Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು, ಧನಲಾಭವಾಗಲಿದೆ

Astrology Today (28-12-2022): ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ತುಲಾ ರಾಶಿಯವರಿಗೆ ಹೊಸ ಆಸ್ತಿಯಿಂದ ಲಾಭವಾಗಲಿದೆ. ಧನು ರಾಶಿಯವರಿಗೆ ಹಣದ ಖರ್ಚು ಹೆಚ್ಚಾಗಲಿದೆ.

Written by - Zee Kannada News Desk | Last Updated : Dec 28, 2022, 05:55 AM IST
  • ಮೇಷ ರಾಶಿಯವರು ಉದ್ಯೋಗ ಮತ್ತು ವ್ಯಾಪಾರ ಮಾರ್ಗವನ್ನು ಬದಲಾಯಿಸಬಾರದು
  • ಕರ್ಕಾಟಕ ರಾಶಿಯವರು ಹಿರಿಯರ ಸಲಹೆ ಮೇರೆಗೆ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಿ
  • ಕುಂಭ ರಾಶಿಯವರ ಆಸೆಗಳು ಈಡೇರಲಿವೆ, ನಿಮ್ಮ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು, ಧನಲಾಭವಾಗಲಿದೆ title=
ಇಂದಿನ ರಾಶಿ ಭವಿಷ್ಯ

Horoscope Today (28-12-2023): ವೃಷಭ ರಾಶಿಯವರು ದೂರ ಪ್ರಯಾಣ ಹೋಗಲಿದ್ದಾರೆ. ಕರ್ಕಾಟಕ ರಾಶಿಯವರು ವಾಹನ ಚಾಲನೆ ಮಾಡುವಾಗ ನಿರ್ಲಕ್ಷ್ಯ ಮಾಡಬೇಡಿ. ಬುಧವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಉದ್ಯೋಗ ಮತ್ತು ವ್ಯಾಪಾರ ಮಾರ್ಗವನ್ನು ಬದಲಾಯಿಸಬೇಡಿ. ಯಾರಿಗೂ ಸಾಲ ಕೊಡಬೇಡಿ. ಸ್ನೇಹಿತರೊಂದಿಗೆ ಬೆರೆಯುವಿರಿ. ಸಿಹಿತಿಂಡಿಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಮರೂನ್

ವೃಷಭ ರಾಶಿ: ದೂರ ಪ್ರಯಾಣ ಹೋಗುವಿರಿ. ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಈ ದಿನವು ಒತ್ತಡದಿಂದ ಕೂಡಿರುತ್ತದೆ. ಉಣ್ಣೆಯ ಬಟ್ಟೆಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ - ಗುಲಾಬಿ

ಮಿಥುನ ರಾಶಿ: ನಿಮಗೆ ಅಣ್ಣನ ಬೆಂಬಲ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಜಗಳವಾಡಬೇಡಿ. ಪ್ರಯಾಣ ಲಾಭದಾಯಕವಾಗಲಿದೆ. ಮೊಸರಿನ ಜೊತೆಗೆ ಖಿಚಡಿಯನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ನೀಲಿ

ಕರ್ಕಾಟಕ ರಾಶಿ: ಹಿರಿಯರ ಸಲಹೆಯ ಮೇರೆಗೆ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಿ. ಚಾಲನೆ ಮಾಡುವಾಗ ನಿರ್ಲಕ್ಷ್ಯ ಮಾಡಬೇಡಿ. ಸಮಾಜದಲ್ಲಿ ನಿಮಗೆ ಗೌರವ ಸಿಗಲಿದೆ. ಮನೆಯಲ್ಲಿ ಶುದ್ಧ ತುಪ್ಪದ ದೀಪವನ್ನು ಹಚ್ಚಿ.

ಅದೃಷ್ಟದ ಬಣ್ಣ- ಕೇಸರಿ

ಇದನ್ನೂ ಓದಿ:  Shani Dev: ಈ ಜನರಿಗೆ ಶನಿ ಎಂದಿಗೂ ಕಾಟ ಕೊಡುವುದಿಲ್ಲ, ಕಾರಣ ಇಲ್ಲಿದೆ

ಸಿಂಹ ರಾಶಿ: ಸಂಜೆ ಸಮಯಕ್ಕೆ ಸರಿಯಾಗಿ ಮನೆ ತಲುಪಿ. ಬೇರೆಡೆ ಸಾಲವಾಗಿ ನೀಡಿರುವ ಹಣ ವಾಪಸ್ ಸಿಗಲಿದೆ. ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಿ. ನಿಮ್ಮ ಮಕ್ಕಳಿಂದ ಹಣ್ಣುಗಳನ್ನು ದಾನ ಮಾಡಿಸಿರಿ.

