Drinking Water After Fruits: ಇಂದಿನ ಓಟದ ಜೀವನದಲ್ಲಿ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವಷ್ಟು ಕೂಡ ಸಮಯವಿರುವುದಿಲ್ಲ. ನಮ್ಮಲ್ಲಿ ಎಷ್ಟೋ ಮಂದಿ ತಮ್ಮ ಆಹಾರದ ಬಗ್ಗೆಯೂ ಸೂಕ್ತ ಗಮನಹರಿಸುವುದಿಲ್ಲ. ಆ ಕ್ಷಣಕ್ಕೆ ಯಾವುದು ಸುಲಭವಾಗಿ ಲಭ್ಯವೋ ಅದನ್ನು ತಿಂದು ಸುಮ್ಮನಾಗುತ್ತಾರೆ. ಅದೆಷ್ಟೋ ಮಂದಿಗೆ ಹಾಲು, ಹಣ್ಣು ಇವೇ ಅವರ ಬ್ರೇಕ್ ಫಾಸ್ಟ್, ಡಿನ್ನರ್. ಹಾಲು-ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ, ಕೆಲವರಿಗೆ ಹಣ್ಣು ತಿಂದ ಬಳಿಕ ನೀರು ಕುಡಿಯುವ ಅಭ್ಯಾಸವಿರುತ್ತದೆ. ಹಣ್ಣು, ನೀರು ಎಲ್ಲವೂ ಉತ್ತಮ ಆರೋಗ್ಯಕ್ಕೆ ಆಧಾರವಾದರೂ ಇವೆರಡನ್ನೂ ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೇ? ಎಂದು ಎಂದಾದರೂ ಯೋಚಿಸಿದ್ದೀರಾ?
ಆಹಾರ ತಜ್ಞರ ಪ್ರಕಾರ, ಹಣ್ಣು ಸೇವನೆ ಬಳಿಕ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ. ಯಾವುದೇ ಹಣ್ಣು ತಿಂದ ತಕ್ಷಣ ನೀರು ಏಕೆ ಕುಡಿಯಬಾರದು ಎಂದು ತಿಳಿಯಿರಿ...
ಯಾವುದೇ ಹಣ್ಣು ತಿಂದ ತಕ್ಷಣ ನೀರು ಏಕೆ ಕುಡಿಯಬಾರದು?
ಅತಿಸಾರ:
ಯಾವುದೇ ಹಣ್ಣಿನಲ್ಲಿ ನೀರಿನ ಅಂಶ ಇರುತ್ತದೆ. ಕೆಲವು ಹಣ್ಣುಗಳಲ್ಲಿ ಇದು ಹೆಚ್ಚಿರುತ್ತದೆ. ವೈದ್ಯರ ಪ್ರಕಾರ, ನೀರು ಭರಿತ ಹಣ್ಣಿನ ಸೇವನೆ ಬಳಿಕ ನೀರು ಸೇವಿಸಬಾರದು. ಇದರಿಂದ ಅತಿಸಾರದಂತಹ ಸಮಸ್ಯೆ ಉಂಟಾಗಬಹುದು. ಇದು ಅಸಿಡಿಟಿ, ಗ್ಯಾಸ್ ಮತ್ತು ವಾಂತಿ-ಭೇದಿ ಸಮಸ್ಯೆಗೂ ಕಾರಣವಾಗಬಹುದು.
ಇದನ್ನೂ ಓದಿ- Asthma Symptoms: ಚಳಿಗಾಲದಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಜೀರ್ಣಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ:
ಯಾವುದೇ ವಾಟರ್ ಕಂಟೆಂಟ್ ಹೆಚ್ಚಿರುವ (ವಾಟರ್ ಮೆಲನ್) ಹಣ್ಣನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಅದು ಜೀರ್ಣಕ್ರಿಯಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಇದನ್ನೇ ರೂಢಿಸಿಕೊಂಡರೆ ದೀರ್ಘಾವಧಿಯಲ್ಲಿ ಇದು ನಿಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಜೀರ್ಣಕಾರಿ ಕಿಣ್ವಗಳು:
ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಋಣಾತ್ಮಕ ಪರಿಣಾಮ ಬೀರುತ್ತದೆ. ಇದರ ಪರಿಣಾಮ ನಿಮ್ಮ ಆರೋಗ್ಯದ ಮೇಲೂ ಕಂಡು ಬರುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆ, ಎದೆಯುರಿ:
ಯಾವುದೇ ಹುಳಿ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್, ಎದೆಯುರಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ- ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಯನ್ನು ಈ ರೀತಿ ಬಳಸಿ
ಹಣ್ಣು ತಿಂದು ಎಷ್ಟು ಸಮಯದ ಬಳಿಕ ನೀರು ಕುಡಿಯಬೇಕು?
ಯಾವುದೇ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಹಣ್ಣುಗಳನ್ನು ಸೇವಿಸಿದ ಕನಿಷ್ಠ ಅರ್ಧ ಗಂಟೆ ಬಳಿಕ ನೀರು ಕುಡಿಯಬಹುದು.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.