ಈ ಆಹಾರ ಪದಾರ್ಥಗಳನ್ನು ತಪ್ಪಿಯೂ ಫ್ರಿಜ್ ನಲ್ಲಿಡಬೇಡಿ

ಕೆಲವು ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ಅವುಗಳು ಬೇಗನೆ ಹಾಳಾಗುತ್ತವೆ. ಮಾತ್ರವಲ್ಲ ಈ ಆಹಾರಗಳನ್ನು ಫ್ರಿಜ್ ನಲ್ಲಿಟ್ಟರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಬೆಂಗಳೂರು : ಮಕ್ಕಳ ಮೆಚ್ಚಿನ ಐಸ್‌ಕ್ರೀಂ ಅಥವಾ ಮಾರುಕಟ್ಟೆಯಿಂದ ಖರೀದಿಸಿದ ತಾಜಾ ಹಣ್ಣುಗಳನ್ನು ಇಡಲು ರೆಫ್ರಿಜರೇಟರ್ ಅನ್ನು  ಬಳಸಲಾಗುತ್ತದೆ.  ಇನ್ನು ಮಸಾಲೆಗಳು, ಹಾಲು, ತರಕಾರಿಗಳು  ಕೆಲವೊಮ್ಮೆ ಉಳಿದ ಆಹಾರಗಳನ್ನು ಕೂಡಾ ಫ್ರಿಜ್ ನಲ್ಲಿಡಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ಅವುಗಳು ಬೇಗನೆ ಹಾಳಾಗುತ್ತವೆ. ಮಾತ್ರವಲ್ಲ ಈ ಆಹಾರಗಳನ್ನು ಫ್ರಿಜ್ ನಲ್ಲಿಟ್ಟರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 
 

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

1 /4

ಕಾಫಿ ಪೌಡರ್ ಬಾಟಲಿಯನ್ನು ಫ್ರಿಡ್ಜ್ ನಲ್ಲಿ ಇಡುವ ಅಭ್ಯಾಸ ಹಲವರಿಗೆ ಇದೆ.  ಹೀಗೆ ಮಾಡುವುದರಿಂದ ಫ್ರಿಜ್‌ನ ತೇವಾಂಶದ ಸಂಪರ್ಕಕ್ಕೆ ಬರುವ ಮೂಲಕ ಕಾಫಿಯ ರುಚಿ ಬದಲಾಗಬಹುದು.

2 /4

ರೆಫ್ರಿಜರೇಟರ್‌ನಲ್ಲಿ ಅಡುಗೆ ಎಣ್ಣೆ ಸೇರಿದಂತೆ ಯಾವುದೇ ರೀತಿಯ ಎಣ್ಣೆಯನ್ನು ಇಡಬಾರದು. ಒಂದು ವೇಳೆ ಎಣ್ಣೆಯನ್ನು ಫ್ರಿಜ್ ನಲ್ಲಿಟ್ಟರೆ ಅದು ಘನೀಕರಿಸಲು ಆರಂಭವಾಗುತ್ತದೆ. ಮಾತ್ರವಲ್ಲ ಅದರ ಪರಿಮಳ ಕೂಡಾ ಬದಲಾಗುತ್ತದೆ. 

3 /4

ಮಾವಿನ ಹಣ್ಣಿನಂತೆ, ಬಾಳೆಹಣ್ಣನ್ನು ಕೂಡ ಫ್ರಿಜ್‌ನಲ್ಲಿ ಇಡುವುದಿಲ್ಲ. ಬಾಲೆ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದು ಹಾಳಾಗುತ್ತದೆ. 

4 /4

ತುಳಸಿ, ಕರಿಬೇವಿನ ಎಲೆಗಳು, ರೋಸ್ಮರಿ ಮುಂತಾದ ಗಿಡಮೂಲಿಕೆಗಳನ್ನು ದೈನಂದಿನ ಆಹಾರದಲ್ಲಿ ಬಳಸಲಾಗುತ್ತದೆ. ಆದರೆ, ಈ ವಸ್ತುಗಳನ್ನು ತಪ್ಪಿಯೂ ಫ್ರಿಜ್ ನಲ್ಲಿಡಬಾರದು.