ಬೆಂಗಳೂರು : ಕಾರು ಖರೀದಿಸಬೇಕು ಎನ್ನುವುದು ಪ್ರತಿಯೊಬ್ಬನ ಆಸೆಯಾಗಿರುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕಾರು ಮನುಷ್ಯನ ಅವಶ್ಯಕತೆ ಎಂದರೂ ತಪ್ಪಲ್ಲ. ಕಾರು ಖರೀದಿಸುವಾಗ ಹೆಚ್ಚಿನವರು ಬ್ಯಾಂಕ್ ಲೋನ್ ಮಾಡುತ್ತಾರೆ. ನಂತರ ತಿಂಗಳ ಇಎಂಐ ಮೂಲಕ ಬ್ಯಾಂಕಿಗೆ ಸಾಲದ ಮರು ಪಾವತಿ ಮಾಡಲಾಗುತ್ತದೆ. ಹೀಗೆ ಸಾಲ ಪಡೆದವರು ಪಾವತಿಸುವ ಇಎಂಐ ಯಲ್ಲಿ ಕಾರಿನ ಬೆಲೆ ಮತ್ತು ಬಡ್ಡಿ ಎರಡನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ. ಯಾವ ಬ್ಯಾಂಕಿನಿಂದ ಲೋನ್ ಪಡೆದರೂ ಅದಕ್ಕೆ ಬಡ್ಡಿ ಪಾವತಿಸುವುದು ಅನಿವಾರ್ಯ. ಬಡ್ಡಿ ಇಲ್ಲದೆ ಯಾವ ಬ್ಯಾಂಕ್ ಕೂಡಾ ಲೋನ್ ನೀಡುವುದಿಲ್ಲ. ಆದರೆ, ನಾವು ಹೇಳುವ ವಿಧಾನವನ್ನು ಅನುಸರಿಸಿದರೆ ಹೆಚ್ಚುವರಿಯಾಗಿ ಬಡ್ಡಿ ಹಣ ನಿಮ್ಮ ಜೇಬಿನಿಂದ ಪಾವತಿಸುವ ಅಗತ್ಯವಿರುವುದಿಲ್ಲ. ಈ ವಿಧಾನದ ಮೂಲಕ ನೀವು ಪಾವತಿಸಬೇಕಾದ ಬಡ್ಡಿ ಯ ಮೊತ್ತವು ಬೇರೆ ಕಡೆಯಿಂದ ನಿಮ್ಮ ಕೈ ಸೇರುತ್ತದೆ. ಅಂದರೆ ನಿಮ್ಮ ಜೇಬಿನಿಂದ ನೀವು ಬಡ್ಡಿ ಹಣವನ್ನು ಪಾವತಿಸುವ ಅಗತ್ಯ ಇರುವುದಿಲ್ಲ.
ಕಾರು ಸಾಲ ಮತ್ತು ಬಡ್ಡಿ :
ಒಂದು ವೇಳೆ 5,00,000 ರೂಪಾಯಿ ಕಾರ್ ಲೋನ್ ತೆಗೆದುಕೊಂಡಿದ್ದರೆ ಬ್ಯಾಂಕ್ ಅದರ ಮೇಲೆ 8% ಬಡ್ಡಿಯನ್ನು ವಿಧಿಸುತ್ತದೆ. ಆಕ್ಸಿಸ್ ಬ್ಯಾಂಕ್‌ನ ಲೋನ್ ಕ್ಯಾಲ್ಕುಲೇಟರ್ ಪ್ರಕಾರ, 5 ವರ್ಷಗಳವರೆಗೆ 8% ಬಡ್ಡಿ ದರದಲ್ಲಿ 500000 ರೂಪಾಯಿಗಳ ಕಾರ್ ಲೋನ್ ಪಡೆಯಬೇಕಾದರೆ 1,08,292 ರೂಪಾಯಿ ಬಡ್ಡಿ ಪಾವತಿಸಬೇಕಾಗುತ್ತದೆ. ಅಂದರೆ ತಿಂಗಳಿಗೆ 10,138 ರೂ. ಇಎಂಐ ಪಾವತಿಸಿಕೊಂಡು ಹೋಗಬೇಕು.
