Vedha review : ಏನ್ರೀ... ಶಿವಣ್ಣ ನ ಎನರ್ಜಿ..! ಎನರ್ಜಿಗೆನೇ ಎನರ್ಜಿ ಕೊಡೊ ಅದ್ಭುತ ಕಲಾವಿದ ಅಂದ್ರೆ ಅದು ಹ್ಯಾಟ್ರಿಕ್ ಹೀರೋ ಶಿವಣ್ಣ. ಯೆಸ್ ಫೈನಲಿ ಡಾ.ಶಿವರಾಜ್ ಕುಮಾರ್ ನಟನೆಯ 125ನೇ ವೇದ ಸಿನಿಮಾ ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿದಿದೆ. ಹರ್ಷ ಮತ್ತು ಶಿವರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಬಂದ ಈ ಸಿನಿಮಾವನ್ನು ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ಇದು ‘ಹ್ಯಾಟ್ರಿಕ್ ಹೀರೋ’ ನಟನೆಯ 125ನೇ ಸಿನಿಮಾ ಅನ್ನೋದು ದೊಡ್ಡ ವಿಶೇಷ. ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಉಮಾಶ್ರೀ, ಶ್ವೇತಾ ಚೆಂಗಪ್ಪ, ಲಾಸ್ಯಾ ನಾಗರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಮೂರು ಕಾಲಘಟ್ಟದಲ್ಲಿ ‘ವೇದ’ ಸಿನಿಮಾದ ಕಥೆ ಸಾಗುತ್ತದೆ. 2021,1985 ಹಾಗೂ 1965ರ ಕಾಲಘಟ್ಟಗಳನ್ನು ಸಿನಿಮಾ ಹೊಂದಿದೆ. ಫೈಟಿಂಗ್ ಸೀನ್ ಮೂಲಕ ಶಿವಣ್ಣ ಎಂಟ್ರಿ ಕೊಡ್ತಾ ಇದ್ರೆ ಸೀಟ್ ನಲ್ಲಿ ಫೈರ್ ಏಳೋ ಫೀಲ್ ಖಂಡಿತ ಆಗುತ್ತೆ. ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ..’ ಹಾಗೂ ‘ಪುಷ್ಪ ಪುಷ್ಪ..’ ಹಾಡುಗಳನ್ನ ತೆರೆಯ ಮೇಲೆ ನೋಡೋ ಕಿಕ್ ಅಬ್ಬಬ್ಬಾ..!
ಇದನ್ನೂ ಓದಿ: VEDHA: ಶಿವಣ್ಣ 125ನೇ ಸಿನಿಮಾ ‘ವೇದ’ ಸಿಕ್ತು ಅದ್ಧೂರಿ ಓಪನಿಂಗ್, ಅಭಿಮಾನಿಗಳಿಂದ ಹೋಮ
ಫೈಟ್ಗಳ ಮೂಲಕ ಶಿವಣ್ಣ ಎಂಟರ್ಟೇನ್ ಮಾಡ್ತಾರೆ. ಅದಿತಿ ಸಾಗರ್ ಮತ್ತು ಶಿವಣ್ಣನ ಕಾಂಬೋ ಥ್ರಿಲ್ ಕೊಡುತ್ತೆ. ಅದಿತಿ ಸಾಗರ್ ತಮ್ಮ ಮೊದಲ ಸಿನಿಮಾದಲ್ಲೇ ಭರ್ಜರಿಯಾಗಿ ಮನರಂಜಿಸಿದ್ದಾರೆ. ನಟಿ ಗಾನವಿ ಲಕ್ಷ್ಮಣ್ ಅವರಿಗೆ ಎರಡು ಶೇಡ್ನ ಪಾತ್ರ ಇದೆ. ಆ ಎರಡು ಶೇಡ್ ಗಳಲ್ಲೂ ಗಾನವಿ ಪುಷ್ಪ ಆಗಿ ಜೀವಿಸಿರೋದು ಸ್ಕ್ರೀನ್ ಮೇಲೆ ಹೈಲೈಟ್ ಆಗಿ ಕಾಣಸಿಗುತ್ತೆ. ವೇಶ್ಯೆ ಪಾತ್ರದಲ್ಲಿ ಶ್ವೇತ ಚಂಗಪ್ಪ ನಟಿಸಿ ಧೂಳೆಬ್ಬಿಸಿದ್ದಾರೆ. ಹೆಣ್ಣಿನ ಮಹತ್ವ ಸಾರುವ ಸಿನಿಮಾ ವೇದ ಅಂದ್ರೆ ತಪ್ಪಾಗಲ್ಲ ನೋಡಿ.
ವೇದ ಸಿನಿಮಾ ನಿಜಕ್ಕೂ ನಿಮ್ಮನ್ನ ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗೋದ್ರಲ್ಲಿ ಅನುಮಾನವೇ ಇಲ. ವಯಸ್ಸು 60ಆದ್ರು ಶಿವಣ್ಣ ಖದರ್, ಡ್ಯಾನ್ಸ್, ಫೈಟ್, ಡೈಲಾಗ್ ಯಪ್ಪಾ ಯಪ್ಪಾ ಅನ್ನುವ ಹಾಗಿದೆ. ಡೈರೆಕ್ಟರ್ ಹರ್ಷ ನಿಜಕ್ಕೂ ಇಲ್ಲಿ ಮಾಯಲೋಕವನ್ನೇ ಸೃಷ್ಟಿಸಿದ್ದಾರೆ. ಶಿವಣ್ಣನ 125 ಸಿನಿಮಾಗಳಲ್ಲಿ ವೇದದಲ್ಲಿ ಕಂಪ್ಲೀಟ್ ಲುಕ್ ಬೇರೇನೇ. ಸೋ ಇನ್ಯಾಕೆ ತಡ ಓಡೋಡಿ ಬಂದು ಸಿನಿಮಾ ನೋಡಿ ಎಂಜಾಯ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.