Astro Remedies 2023: ಹೊಸ ವರ್ಷದಲ್ಲಿ ಅದೃಷ್ಟದ ಬೆಂಬಲ ಪಡೆಯಲು ಇಂದಿನಿಂದಲೇ ಈ ಕೆಲಸ ಆರಂಭಿಸಿ

Good Luck Remedies: ಜೀವನದಲ್ಲಿ ಮಲಗಿರುವ ನಿಮ್ಮ ಭಾಗ್ಯವನ್ನು ಬಡಿದೆಬ್ಬಿಸಲು ಅಥವಾ ಯಾವುದೇ ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳ ಪ್ರಾಪ್ತಿಗಾಗಿ  ಜೋತಿಷ್ಯ ಶಾಸ್ತ್ರದಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದೆ. ನಿಯಮಿತವಾಗಿ ಈ ಉಪಾಯಗಳನ್ನು ಅನುಸರಿಸುವ ಮೂಲಕ ನೀವು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಂಪಾದಿಸಬಹುದು.  

Written by - Nitin Tabib | Last Updated : Jan 3, 2023, 07:39 PM IST
  • ಹಿಂದೂ ಧರ್ಮದಲ್ಲಿ ಹಸುವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.
  • ಬೆಳಗ್ಗೆ ಆಹಾರ ತಯಾರಿಸುವಾಗ ಮೊದಲನೇ ರೊಟ್ಟಿಯನ್ನು
  • ಹಸುವಿಗೆ ಮೀಸಲಿಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
Astro Remedies 2023: ಹೊಸ ವರ್ಷದಲ್ಲಿ ಅದೃಷ್ಟದ ಬೆಂಬಲ ಪಡೆಯಲು ಇಂದಿನಿಂದಲೇ ಈ ಕೆಲಸ ಆರಂಭಿಸಿ title=
Good Luck Tips 2023

Good Luck Remedies 2023: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಲು ಬಯಸುತ್ತಾನೆ. ಜೀವನದಲ್ಲಿ ಸಾಕಷ್ಟು ಮುಂದಕ್ಕೆ ಹೋಗಲು ಬಯಸುತ್ತಾರೆ. ಜನರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಶಿಖರವನ್ನು ತಲುಪಲು, ಹಗಲಿರುಳು ಶ್ರಮಿಸುತ್ತಾರೆ, ಉದ್ಯೋಗದಲ್ಲಿ ಬಡ್ತಿಗಾಗಿ ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಅನೇಕ ಬಾರಿ ವ್ಯಕ್ತಿಗೆ ಆತನ ಭಾಗ್ಯದ ಸಾಥ್ ಸಿಗುವುದಿಲ್ಲ. ಭರವಸೆಯ ಯಾವುದೇ ಕಿರಣ ಅವನಿಗೆ ತೋರುವುದಿಲ್ಲ. ಹೀಗಿರುವಾಗ ವ್ಯಕ್ತಿ ತನ್ನ ಜೀವನದಲ್ಲಿ ತುಂಬಾ ನಿರಾಶೆಗೊಳ್ಳುತ್ತಾನೆ. ಆದರೆ, ಜೀವನದಲ್ಲಿ ಎಲ್ಲಾ ದಾರಿಗಳು ಮುಚ್ಚಿಹೋದಾಗ, ಆ ಭಗವಂತನ ದಾರಿ ತೋರಿಸುತ್ತಾನೆ ಎಂಬುದನ್ನು ನೀವು ಕೇಳಿರಬಹುದು.

ಇದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ಸುಲಭ ಪರಿಹಾರಗಳನ್ನು ಸೂಚಿಸಲಾಗಿದೆ, ಅವುಗಳನ್ನು ನಿಯಮಿತವಾಗಿ ಜೀವನದ ಪಾಲಿಸಿದರೆ, ವ್ಯಕ್ತಿಯ ಮಲಗಿಕೊಂಡ ಭಾಗ್ಯ ಪುಟಿದೇಳುತ್ತದೆ. ಇದರ ಜೊತೆಗೆ ವ್ಯಕ್ತಿ ಪ್ರತಿ ಕೆಲಸದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯಲು ಆರಂಭಿಸುತ್ತಾನೆ. ಇಂತಹ ಮೂರು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಉಪಾಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ

