ಮುಂದಿನ ವರ್ಷಕ್ಕೆ ಮದುವೆ? ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಹೇಳಿದ್ದೇನು?

ಇತ್ತೀಚಿಗೆ ಮಾಡೆಲ್ ರೋಹ್ಮಾನ್ ಶಾಲ್ ಜೊತೆ ಆಗಾಗ ಕಾಣಿಸಿಕೊಂಡು ಸುದ್ದಿಯಲ್ಲಿದ್ದ ಮಾಜಿ ಭುವನ ಸುಂದರಿ ಸುಶ್ಮೀತಾ ಸೇನ್ ಮುಂದಿನ ವರ್ಷ ಮದುವೆಯಾಗುತ್ತಾರೆ ಎನ್ನುವ ಗಾಸಿಪ್ ಗೆ ಕೊನೆಗೂ ಸುಶ್ಮೀತಾ ಸೇನ್ ಮೌನ ಮುರಿದಿದ್ದಾರೆ.

Last Updated : Nov 11, 2018, 12:29 PM IST
ಮುಂದಿನ ವರ್ಷಕ್ಕೆ ಮದುವೆ? ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಹೇಳಿದ್ದೇನು?   title=

ನವದೆಹಲಿ: ಇತ್ತೀಚಿಗೆ ಮಾಡೆಲ್ ರೋಹ್ಮಾನ್ ಶಾಲ್ ಜೊತೆ ಆಗಾಗ ಕಾಣಿಸಿಕೊಂಡು ಸುದ್ದಿಯಲ್ಲಿದ್ದ ಮಾಜಿ ಭುವನ ಸುಂದರಿ ಸುಶ್ಮೀತಾ ಸೇನ್ ಮುಂದಿನ ವರ್ಷ ಮದುವೆಯಾಗುತ್ತಾರೆ ಎನ್ನುವ ಗಾಸಿಪ್ ಗೆ ಕೊನೆಗೂ ಸುಶ್ಮೀತಾ ಸೇನ್ ಮೌನ ಮುರಿದಿದ್ದಾರೆ.

ಕೆಲವು ತಿಂಗಳ ಹಿಂದೆ 27 ವರ್ಷ ವಯಸ್ಸಿನ ರೋಹ್ಮಾನ್ ಶಾಲ್ ಎನ್ನುವ ಮಾಡೆಲ್ ಇತ್ತೀಚಿಗೆ ಫ್ಯಾಶನ್ ಷೋವೊಂದರಲ್ಲಿ ಭೇಟಿಯಾಗಿದ್ದ ಸೇನ್, ಆಗಿನಿಂದ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ.ಈಗ ಮದುವೆಗೂ ಕೂಡ ಮುಂದಾಗಿದ್ದಾರೆ ಎನ್ನುವ ಊಹಾಪೋಹ ಹರಡಿತ್ತು. ಇದಕ್ಕೆ ಪೂರಕ ಎನ್ನುವಂತೆ ಹಲವು ಪತ್ರಿಕೆಗಳು ಸಹಿತ ಈ ವಿಚಾರವಾಗಿ ವರದಿಯನ್ನು ಪ್ರಕಟ ಮಾಡಿದ್ದವು.

ಈ ಹಿನ್ನಲೆಯಲ್ಲಿ ಈಗ ಸ್ವತ ಸುಶ್ಮಿತಾ ಸೇನ್ ಪ್ರತಿಕ್ರಿಯಿಸಿದ್ದು " ಜಗತ್ತು ಊಹಾಪೋಹಾದಲ್ಲಿ ಮುಳುಗಿದೆ, ನಾನು ಈಗ ತರಬೇತಿಯಲ್ಲಿ ಮುಳುಗಿ ಈ ರಿಂಗ್ ಗಳು ಮತ್ತು ಬದ್ದತೆ ಬಗ್ಗೆ  ಚಿಂತಿಸುತ್ತಿದ್ದೇನೆ, ನಾನು ಒಂದು ರೀತಿ ಗೇಮ್ ಇದ್ದ ಹಾಗೆ! ಇತರ ಎಲ್ಲ ಗಾಸಿಪ್ ಗಳು ವ್ಯರ್ಥವಾಗಿ ಹೋಗುತ್ತವೆ, ನಾನು ಇನ್ನು ಮದುವೆಯಾಗುತ್ತಿಲ್ಲ, ಆದರೆ ಖಂಡಿತವಾಗಿ ಜೀವನವನ್ನು ರೋಮ್ಯಾನ್ಸ್ ಮಾಡುತ್ತಿದ್ದೇನೆ " ಎಂದು ಸುಶ್ಮೀತಾ ಸೇನ್ ತಮ್ಮ ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ಹಂಚಿಕೊಂಡಿದ್ದಾರೆ.

ರೋಹ್ಮಾನ್  ಸುಶ್ಮೀತಾಗೆ ಮದುವೆ ಪ್ರೊಪೋಸ್ ಮಾಡಿದ್ದಕ್ಕೆ ಈಗಾಗಲೇ ಒಪ್ಪಿಗೆ ನೀಡಿದ್ದಾರೆ  2019 ರ ಚಳಿಗಾಲದ ಸಮಯದಲ್ಲಿ ಇಬ್ಬರು ಮದುವೆಯಾಗಲಿದ್ದಾರೆ ಎಂದು ಡಿಎನ್ಎ ವರದಿ ಮಾಡಿತ್ತು. ಇನ್ನು ಈ ಎಲ್ಲ ಊಹಾಪೋಹಗಳಿಗೆ ಸಾಕ್ಷಿಯನ್ನುವಂತೆ ಸುಶ್ಮಿತಾ ಕೂಡ  ಸಾಕಷ್ಟು ವಿಡಿಯೋ ಹಾಗೂ ಇನ್ಸ್ಟಾಗ್ರಾ ಫೋಟೋಗಳನ್ನು ಹಂಚಿಕೊಂಡಿದ್ದರು. 

Trending News