ಇದನ್ನೂ ಓದಿ : Investment Tips: ಈ ಸೂಪರ್ ಹಿಟ್ ಯೊಜನೆಯಲ್ಲಿ ನಿತ್ಯ ಕೇವಲ 200 ಹೂಡಿಕೆ ಮಾಡಿ ಬಂಬಾಟ್ ಲಾಭ ಸಿಗುತ್ತೆ
SIP ನಲ್ಲಿ ಹೂಡಿಕೆ ಮಾಡಿ :
ಮೊದಲೇ ಹೇಳಿದ ಹಾಗೆ ಈ ಬಡ್ಡಿ ಹಣವನ್ನು ಉಳಿಸಬೇಕಾದರೆ, ನೀವು ಯಾವಾಗ ಕಾರೂ ಖರೀದಿಸುತ್ತಿರೋ ಆ ತಕ್ಷಣ SIP ಅನ್ನು ಪ್ರಾರಂಭಿಸಿ. ಪ್ರತಿ ತಿಂಗಳು ಅದರಲ್ಲಿ ಹೂಡಿಕೆ ಮಾಡುತ್ತಾ ಬನ್ನಿ. ತಿಂಗಳಿಗೆ 5000 ರೂಪಾಯಿಗಳ SIP ಮಾಡಿ ಅದನ್ನು 5 ವರ್ಷಗಳವರೆಗೆ ಮುಂದುವರಿಸಿದರೆ ಹೂಡಿಕೆಯ ಮೇಲೆ 14% ಲಾಭ ಸಿಗುತ್ತದೆ. ಗ್ರೋವ್‌ನ SIP ಕ್ಯಾಲ್ಕುಲೇಟರ್ ಪ್ರಕಾರ, 5 ವರ್ಷಗಳಲ್ಲಿ 1.36 ಲಕ್ಷ ರೂಪಾಯಿಗಳ ಲಾಭ ಪಡೆಯಬಹುದು. ಈ ಪ್ರಕಾರ ಕಾರ್ ಲೋನ್ ಗೆ ಪಾವತಿಸುವ ಬಡ್ಡಿ ಹಣಕ್ಕಿಂತ 28 ಸಾವಿರ ಅಧಿಕ ಹಣ ಇಲ್ಲಿ ಸಿಗುತ್ತದೆ. ಆದರೆ ಇದು ಮಾರುಕಟ್ಟೆ ಅಪಾಯಗಳನ್ನು ಒಳಗೊಂಡಿರುತ್ತದೆ ಎನ್ನುವುದು ಕೂಡಾ ನೆನಪಿರಲಿ.
ಕಾರ್ ಲೋನ್ ತೆಗೆದುಕೊಳ್ಳುವ ಸಮಯದಲ್ಲಿ SIP ಮಾಡಿ :
ಇಲ್ಲಿ ಸರಳವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಷ್ಟೇ. ಕಾರ್ ಲೋನ್ ತೆಗೆದುಕೊಳ್ಳುವಾಗ, ಅದರೊಂದಿಗೆ SIP ಮಾಡಿ. ತೆಗೆದುಕೊಂಡ ಸಾಲದ ಮೊತ್ತ ಮತ್ತು ಮಾಡಬೇಕಾದ SIP ಮೊತ್ತವನ್ನು ಲೆಕ್ಕ ಹಾಕಿ. ನಂತರ SIPನಿಂದ ಪಡೆದ ಬಡ್ಡಿಯ ಹಣ ಮತ್ತು ಕಾರ್ ಲೋನ್ ಗೆ ಬ್ಯಾಂಕ್‌ಗೆ ಪಾವತಿಸಬೇಕಾದ ಬಡ್ಡಿಯನ್ನು ಸರಿದೂಗಿಸಿ.
ಇದನ್ನೂ ಓದಿ : PM Kisan ₹6OOO ಬೇಕಿದ್ದರೆ ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಖಾತೆಗೆ ಹಣ ಬರುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.