ಒಂದೇ ಕ್ಷಣದಲ್ಲಿ ಭಾಗ್ಯ ಬದಲಾವಣೆಗೆ ಈ ಉಪಾಯಗಳನ್ನು ಅನುಸರಿಸಿ
- ಹಸು ಮತ್ತು ಹೆಣ್ಣು ನಾಯಿಗಾಗಿ ರೊಟ್ಟಿಯನ್ನು ತೆಗೆದಿಡಿ

ಹಿಂದೂ ಧರ್ಮದಲ್ಲಿ ಹಸುವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಬೆಳಗ್ಗೆ ಆಹಾರ ತಯಾರಿಸುವ ಮೊದಲು ಹಸುವಿನ ಮೊದಲ ರೊಟ್ಟಿಯನ್ನು ತೆಗೆದಿಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಮತ್ತು ಕೊನೆಯ ರೊಟ್ಟಿಯನ್ನು ನಾಯಿಗಾಗಿ ಮೀಸಲಿಡಬೇಕು ಎನ್ನಲಾಗಿದೆ. ಈ ಕೆಲಸವನ್ನು ನಿಯಮಿತವಾಗಿ ಮಾಡುವುದರಿಂದ, ಪಿತೃದೋಷ ಪರಿಹಾರವಾಗುತ್ತದೆ ಮತ್ತು ವ್ಯಕ್ತಿಯು ಅದೃಷ್ಟದ ಬೆಂಬಲವನ್ನು ಪಡೆಯುತ್ತಾನೆ. ಅಷ್ಟೇ ಅಲ್ಲ ಯಾವುದೇ ಕೆಲಸದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ.

- ವಿಷ್ಣುವಿನ ವೃತ ಕೈಗೊಳ್ಳಿ
ಬೃಹಸ್ಪತಿ ಅಥವಾ ಗುರು ಗ್ರಹವನ್ನು ಭಾಗ್ಯೇಶ ಎಂದೂ ಕರೆಯುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹ ದುರ್ಬಲವಾಗಿದ್ದರೆ, ಆ ವ್ಯಕ್ತಿಗೆ ಪ್ರತಿ ಕೆಲಸದಲ್ಲಿ ನಿರಾಶೆ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಗುರು ಗ್ರಹವನ್ನು ಬಲಪಡಿಸಲು ಪ್ರತಿ ಗುರುವಾರ ಉಪವಾಸವನ್ನು ಕೈಗೊಳ್ಳಿ. ಈ ದಿನ ಆಲದ ಮರವನ್ನು ಪೂಜಿಸಿ. ಈ ರೀತಿ ಮಾಡುವುದರಿಂದ ಶ್ರೀ ಹರಿಯ ಆಶೀರ್ವಾದ ಲಭಿಸುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಇದನ್ನೂ ಓದಿ-Makar Sankranti 2023ಕ್ಕೆ ಸಂಬಂಧಿಸಿದ ಈ ಪ್ರಶ್ನೆಗಳ ಉತ್ತರಕ್ಕಾಗಿ ಜನರು ಗೂಗಲ್ ಮೊರೆಹೋಗುತ್ತಿದ್ದಾರೆ.. ನೀವೂ ತಿಳಿದುಕೊಳ್ಳಿ

- ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಇರಿಸಿ
ಪಕ್ಷಿಗಳಿಗೆ ನಿಯಮಿತವಾಗಿ ಆಹಾರ ನೀಡುವ ಕೆಲಸವೂ ಈ ಕ್ರಮಗಳಲ್ಲಿ ಶಾಮೀಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಮಲಗಿಕೊಂಡ ಭಾಗ್ಯವು ಎಚ್ಚೆತ್ತುಕೊಳ್ಳುತ್ತದೆ. ನಿತ್ಯ ಬೆಳಗ್ಗೆ ದೇವರ ದರ್ಶನ ಮಾಡಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಧನಾತ್ಮಕ ಶಕ್ತಿ ಹರಡುತ್ತದೆ ಎಂದು ನಂಬಲಾಗಿದೆ. ಇದರಿಂದ ವ್ಯಕ್ತಿಯು ಜೀವನದಲ್ಲಿ ಶುಭ ಫಲಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ.

ಇದನ್ನೂ ಓದಿ-Goddess Lakshmi Tips: ಇಂತಹ ಜನರ ಮನೆಗೆ ಲಕ್ಷ್ಮಿ ಎಂದಿಗೂ ಕಾಲಿಡುವುದಿಲ್ಲ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News