ಸೂರ್ಯ ಮತ್ತು ಶನಿಯ ಯಾವುದೇ ರಾಶಿಯಲ್ಲಿ ಒಂದಾದಾಗ ಜಾತಕದಲ್ಲಿ ಏರುಪೇರು ಉಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಈ ಸಂಯೋಜನೆಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಪ್ರಯೋಜನ ಉಂಟು ಮಾಡುತ್ತದೆ.
ಬೆಂಗಳೂರು : ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಹೊಸ ವರ್ಷದಲ್ಲಿ ಗ್ರಹಗಳ ಸ್ಥಾನದಲ್ಲಿಯೂ ಬದಲಾವನೆಯಾಗಲಿವೆ. ಗ್ರಹಗಳ ಸ್ಥಾನದಲ್ಲಿನ ಬದಲಾವಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಜನವರಿ 17 ರಂದು ಗ್ರಹಗಳ ತೀರ್ಪುಗಾರ ಶನಿದೇವ ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಫೆಬ್ರವರಿ 13 ರಂದು, ಸೂರ್ಯ ದೇವರು ಕೂಡ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಶನಿ ತಂದೆ ಮಗನಾದರೂ ಇಬ್ಬರ ನಡುವೆ ಇರುವುದು ಶತೃತ್ವ ಭಾವ. ಈ ಎರಡೂ ಗ್ರಹಗಳು ಕುಂಭ ರಾಶಿಯಲ್ಲಿ ಮಾರ್ಚ್ 14, 2023 ರವರೆಗೆ ಇರುತ್ತದೆ. ಸೂರ್ಯ ಮತ್ತು ಶನಿಯ ಯಾವುದೇ ರಾಶಿಯಲ್ಲಿ ಒಂದಾದಾಗ ಜಾತಕದಲ್ಲಿ ಏರುಪೇರು ಉಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಈ ಸಂಯೋಜನೆಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಪ್ರಯೋಜನ ಉಂಟು ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಮೇಷ ರಾಶಿಯ ಹತ್ತನೇ ಮನೆಗೆ ಶನಿ ಅಧಿಪತಿಯಾದರೆ, ಐದನೇ ಮನೆಗೆ ಸೂರ್ಯ. ಈ ರಾಶಿಯವರಿಗೆ ಶನಿ ಮತ್ತು ಸೂರ್ಯ ಇಬ್ಬರೂ ಮಂಗಳವನ್ನುಂಟು ಮಾಡುತ್ತಾರೆ. ಈ ರಾಶಿಯವರ ಆದಾಯ, ಆದಾಯದ ಮೂಲಗಳು ಸಹ ಹೆಚ್ಚಾಗುತ್ತವೆ. ಸಮಾಜದಲ್ಲಿ ಗೌರವ ಅಧಿಕವಾಗಲಿದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗಿನ ಸಂಬಂಧವೂ ಸುಧಾರಿಸುತ್ತದೆ. ಈ ಅವಧಿಯಲ್ಲಿ ಪ್ರಾರಂಭಿಸಿದ ಕೆಲಸವು ದೀರ್ಘಾವಧಿಯಲ್ಲಿ ಲಾಭವನ್ನು ನೀಡುತ್ತದೆ.
ಕನ್ಯಾ ರಾಶಿ : ಶನಿ ಕನ್ಯಾ ರಾಶಿಯ ಐದನೇ ಮನೆ ಮತ್ತು ಸೂರ್ಯ ಆರನೇ ಮನೆಯ ಅಧಿಪತಿ. ಎರಡೂ ಗ್ರಹಗಳ ಯೋಗ ಆರನೇ ಮನೆಯಲ್ಲಿ ನಿರ್ಮಾಣವಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಕನ್ಯಾ ರಾಶಿಯವರಿಗೆ ಶನಿ ಮತ್ತು ಸೂರ್ಯನ ಸಂಯೋಜನೆಯು ಶುಭಕರವಾಗಿದೆ. ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಪ್ರಯೋಜನ ಪಡೆಯಬಹುದು.
ಧನು ರಾಶಿ : ಧನು ರಾಶಿಯ ಒಂಬತ್ತನೆ ಮನಗೆ ಸೂರ್ಯ ಮತ್ತು ಎರಡು ಮತ್ತು ಮೂರನೇ ಮನೆಯ ಅಧಿಪತಿ ಶನಿ. ಈ ಸೂರ್ಯ ಮತ್ತು ಶನಿಯ ಸಂಯೋಜನೆಯು ಮೂರನೇ ಮನೆಯಲ್ಲಿ ಸಂಭವಿಸುತ್ತದೆ. ಇದರಿಂದ ಈ ರಾಶಿಯವರ ಶೌರ್ಯ ಮತ್ತು ಧೈರ್ಯವು ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡುವುದಾದರೂ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)