ಅಮೆರಿಕಾದ ಉದ್ಯಮ ವಲಯದಲ್ಲಿ ಭಾರತೀಯ ಸಿಇಒಗಳು ಅದ್ಭುತ ಯಶಸ್ಸು ಸಾಧಿಸುತ್ತಿದ್ದಾರೆ. ಬಹುಪಾಲು ಪ್ರಮುಖ ಟೆಕ್ ಕಂಪನಿಗಳ ಸಿಇಒಗಳಾಗಿ ಭಾರತೀಯರೇ ಅಧಿಕಾರ ಸ್ವೀಕರಿಸಿದ್ದಾರೆ. ಅಮೆರಿಕದಲ್ಲಿ ಭಾರತೀಯರ ಯಶಸ್ಸಿಗೆ ಕಾರಣವೇನು ಎಂಬ ಪ್ರಶ್ನೆಗೆ ವಿಶ್ವವಿಖ್ಯಾತ ವ್ಯಾಪಾರ ಸಲಹೆಗಾರ, ಲೇಖಕ ಡಾ. ರಾಮ್ ಚರಣ್ ಕುತೂಹಲಕಾರಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: German Officials learn Cricket: ಜರ್ಮನ್ ಅಧಿಕಾರಿಗಳಿಗೆ ಕ್ರಿಕೆಟ್ ಹೇಳಿಕೊಟ್ಟ ಭಾರತೀಯ: ವಿಡಿಯೋ ನೋಡಿ
ವಿವಿಧ ಸಂಸ್ಕೃತಿಗಳು ಮತ್ತು ಹಿನ್ನೆಲೆಯ (ಅಡಾಪ್ಟಿವ್ ನೇಚರ್) ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯದಿಂದಾಗಿ ಭಾರತೀಯ ಸಿಇಒಗಳು ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರೀಯ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಾ. ರಾಮ್ ಚರಣ್ ಪ್ರಕಾರ, ಭಾರತೀಯರ ಕೌಟುಂಬಿಕ ಹಿನ್ನೆಲೆ ಅವರ ಯಶಸ್ಸಿಗೆ ಮತ್ತೊಂದು ಕಾರಣವಾಗಿದೆ. ಭಾರತೀಯರು ದೊಡ್ಡ ಕುಟುಂಬಗಳನ್ನು ಹೊಂದಿರುವುದರಿಂದ ಮತ್ತು ವಿಭಿನ್ನ ವ್ಯಕ್ತಿತ್ವದ ಜನರೊಂದಿಗೆ ಸಂವಹನ ನಡೆಸುವುದರಿಂದ, ಸಹಿಷ್ಣುತೆ ಸ್ವಾಭಾವಿಕವಾಗಿ ಅವರಲ್ಲಿ ಮೂಡುತ್ತದೆ. ಹೊಸ ವಿಷಯಗಳನ್ನು ನಿರಂತರವಾಗಿ ಕಲಿಯುವ ಭಾರತೀಯ CEO ಗಳ ಅಭ್ಯಾಸವು ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎನ್ನುತ್ತಾರೆ.
ಚರ್ಚೆಗಳಲ್ಲಿ ಭಾಗವಹಿಸುವಾಗ ಭಾರತೀಯ ನಾಯಕರು ಕೆಲವೊಮ್ಮೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ. ಭಾರತೀಯರು ಸಂವಹನ ಕೌಶಲ್ಯದಲ್ಲಿ ಉತ್ತಮವಾಗಿದ್ದರೂ, ನಾಯಕತ್ವ ಸ್ಥಾನದಲ್ಲಿರುವವರು ತಾಳ್ಮೆಯಿಂದ ಆಲಿಸಬೇಕು. ಇತರರ ದೃಷ್ಟಿಕೋನದಿಂದ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಸಮಸ್ಯೆಗೆ ನಮ್ಮ ಬಳಿ ಪರಿಹಾರವಿದ್ದರೂ, ಬೇರೆಯವರು ಹೇಳುವುದನ್ನು ಕೇಳುವುದು ಬಹಳ ಮುಖ್ಯ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.