಬರ್ 2022ರಲ್ಲಿ ನೆಕ್ಸಾನ್ನ 12,053 ಯುನಿಟ್ಗಳನ್ನು ಮಾರಾಟ ಮಾಡಿದೆ. ಡಿಸೆಂಬರ್ 2021ರಲ್ಲಿ, 12,899 ಯುನಿಟ್ಗಳು ಮಾರಾಟವಾಗಿದ್ದವು. ಈ ಮೂಲಕ ನೆಕ್ಸಾನ್ ಮಾರಾಟದಲ್ಲಿ ಈ ಬಾರಿ ಶೇ.7ರಷ್ಟು ಕುಸಿತ ದಾಖಲಿಸಿದೆ. ಇದರ ಬೆಲೆ 7.70 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.
- ಮಾರುತಿ ಬ್ರೆಝಾ ಡಿಸೆಂಬರ್ 2022ರಲ್ಲಿ 11,200 ಯುನಿಟ್ಗಳೊಂದಿಗೆ 2ನೇ ಸ್ಥಾನದಲ್ಲಿದೆ. ಡಿಸೆಂಬರ್ 2021ರಲ್ಲಿ, ಬ್ರೆಜ್ಜಾದ 9,531ಯುನಿಟ್ಗಳು ಮಾರಾಟವಾಗಿವೆ. ಇದರರ್ಥ ಎಸ್ಯುವಿ ಶೇ.18ರಷ್ಟು ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ.
ಇದನ್ನೂ ಓದಿ: PAN Card Rule: 18 ವರ್ಷಕ್ಕಿಂತ ಮುಂಚೆಯೇ 'ಪ್ಯಾನ್ ಕಾರ್ಡ್' ಪಡೆಯಬಹುದು! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
- ಟಾಟಾ ಪಂಚ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿತ್ತು. ಇದು 1 ವರ್ಷದೊಳಗೆ ಟಾಟಾ ಮೋಟಾರ್ಸ್ನ 2ನೇ ಅತಿಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದು ಡಿಸೆಂಬರ್ 2022ರಲ್ಲಿ 10,586 ಯುನಿಟ್ಗಳನ್ನು ಮಾರಾಟ ಮಾಡಿದೆ. ಡಿಸೆಂಬರ್ 2021ಕ್ಕೆ ಹೋಲಿಸಿದರೆ ಇದು ಶೇ.32ರಷ್ಟು ಬೆಳವಣಿಗೆ ದಾಖಲಿಸಿದೆ.
- ಹುಂಡೈ ಕ್ರೆಟಾ ಕಳೆದ ತಿಂಗಳು 10,205 ಯುನಿಟ್ಗಳನ್ನು ಮಾರಾಟ ಮಾಡುವುದರೊಂದಿಗೆ 4ನೇ ಸ್ಥಾನಕ್ಕೆ ಏರಿತು. SUV ಮಾರಾಟವು ಶೇ.34ರಷ್ಟು ರಷ್ಟು (YoY) ಬೆಳವಣಿಗೆ ಕಂಡಿದೆ. ಡಿಸೆಂಬರ್ 2021ರಲ್ಲಿ, ಹುಂಡೈ ಕ್ರೆಟಾದ 7,609 ಯುನಿಟ್ಗಳನ್ನು ಮಾರಾಟ ಮಾಡಲಾಗಿತ್ತು.
- ಹುಂಡೈ ವೆನ್ಯೂ ಕಾಂಪ್ಯಾಕ್ಟ್ SUV ಡಿಸೆಂಬರ್ 2022ರಲ್ಲಿ 5ನೇ ಸ್ಥಾನದಲ್ಲಿದೆ. ಇದು ಡಿಸೆಂಬರ್ 2022ರಲ್ಲಿ 8,285 ಯುನಿಟ್ಗಳನ್ನು ಮಾರಾಟ ಮಾಡಿದ್ದರೆ, 1 ವರ್ಷದ ಹಿಂದೆ ಅದೇ ತಿಂಗಳಲ್ಲಿ 10,360 ಯುನಿಟ್ಗಳನ್ನು ಮಾರಾಟ ಮಾಡಲಾಗಿತ್ತು. ವೆನ್ಯೂ ಮಾರಾಟದಲ್ಲಿ ಶೇ.20ರಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ: Tax ಪಾವತಿದಾರರಿಗೆ ಸಂತಸದ ಸುದ್ದಿ, ಈ 10 ರೀತಿಯಲ್ಲಿ ತೆರಿಗೆ ವಿನಾಯಿತಿ ಪಡೆಯಿರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.