Students appeal to CM Bommai: “ಸಿಎಂ ಅಂಕಲ್… ಬಸ್ ವ್ಯವಸ್ಥೆ ಮಾಡದಿದ್ದರೆ ಶಾಲೆಗೆ ಹೋಗಲ್ಲ”

Students appeal to CM Bommai: ಕಳೆದ ನಾಲ್ಕು ದಿನಗಳ ಹಿಂದೆ ಹನೂರು ತಾಲೂಕಿನ ಬೈಲೂರು ಸಮೀಪದ ಅರೇಕಾಡುವಿನ ದೊಡ್ಡಿ ಹಾಗೂ ಕಂಬಿಗುಡ್ಡೆ ಗ್ರಾಮದ ಶಾಲಾ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಶಾಸಕರು ಸಹ ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

Written by - Zee Kannada News Desk | Edited by - Bhavishya Shetty | Last Updated : Dec 12, 2022, 11:06 AM IST
    • “ಕೆಎಸ್ಆರ್ಟಿಸಿ ಬಸ್ ಬಾರದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ ಸಿಎಂ ಅಂಕಲ್”
    • ಹನೂರು ತಾಲೂಕು ವ್ಯಾಪ್ತಿಯ ಶಾಲಾ ಮಕ್ಕಳ ಪಟ್ಟು
    • ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದರು
Students appeal to CM Bommai: “ಸಿಎಂ ಅಂಕಲ್… ಬಸ್ ವ್ಯವಸ್ಥೆ ಮಾಡದಿದ್ದರೆ ಶಾಲೆಗೆ ಹೋಗಲ್ಲ” title=
Basavaraj Bommai

Students appeal to CM Bommai: ಚಾಮರಾಜನಗರ: “ನಾಳೆಯಿಂದ ಅರೆಕಾಡುವಿನ ದೊಡ್ಡಿ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಬಾರದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ ಸಿಎಂ ಅಂಕಲ್” ಎಂದು ಹನೂರು ತಾಲೂಕು ವ್ಯಾಪ್ತಿಯ ಶಾಲಾ ಮಕ್ಕಳು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ಸಮ್ಮತಿ

ಕಳೆದ ನಾಲ್ಕು ದಿನಗಳ ಹಿಂದೆ ಹನೂರು ತಾಲೂಕಿನ ಬೈಲೂರು ಸಮೀಪದ ಅರೇಕಾಡುವಿನ ದೊಡ್ಡಿ ಹಾಗೂ ಕಂಬಿಗುಡ್ಡೆ ಗ್ರಾಮದ ಶಾಲಾ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಶಾಸಕರು ಸಹ ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇಷ್ಟಾದರೂ ಸಹ ಗ್ರಾಮಕ್ಕೆ ಇನ್ನೂ ಬಸ್ ಸಂಚಾರ ಪ್ರಾರಂಭ ಮಾಡದೆ ಇರುವುದರಿಂದ 40  ವಿದ್ಯಾರ್ಥಿಗಳು ನಾಳೆಯಿಂದ ಶಾಲೆಗೆ ಹೋಗದಿರಲು ತೀರ್ಮಾನಿಸಿದ್ದಾರೆ.

9ನೇ ತರಗತಿ ವಿದ್ಯಾರ್ಥಿನಿ ಹರ್ಷಿಣಿ ಮಾತನಾಡಿ “ಸಿಎಂ ಅಂಕಲ್, ಹೆಣ್ಣು ಮಕ್ಕಳು ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂದು ನೀವೇ ತಿಳಿಸುತ್ತೀರಿ. ಆದರೆ ನೀವು ಎಲ್ಲ ಗ್ರಾಮಗಳಿಗೂ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು. ನಮ್ಮ ಗ್ರಾಮದಿಂದ ಬೈಲೂರು ಗ್ರಾಮದ ಶಾಲೆಗೆ ಪ್ರತಿದಿನ ಆರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದೇವೆ. ದಾರಿಯಲ್ಲಿ ಕಾಡುಹಂದಿ, ಆನೆ ಸೇರಿದಂತೆ ಇತರ ವನ್ಯ ಪ್ರಾಣಿಗಳು ಕಾಡು ದಾರಿಯಲ್ಲಿ ಸಿಗುತ್ತದೆ ಪ್ರತಿ ದಿನ ಭಯದಲ್ಲೇ ಶಾಲೆಗೆ ಹೋಗುತ್ತಿದ್ದೇವೆ. ಎರಡು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿರುವರಿಂದ ಪುಸ್ತಕ, ಬಟ್ಟೆ ಎಲ್ಲ ಒದ್ದೆ ಆಗುತ್ತಿದೆ. ಆದ್ದರಿಂದ ಸಿಎಂ ಅಂಕಲ್ ನಾಳೆ ನೀವು ಹನೂರು ಕ್ಷೇತ್ರಕ್ಕೆ ಬರುತ್ತಿದ್ದೀರಿ. ನಮ್ಮ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಿ” ಎಂದು ಮನವಿ ಮಾಡಿದ್ದಾಳೆ.

ಇದನ್ನೂ ಓದಿ: ಚಳಿಗಾಲದ ಅಧಿವೇಶದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡನೆ-ಸಿಎಂ ಬೊಮ್ಮಾಯಿ

ಗ್ರಾಮದಲ್ಲಿ ಹಿಂದುಳಿದ ವರ್ಗದ ಆದಿವಾಸಿ ಜನಾಂಗದ ವಿದ್ಯಾರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News