Nepal Election 2022: ನೇಪಾಳದಲ್ಲಿ ಹೊಸ ಸರ್ಕಾರ ರಚನೆಯ ಹಾದಿ ಸುಗಮಗೊಂಡಿದೆ. ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ನೇಪಾಳ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಪುಷ್ಪ ಕಮಲ್ ದಹಲ್ ಸಭೆಯ ನಂತರ ಹೊಸ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ಪುಷ್ಪಕಮಲ್ ದಹಲ್ ಪ್ರಚಂಡ ಅವರು ಕಠ್ಮಂಡುವಿನ ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿದ್ದರು. ನೇಪಾಳಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 82 ಸ್ಥಾನಗಳನ್ನು ಗೆದ್ದಿದೆ.
ಇದನ್ನೂ ಓದಿ: ಚೀನಾದಲ್ಲಿ ಸತತ ನಾಲ್ಕನೇ ದಿನ ಸುಮಾರು 40 ಸಾವಿರ ಕೊರೊನಾ ಪ್ರಕರಣ ದಾಖಲು
ಪಿಎಂ ದೇವುಬಾ ಮತ್ತು ಪ್ರಚಂಡ ನಡುವೆ ಒಪ್ಪಂದ:
ಸಿಪಿಎನ್-ಮಾವೋವಾದಿ ಕೇಂದ್ರದ ಸದಸ್ಯ ಗಣೇಶ್ ಶಾ ಪ್ರಕಾರ, ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ಪುಷ್ಪಕಮಲ್ ದಹಲ್ ಪ್ರಚಂಡ ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಹೊಸ ಸರ್ಕಾರ ರಚನೆಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದ್ದಾರೆ. ಈಗಿರುವ ಆಡಳಿತ ಮೈತ್ರಿಯನ್ನು ಮುಂದೆಯೂ ಮುಂದುವರಿಸುವ ಕುರಿತು ಇಬ್ಬರೂ ನಾಯಕರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
150 ಸ್ಥಾನಗಳ ಫಲಿತಾಂಶ ಪ್ರಕಟ:
ನೇಪಾಳದ ಸಂಸತ್ತಿನ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ನೇತೃತ್ವದ ಆಡಳಿತ ಸಮ್ಮಿಶ್ರವು ಮುನ್ನಡೆ ಕಾಯ್ದುಕೊಂಡಿದೆ. ನೇರ ಮತದಾನದ ವ್ಯವಸ್ಥೆಯಲ್ಲಿ ಇದುವರೆಗೆ 150 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ನೇಪಾಳಿ ಕಾಂಗ್ರೆಸ್ನ ಮೈತ್ರಿಕೂಟ 82 ಸ್ಥಾನಗಳನ್ನು ಗೆದ್ದಿದೆ. ನೇಪಾಳದ 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ 165 ಸ್ಥಾನಗಳನ್ನು ನೇರ ಮತದಾನದ ಮೂಲಕ ಚುನಾಯಿಸಲಾಗುತ್ತದೆ. ಉಳಿದ 110 ಸ್ಥಾನಗಳನ್ನು ಪ್ರಮಾಣಾನುಗುಣ ಚುನಾವಣಾ ವ್ಯವಸ್ಥೆಯ ಮೂಲಕ ಚುನಾಯಿಸಲಾಗುತ್ತದೆ.
ಇದನ್ನೂ ಓದಿ: ಉ.ಕೊರಿಯಾದ ಗುರಿ ವಿಶ್ವದ ಪ್ರಬಲ ಪರಮಾಣು ಪಡೆಯನ್ನು ಹೊಂದುವುದಂತೆ..!
ಬಹುಮತಕ್ಕೆ 138 ಸ್ಥಾನಗಳ ಅಗತ್ಯ:
ಸದನದಲ್ಲಿ ಬಹುಮತಕ್ಕೆ ಒಂದು ಪಕ್ಷ ಅಥವಾ ಒಕ್ಕೂಟಕ್ಕೆ 138 ಸ್ಥಾನಗಳ ಅಗತ್ಯವಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಏಳು ಪ್ರಾಂತೀಯ ಅಸೆಂಬ್ಲಿಗಳಿಗೆ ಭಾನುವಾರ ಚುನಾವಣೆ ನಡೆದಿದೆ. ಅದೇ ಸಮಯದಲ್ಲಿ, ಅನುಪಾತ ಪದ್ಧತಿಯ ಎಣಿಕೆಯಲ್ಲಿ ಇದುವರೆಗೆ ಸಿಪಿಎನ್-ಯುಎಂಎಲ್ ಒಟ್ಟು 19,11,527 ಮತಗಳಿಂದ ಮುನ್ನಡೆಯಲ್ಲಿತ್ತು. ರಿಪಬ್ಲಿಕಾ ಪ್ರಕಾರ, ನೇಪಾಳಿ ಕಾಂಗ್ರೆಸ್ 18,39,884 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದಲ್ಲದೇ ಸಿಪಿಎನ್ (ಮಾವೋವಾದಿ ಕೇಂದ್ರ) 8,11,315 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.