ಸಂಕಷ್ಟಿ ಚತುರ್ಥಿಯಾದ ಇಂದು ಎರಡು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗ. ಈ ಯೋಗವು ಕೆಲವು ರಾಶಿಯ ಜನರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.
ಬೆಂಗಳೂರು : ಹಿಂದೂ ಧರ್ಮದಲ್ಲಿ, ಎಲ್ಲಾ ಚತುರ್ಥಿ ದಿನಾಂಕಗಳನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಇವುಗಳನ್ನು ವಿನಾಯಕ ಚತುರ್ಥಿ ಮತ್ತು ಸಂಕಷ್ಟಿ ಚತುರ್ಥಿ ಎಂದು ಕರೆಯಲಾಗುತ್ತದೆ. ಇಂದು, ಡಿಸೆಂಬರ್ 26 ಸೋಮವಾರದಂದು ಸಂಕಷ್ಟಿ ಚತುರ್ಥಿ. ಈ ದಿನ ಗಣೇಶನ ಹೆಸರಿನಲ್ಲಿ ಉಪವಾಸ ಮಾಡಲಾಗುತ್ತದೆ. ಇದು ವರ್ಷದ ಕೊನೆಯ ಸಂಕಷ್ಟಿ ಚತುರ್ಥಿ. ಸಂಕಷ್ಟಿ ಚತುರ್ಥಿ ಉಪವಾಸವನ್ನು ಕೈಗೊಳ್ಳುವುದರಿಂದ ಗಣೇಶ ಎಲ್ಲಾ ರೀತಿಯ ದುಃಖಗಳನ್ನು ತೊಡೆದುಹಾಕಿ, ಅಪಾರ ಸಂತೋಷ ಮತ್ತು ಸಮೃದ್ದಿ ಕರುಣಿಸುತ್ತಾನೆ ಎನ್ನುವುದು ನಂಬಿಕೆ. ಸಂಕಷ್ಟಿ ಚತುರ್ಥಿಯಾದ ಇಂದು ಎರಡು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗ. ಈ ಯೋಗವು ಕೆಲವು ರಾಶಿಯ ಜನರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಇದರೊಂದಿಗೆ, ಈ ಯೋಗಗಳಲ್ಲಿ ಮಾಡಿದ ಪೂಜೆಯ ಫಲ ಬಹಳ ಬೇಗನೆ ಲಭಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೃಷಭ ರಾಶಿ : ಇಂದು ನಿಮಗೆ ಅದ್ಭುತ ದಿನವಾಗಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ನೀವು ನಿರೀಕ್ಷೆ ಮಾಡುವ ಕೆಲಸಗಳು ಕೈ ಗೂಡ ಲಿವೆ. ಹಿರಿಯರ ಸಲಹೆ ಮೇರೆಗೆ ಕೆಲಸ ಮಾಡಿದರೆ ಉಪಯೋಗವಾಗಲಿದೆ. ನಿಮ್ಮ ಆಸೆಗಳು ಈಡೇರಲಿವೆ.
ಕನ್ಯಾ ರಾಶಿ : ಗಣೇಶನ ಆಶೀರ್ವಾದ ಪಡೆದು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಇಂದು ಯಶಸ್ವಿ ದಿನವಾಗಲಿದೆ.
ವೃಶ್ಚಿಕ ರಾಶಿ : ದೀರ್ಘಕಾಲದ ಅಡೆತಡೆಗಳು ಕೊನೆಗೊಳ್ಳಬಹುದು. ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ನೀವು ಏನೇ ಕೆಲಸ ಮಾಡಿದರೂ ಧನಾತ್ಮಕ ಪರಿಣಾಮ ಸಿಗಲಿದೆ. ಗ್ಲಾಮರ್‌ಗೆ ಸಂಬಂಧಿಸಿದ ಜನರಿಗೆ ಭಾರೀ ಲಾಭವಾಗಲಿದೆ.
ಕುಂಭ ರಾಶಿ : ಅದೃಷ್ಟದ ನೆರವಿನಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಲಾಭವಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)