ಅದೃಷ್ಟದ ಬಣ್ಣ- ಓಚರ್

ಕನ್ಯಾ ರಾಶಿ: ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ದಿಢೀರ್ ಹಣ ಸಿಗಲಿದೆ. ತಂದೆಯ ಬೆಂಬಲ ಸಿಗಲಿದೆ. ಹಸಿರು ತರಕಾರಿಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ - ಕಿತ್ತಳೆ

ತುಲಾ ರಾಶಿ: ಹೊಸ ಆಸ್ತಿಯಿಂದ ಲಾಭವಾಗಲಿದೆ. ಸಂತತಿಯಿಂದ ಸುಖ ಸಿಗಲಿದೆ. ನಿಮ್ಮ ಹೆತ್ತವರೊಂದಿಗೆ ಕೋಪಗೊಳ್ಳಬೇಡಿ. ಖೀರ್ ದಾನ ಮಾಡಿ.

ಅದೃಷ್ಟದ ಬಣ್ಣ - ಬೂದು

ವೃಶ್ಚಿಕ ರಾಶಿ: ನೀವು ದೂರ ಪ್ರಯಾಣ ಹೋಗುವಿರಿ. ನಿಮ್ಮ ಪ್ರೀತಿ ಯಶಸ್ವಿಯಾಗುತ್ತದೆ. ನಿಮ್ಮ ಮನಸ್ಸನ್ನು ನಿಯಂತ್ರಿಸಿ. ವಯಸ್ಸಾದವರಿಗೆ ಹಳದಿ ಹಣ್ಣುಗಳನ್ನು ನೀಡಿ.

ಅದೃಷ್ಟದ ಬಣ್ಣ - ಬಿಳಿ

ಇದನ್ನೂ ಓದಿ: Rahu Transit 2023: ಮುಂದಿನ ವರ್ಷ ರಾಹು ಸಂಕ್ರಮಣ, ಈ ಒಂದು ರಾಶಿಯ ಮೇಲೆ ಹೆಚ್ಚು ಪರಿಣಾಮ!

ಧನು ರಾಶಿ: ನಿಮ್ಮ ಜೀವನದಲ್ಲಿ ಸಂತೋಷದ ಅಲೆ ಇರುತ್ತದೆ. ನಿಮಗೆ ಮಗುವಿನ ಭಾಗ್ಯ ಸಿಗಲಿದೆ. ಹಣದ ಖರ್ಚು ಹೆಚ್ಚಾಗಲಿದೆ. ಕುಂಕುಮದ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿರಿ.

ಅದೃಷ್ಟದ ಬಣ್ಣ- ಕೆಂಪು

ಮಕರ ರಾಶಿ: ತುರ್ತು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ನಿಮ್ಮ ತಂದೆಯ ಸಲಹೆಯನ್ನು ತೆಗೆದುಕೊಳ್ಳಿ. ಸಂಬಂಧಗಳಲ್ಲಿ ನಿರ್ಲಕ್ಷ್ಯ ಬೇಡ. ಗುಲಾಬಿ ಬಟ್ಟೆಯನ್ನು ದಾನ ಮಾಡಿ.

ಅದೃಷ್ಟದ ಬಣ್ಣ - ಗುಲಾಬಿ

ಕುಂಭ ರಾಶಿ: ನಿಮ್ಮ ಹಳೆಯ ಆಸೆಗಳು ಈಡೇರಲಿದೆ. ನಿಮ್ಮ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ವ್ಯಾಪಾರ ಬದಲಾವಣೆಯ ಮುನ್ಸೂಚನೆ ಇದೆ. ಬೂಟುಗಳು ಮತ್ತು ಚಪ್ಪಲಿಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಕಂದು

ಮೀನ ರಾಶಿ: ನಿಮ್ಮಲ್ಲಿ ಮಾನಸಿಕ ಒತ್ತಡ ಉಳಿಯುತ್ತದೆ. ಹಿರಿಯರ ಸಲಹೆ ಪಡೆಯಿರಿ. ಸಂಬಂಧದಲ್ಲಿ ಬಿರುಕು ಕಾಣಿಸುತ್ತದೆ. ಹಳದಿ ಸಿಹಿ ಮತ್ತು ಅನ್ನವನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಮರೂನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News