Gujarat Election Result 2022 : ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. 33 ಜಿಲ್ಲೆಗಳ 182 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಇಂದು ಬಹು ನಿರೀಕ್ಷಿತ ಫಲಿತಾಂಶ ಹೊರಬೀಳಲಿದ್ದು, ಪ್ರತಿನಿಧಿಗಳ ಭವಿಷ್ಯ ಬಯಲಾಗಲಿದೆ. ಈಗಾಗಲೇ 5 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಬಿಜೆಪಿ 4 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯಭೇರಿ ಬಾರಿಸಿದೆ.
ಹೌದು.. ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್ನಲ್ಲಿ ಈ ಬಾರಿಯೂ ಕಮಲ ಅರಳಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ, ಅದರಂತೆ ಮತ ಎಣಿಕೆಯ ಆರಂಭದಲ್ಲಿಯೇ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಇದರ ಬೆನ್ನಲ್ಲೆ ಟ್ಟಿಟರ್ನಲ್ಲಿ ʼಇವಿಎಮ್ ಬ್ಯಾನ್ʼ ಎಂಬ ಮಾತುಗಳು ಕೇಳಿಬರುತ್ತಿವೆ. ಗುಜರಾತ್ನಲ್ಲಿಯೂ ಇವಿಎಮ್ ಪ್ರಭಾವದಿಂದ ಬಿಜೆಪಿ ಗೆಲ್ಲಲಿದೆ ಎಂದು ನಟ್ಟಿಗರು ಟ್ಟೀಟ್ ಮಾಡುವ ಮೂಲಕ ದೂರುತ್ತಿದ್ದಾರೆ.́
ಇದನ್ನೂ ಓದಿ: Video: ಹೌದೋ ಹುಲಿಯಾ! ಕಿಕ್ಕಿರಿದ ಬಸ್ ಅನ್ನು ಈ ಹುಡುಗಿ ಹತ್ತಿದ ರೀತಿ ಕಂಡು ಬೆಚ್ಚಿಬಿದ್ದ ಜನ!
#Ban_EVM
मेहनत का फल और समस्या का हल
देर से ही सही लेकिन मिलता जरूर है#OPS #MSP #WeWantOPS#SAVE_IT_CADRE_SAVE_IR#BanEVM_Save_India#IndiaOnSale#FarmersProtest#StopPrivatization#RestoreOldPension#पुरानी_पेंशन_बहाल_करो#ConstitutionalRightOPS#MSP_for_Financial_Inclusion pic.twitter.com/qO44zXKmvJ— Er. V P Vashisht (@vashishtvp) December 8, 2022
@ArvindKejriwal @isudan_gadhvi @Gopal_Italia @RahulGandhi @yadavakhilesh #Ban_EVM Save democracy 😔😔😔😔😔😔 https://t.co/UEMPWuss6v
— Ravish Kumar 🇮🇳 (@Gulshan_090) December 8, 2022
ಇನ್ನು ವ್ಯಂಗ್ಯಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಇವಿಎಮ್ ಬ್ಯಾನ್ ಮಾಡಿ ಇಂಡಿಯಾ ಉಳಿಸಿ ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೆ ಮತ ಬಿಳುವಂತೆ ಇವಿಎಮ್ ಸಿದ್ಧಪಡಿಸಲಾಗಿದೆ ಎಂದು ತೋರುವ ವೈರಲ್ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ, ಮೋದಿ ಹಿಡಿತದಲ್ಲಿ ಸಿಬಿಐ, ಇಡಿ, ಐಟಿ, ಆರ್ಬಿಐ, ನ್ಯಾಯಾಂಗ ವ್ಯವಸ್ಥೆ ಸೇರಿದಂತೆ ಹಲವಾರು ಇಲಾಖೆಗಳಿರುವಾಗ ಇವಿಎಮ್ ಯಾವ ಲೆಕ್ಕ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಬಿಜೆಪಿ ಹಿಂಬಾಲಕರು ಸುಮ್ಮನಿರದೆ ಟ್ರೋಲ್ ಹಾಗೂ ವ್ಯಂಗ್ಯವಾಡುತ್ತಿರುವ ನೆಟ್ಟಿಗರಿಗೆ ತಮ್ಮದೆ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ. ಮೋದಿ ಸೋತಾಗ ಇಲ್ಲದೆ ಇರುವ ಇವಿಎಮ್ ದೋಷ ಮೋದಿ ಗೆದ್ದಾಗ ಬರುತ್ತದೆ. ಅದೇ ಕಾಂಗ್ರೆಸ್ ಗೆದ್ದರೆ ಇವಿಎಮ್ ಸಮಸ್ಯೆ ಇರುತ್ತಿರಲಿಲ್ಲ ಅಲ್ಲವೆ ಎಂದು ಟ್ಟೀಟ್ ಮಾಡುವ ಮೂಲಕ ಬಿಜೆಪಿ ಪಕ್ಷದ ಗೆಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.