Vivek Agnihotri Pathaan song : ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಹಲವು ವರ್ಷಗಳ ನಂತರ ಕಿಂಗ್‌ಖಾನ್‌ನನ್ನು ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ನಡುವೆ ಚಿತ್ರದ ʼಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಬಟ್ಟೆಗೆ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದ ಚಿತ್ರ ದೊಡ್ಡ ವಿವಾದಕ್ಕೆ ಗುರಿಯಾಗಿತ್ತು. ಇದೀಗ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಪಠಾಣ್ ಸಾಂಗ್ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.
ಹಲವಾರರು ವರ್ಷಗಳ ನಂತರ ಎಸ್‌ಆರ್‌ಗೆ ಪಠಾಣ್ ಚಿತ್ರದ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಸಿನಿಮಾದಲ್ಲಿ ಆಕ್ಷನ್, ಡ್ರಾಮಾ ಜೊತೆಗೆ ರೊಮ್ಯಾನ್ಸ್ ಕೂಡ ಹೆಚ್ಚಿದೆ. ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಹಿಟ್ ಆಗಿವೆ. ಅವುಗಳಲ್ಲಿ ಒಂದು ಸಾಂಗ್ ಸಂಚಲನವನ್ನು ಸೃಷ್ಟಿಸಿತು. ಯಸ್ ಆ ಸಾಂಗ್ ಯಾವುದು ಅಂತ ನಿಮ್ಗೆ ಗೊತ್ತೇ ಇದೆ. ಅದೇ ಬೇಷರಂ ರಂಗ್ ಹಾಡಿನ ಬಗ್ಗೆ ಮಾತನಾಡುತ್ತಿದ್ದೇವೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ರಾಜಕೀಯ ವಲಯದಿಂದಲೂ ಈ ಹಾಡಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ವಿಡಿಯೋ ಒಂದು ಶೇರ್ ಮಾಡುವ ಮೂಲಕ ಬೇಷರಂ ರಂಗ್ ಹಾಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
WARNING:#PnV video against Bollywood. Don’t watch it if you are a Secular. pic.twitter.com/7wKPX4A8Ev
— Vivek Ranjan Agnihotri (@vivekagnihotri) December 28, 2022
ಇದನ್ನೂ ಓದಿ: Rashmika Mandanna : ಸೌತ್ ಇಂಡಸ್ಟ್ರಿಗಿಂತ ಬಾಲಿವುಡ್ ಸಾಂಗ್ಸ್ ಬೆಸ್ಟ್..! ಮತ್ತೇ ಕಿರಿಕ್ ಹೇಳಿಕೆ ನೀಡಿದ ರಶ್ಮಿಕಾ
विवेक जी यह आपकी ही बनाई हुई पारिवारिक फिल्म है न ? pic.twitter.com/mfHe95adjW
— Kushagra ( Fan Account ) (@Kushagr1117) December 28, 2022
ಇತ್ತೀಚೆಗೆ ಟ್ವೀಟ್ ಮೂಲಕ ವಿವೇಕ್ ಅಗ್ನಿಹೋತ್ರಿ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅವರ ಬೇಷರಂ ರಂಗ್ ಹಾಡಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಚಲನಚಿತ್ರಗಳಲ್ಲಿ ಅಶ್ಲೀಲತೆಯ ಬಗ್ಗೆ ಮಾತನಾಡಿರುವ ಯುವತಿಯೊಬ್ಬಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಒಂದು ಬದಿಯಲ್ಲಿ ಯುವತಿಯ ಮಾತು ಇನ್ನೊಂದು ಬದಿಯಲ್ಲಿ ಬೇಷರಮ್ ರಂಗ್ ಹಾಡನ್ನು ಪ್ಲೇ ಮಾಡಿದ್ದಾರೆ. ಶೀರ್ಷಿಕೆಯಲ್ಲಿ, "ಎಚ್ಚರಿಕೆ: ಬಾಲಿವುಡ್ ವಿರುದ್ಧ #PnV ವೀಡಿಯೊ. ನೀವು ಸೆಕ್ಯುಲರ್ ಆಗಿದ್ದರೆ ಇದನ್ನು ನೋಡಬೇಡಿ" ಎಂದು ಬರೆದಿದ್ದಾರೆ.
ಇನ್ನು ಅಗ್ನಿಹೋತ್ರಿ ಅವರ ಟ್ಟೀಟ್‌ಗೆ ನೆಟ್ಟಿಗರು ಗರಂ ಆಗಿದ್ದು, ಅವರ ಹಳೆಯ ಸಿನಿಮಾ ಹೇಟ್ ಸ್ಟೋರಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ, ಇದು ನಿಮ್ಮ ಸಿನಿಮಾ ಅಲ್ಲವೆ ಅಂತ ಕಾಲೆಳೆದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಇತ್ತೀಚೆಗೆ ತಮ್ಮ ವೈ-ಕ್ಯಾಟಗರಿ ಭದ್ರತಾ ಸಿಬ್ಬಂದಿ ಜೊತೆಗೆ ವಾಕಿಂಗ್ ಹೋಗಿದ್ದ ವೀಡಿಯೊವನ್ನು ಹಂಚಿಕೊಂಡಿದ್ದರು. ಆ ವಿಡಿಯೋಗೆ ನೆಟ್ಟಿಗರು ವ್ಯಂಗ್ಯವಾಡಿದ್ದರು. ಅಲ್ಲದೆ, ಸಖತ್ ಟ್ರೋಲ್ ಆಗಿತ್ತು. ದಿ ಕಾಶ್ಮೀರ್ ಫೈಲ್ಸ್ ಬಿಡುಗಡೆಯಾದ ನಂತರ ಅವರಿಗೆ ಅದೇ Y ಕ್ಯಾಟಗರಿ ಭದ್ರತೆ ನೀಡಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.