ತಿರುವಂತಪುರಂ: ವೆಸ್ಟ್ ಇಂಡೀಸ್ ವಿರುದ್ದ ಇಲ್ಲಿ ನಡೆಯುತ್ತಿರುವ ಗ್ರೀನ್ ಫೀಲ್ಡ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ವೆಸ್ಟ್ ಇಂಡೀಸ್ ತಂಡವು ಭಾರತದ ಆಲ್ ರೌಂಡರ್ ರವಿಂದ್ರಾ ಜಡೇಜಾ ಅವರ ಬೌಲಿಂಗ್ ಕೈಚಳಕಕ್ಕೆ ಸಿಕ್ಕು ಕೇವಲ 104 ರನ್ ಗಳಿಗೆ ಸರ್ವಪತನವನ್ನು ಕಂಡಿತು.ವೆಸ್ಟ್ ಇಂಡಿಸ್ ಪರ ಮಾರ್ಲಾನ್ ಸ್ಯಾಮುವಲ್ಸ್ ಮತ್ತು ಜಾಸನ್ ಹೋಲ್ಡರ್ ಕರ್ಮವಾಗಿ 24 ,25 ರನ್ಗಳನ್ನು ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 20 ರ ಅಂಕಿ ದಾಟಲಿಲ್ಲ.
India seal the series in style!
Rohit Sharma's 56-ball 63* helps India finish it in a hurry as they gun down 105 inside 15 overs.#INDvWI SCORE ➡️ https://t.co/JVGV9qROfj pic.twitter.com/80jM8l793Q
— ICC (@ICC) November 1, 2018
ವೆಸ್ಟ್ ಇಂಡೀಸ್ ತಂಡ ನೀಡಿದ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡವು ಕೇವಲ 14.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ ದಡವನ್ನು ತಲುಪಿತು. ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಅಜೇಯ 63 ಹಾಗೂ ವಿರಾಟ್ ಕೊಹ್ಲಿ 33 ರನ್ ಗಳಿಸುವ ಮೂಲಕ ಗುರಿಯನ್ನು ತಲುಪಿತು. ಆಮೂಲಕ ಭಾರತ ಏಕದಿನ ಸರಣಿಯನ್ನು 3-1 ರ ಅಂತರದಲ್ಲಿ ವಶಪಡಿಸಿಕೊಂಡಿತು.