Calcium-Rich Foods: ಮೂಳೆಗಳು ದುರ್ಬಲವಾಗುವುದನ್ನು ತಡೆಯಲು 30ರ ಬಳಿಕ ಇವುಗಳನ್ನು ಮಿಸ್ ಮಾಡದೇ ಸೇವಿಸಿ

Calcium-Rich Foods: ವಯಸ್ಸಾದಂತೆ ಮೂಳೆಗಳು ಸವೆಯುವುದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ ಸಹ ನಾವು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

Calcium-Rich Foods: ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಸಮೃದ್ಧ ಆಹಾರಗಳ ಸೇವನೆ ಬಹಳ ಮುಖ್ಯ. ವಯಸ್ಸಾದಂತೆ, ಮೂಳೆಗಳು ಸವೆತಕ್ಕೊಳಗಾಗುವುದು ಸಾಮಾನ್ಯ ಸಂಗತಿ. ಆದರೆ, ಇದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ ಸಹ ನಾವು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 
ಕ್ಯಾಲ್ಸಿಯಂ ನಮ್ಮ ಮೂಳೆಗಳು ಮತ್ತು ಸ್ನಾಯುಗಳಿಗೆ ಪ್ರಮುಖ ಪೋಷಕಾಂಶವಾಗಿದೆ. ಆದ್ದರಿಂದ ಮೂವತ್ತು ವರ್ಷ ದಾಟಿದ ಬಳಿಕ ನಮ್ಮ ಆಹಾರದಲ್ಲಿ ಕಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸುವುದರಿಂದ ಮೂಳೆಗಳ ದೌರ್ಬಲ್ಯ ಉಂಟಾಗುವುದನ್ನು ತಡೆಯಬಹುದು.  ಮೂಳೆಗಳು ದುರ್ಬಲವಾಗುವುದನ್ನು ತಡೆಯಲು 30ರ ಬಳಿಕ ಯಾವ ಆಹಾರಗಳನ್ನು ಸೇವಿಸಬೇಕು ತಿಳಿಯಿರಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬಾದಾಮಿ: ಬಾದಾಮಿಯಲ್ಲಿ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ. ವಿಶೇಷವಾಗಿ ಬಾದಾಮಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ. ಮೂಳೆಗಳ ಆರೋಗ್ಯಕ್ಕೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಎರಡೂ ಮುಖ್ಯವಾಗಿದ್ದು ಬಾದಾಮಿ ಸೇವನೆಯಿಂದ ಮೂಳೆಗಳು, ಸ್ನಾಯುಗಳು ಮತ್ತು ಕೀಲುಗಳನ್ನು ಬಲಪಡಿಸಬಹುದು. 

2 /5

ಹಸಿರು ಸೊಪ್ಪು-ತರಕಾರಿಗಳು: ಉತ್ತಮ ಆರೋಗ್ಯಕ್ಕಾಗಿ, ನಾವು ಹಸಿರು ಸೊಪ್ಪು-ತರಕಾರಿಗಳನ್ನು ತಿನ್ನಬೇಕು. ಏಕೆಂದರೆ ಅದರಲ್ಲಿ ಹಸಿರು ಸೊಪ್ಪು- ತರಕಾರಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ವಿಶೇಷವಾಗಿ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸುತ್ತದೆ. ಇದಕ್ಕಾಗಿ ದಿನನಿತ್ಯದ ನಿಮ್ಮ ಆಹಾರದಲ್ಲಿ ಪಾಲಕ್ ಸೊಪ್ಪು, ಎಲೆಕೋಸು, ಬ್ರೋಕೊಲಿ, ಮೆಂತ್ಯ ಸೊಪ್ಪುಗಳನ್ನು ಬಳಸುವುದು ಮುಖ್ಯವಾಗಿದೆ. 

3 /5

ಹಾಲಿನ ಉತ್ಪನ್ನಗಳು: ಹಾಲು ಮತ್ತದರ ಉತ್ಪನ್ನಗಳಲ್ಲಿ ಬಹಳಷ್ಟು ಕ್ಯಾಲ್ಸಿಯಂ  ಕಂಡುಬರುತ್ತದೆ, ಇದು ಮೂಳೆಗಳ ಬಲಕ್ಕೆ ಬಹಳ ಮುಖ್ಯವಾಗಿದೆ. ಇದಕ್ಕಾಗಿ ಹಾಲಿನ ಹೊರತಾಗಿ ಮೊಸರು ಮತ್ತು ಪನ್ನೀರ್ ಕೂಡ ತಿನ್ನಬೇಕು. ನೀವೂ ಕೂಡ ಆರೋಗ್ಯಕರ ಮೂಳೆಗಳನ್ನು ಹೊಂದಲು ಬಯಸಿದರೆ ನಿತ್ಯ ನಿಮ್ಮ ಆಹಾರದಲ್ಲಿ ಹಾಲು ಮತ್ತದರ ಉತ್ಪನ್ನಗಳನ್ನು ತಪ್ಪದೇ ಬಳಸಿ. 

4 /5

ಕೊಬ್ಬಿನ ಮೀನು: ಸಾಲ್ಮನ್ ಮತ್ತು ಟ್ಯೂನ ಮೀನುಗಳಂತಹ ಕೊಬ್ಬಿನ ಮೀನುಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಇವು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಸಮೃದ್ಧ ಮೂಲವಾಗಿದೆ. ಇದು ಮೂಳೆಗಳ ಶಕ್ತಿ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ. ಅಂತಹ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ, ನೀವು ಬಲಿಷ್ಠವಾದ ಮೂಳೆಗಳನ್ನು ಹೊಡ್ನಲು ಬಯಸಿದರೆ ನಿಮ್ಮ ದಿನನಿತ್ಯದ ಆಹಾರದಲ್ಲಿ ಕೊಬ್ಬಿನ ಮೀನುಗಳನ್ನು ಸೇರಿಸಲು ಪ್ರಯತ್ನಿಸಿ.

5 /5

ಸೋಯಾ: ನೀವು ಮಾಂಸಾಹಾರ ಸೇವಿಸದಿದ್ದರೆ ಅಥವಾ ಸಸ್ಯಾಹಾರಿ ಆಹಾರವನ್ನು ಅನುಸರಿಸಿದರೆ, ಸೋಯಾ ಅಥವಾ ಅದರಿಂದ ತಯಾರಿಸಿದ ಉತ್ಪನ್ನಗಳು ನಿಮಗೆ ಕ್ಯಾಲ್ಸಿಯಂನ ಪ್ರಮುಖ ಮೂಲವಾಗಿದೆ. ಇದಕ್ಕಾಗಿ ನೀವು ಸೋಯಾಬೀನ್, ಸೋಯಾ ಹಾಲುಗಳನ್ನು ಸೇವಿಸಬಹುದು. ಸೋಯಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಡಿ ಕೂಡ  ಸಮೃದ್ಧವಾಗಿವೆ, ಇದು ಮೂಳೆಗಳನ್ನು ಬಲಪಡಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ  ಇದನ್ನು ಖಚಿತಪಡಿಸುವುದಿಲ್ಲ