Tulsi Plant Vastu: ಧಾರ್ಮಿಕ ಗ್ರಂಥಗಳ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯದ ಸುತ್ತ ಮುತ್ತಲೂ ಇಡುವ ಕೆಲವು ವಸ್ತುಗಳು ಮನೆಗೆ ದಾರಿದ್ರ್ಯವನ್ನು ಆಹ್ವಾನಿಸುತ್ತವೆ ಎಂದು ಹೇಳಲಾಗುತ್ತದೆ.
Tulsi Plant Vastu: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ಭಗವಾನ್ ವಿಷ್ಣು ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಮೆಚ್ಚಿಸಲು ಮನೆಯಲ್ಲಿ ತುಳಸಿ ಸ್ಥಾಪಿಸುವುದನ್ನು ಅತ್ಯಂತ ಸುಲಭ ಉಪಾಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಧಾರ್ಮಿಕ ಗ್ರಂಥಗಳ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯದ ಸುತ್ತ ಮುತ್ತಲೂ ಇಡುವ ಕೆಲವು ವಸ್ತುಗಳು ಮನೆಗೆ ದಾರಿದ್ರ್ಯವನ್ನು ಆಹ್ವಾನಿಸುತ್ತವೆ ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುವು, ಯಾವ ವಸ್ತುಗಳನ್ನು ತುಳಸಿಯ ಸುತ್ತ ಇಡಬಾರದು ಎಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮುಳ್ಳಿನ ಗಿಡಗಳು: ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡದ ಸುತ್ತಮುತ್ತ ಮುಳ್ಳಿನ ಗಿಡಗಳನ್ನು ಇಡುವ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ.
ಪೊರಕೆ: ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎಂದು ಭಾವಿಸಲಾಗಿದೆ. ಆದರೆ, ತುಳಸಿ ಗಿಡದ ಆಸುಪಾಸಿನಲ್ಲಿ ಪೊರಕೆ ಇಡುವುದರಿಂದ ಅಂತಹ ಮನೆಯಲ್ಲಿ ದಾರಿದ್ರ್ಯ ವಕ್ಕರಿಸುತ್ತದೆ ಎಂದು ಹೇಳಲಾಗುತ್ತದೆ.
ಶಿವ ಲಿಂಗ: ತುಳಸಿ ವಿಷ್ಣು ಪ್ರಿಯೆ. ಹಾಗಾಗಿಯೇ, ಶಿವನ ಆರಾಧನೆಯನ್ನು ಸ=ತುಳಸಿಯನ್ನು ಬಳಸಲಾಗುವುದಿಲ್ಲ. ಹೀಗಿರುವಾಗ ತುಳಸಿ ಸಸ್ಯದ ಬಳಿ ಶಿವಲಿಂಗ ಇಡುವುದರಿಂದ ಶಿವನ ಕೋಪಕ್ಕೆ ತುತ್ತಾಗಬಹುದು ಎನ್ನಲಾಗುತ್ತದೆ.
ಕಸ: ತುಳಸಿಯನ್ನು ಪವಿತ್ರ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ, ಈ ಸಸ್ಯಕ್ಕೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಆದರೆ, ಗೊತ್ತೋ ಅಥವಾ ಗೊತ್ತಿಲ್ಲದೆಯೋ ಈ ಸಸ್ಯದ ಬಳಿ ಕಸ ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ಹೇಳಲಾಗುತ್ತದೆ.
ಶೂ ಅಥವಾ ಚಪ್ಪಲಿ: ತುಳಸಿ ಗಿಡ ಸಮೀಪದಲ್ಲಿ ಶೂ, ಚಪ್ಪಲಿ ಇನ್ನಾವುದೇ ಪಾದರಕ್ಷೆಗಳನ್ನು ಇಡಬಾರದು. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು. ಅಂತಹ ಮನೆಯಲ್ಲಿ ನಕಾರಾತ್ಮಕತೆ ತಾಂಡವವಾಡುತ್ತದೆ ಎನ್ನಲಾಗುವುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.