BBK9 : ಬಿಗ್ಬಾಸ್ ಮನೆಯಲ್ಲಿ ದಿನವೂ ಒಂದೊಂದು ಚಿತ್ರ ವಿಚಿತ್ರ ಟಾಸ್ಕ್ಗಳನ್ನು ಕೊಡಲಾಗುತ್ತಿದೆ. ಬಿಗ್ಬಾಸ್ ಟಾಸ್ಕ್ ಸ್ಪರ್ಧಿಗಳಿಗೆ ದೊಡ್ಡ ತಲೆನೋವಾಗಿದೆ. ಸುಖವಾಗಿ ಸಂತೋಷವಾಗಿ ನೆಮ್ಮದಿಯಿಂದ ಬೆಳೆದ ಮಂದಿ ಸದ್ಯ ಕಾಡುವಾಸಿಗಳಂತೆ ದೊಡ್ಮನೆಯಿಂದ ಹೊರಗೆ ಬಿಸಿಲಲ್ಲಿ ಕುಳಿತಿದ್ದಾರೆ. ಯಾಕಾದ್ರೂ ಬಿಗ್ಬಾಸ್ಗೆ ಬಂದೆ ಗುರು ಎನ್ನವಂತಹ ಪರಿಸ್ಥಿತಿ ಬಿಗ್ಹೌಸ್ ಮಂದಿಗೆ ನಿರ್ಮಾಣವಾಗಿದೆ.
ಹೌದು... ದಿನಗಳು ಕಳೆದಂತೆ ಬಿಗ್ಬಾಸ್ ಕಠಿಣ ಟಾಸ್ಕ್ಗಳನ್ನು ನೀಡುತ್ತಿದ್ದಾರೆ. ದಿನವೂ ಸ್ಪರ್ಧಿಗಳು ಟಾಸ್ಕ್ ಕಂಪ್ಲೀಟ್ ಮಾಡಲು ಬೆವರು ಹರಿಸುವಂತಾಗಿದೆ. ಸುಕುಮಾರ ಸುಕುಮಾರಿಯರ ರೀತಿ ಮನೆಯಲ್ಲಿ ತಿಂದು ಉಂಡು ಆಡಿ ಬೆಳೆದಿದ್ದ ಸ್ಟಾರ್ಗಳು ಸದ್ಯ ಕಾಡು ಮಾನವರಂತೆ ಜೀವನ ಸಾಗಿಸಬೇಕಾಗಿದೆ. ಯಾಕೆಂದ್ರೆ ಬಿಗ್ಬಾಸ್ ಗೆಲ್ಲವು ಅಷ್ಟು ಸಲೀಸಾಗಿ ಬರೋಲ್ಲ ಅಲ್ವಾ.. ಅದಕ್ಕೆ ಕಷ್ಟ ಆದ್ರೂ ಸ್ಪರ್ಧಿಗಳು ಅದು ಯಾವುದನ್ನೂ ತೋರಿಸಿಕೊಳ್ಳದೆ ಮನದಲ್ಲೇ ಬೈಯುತ್ತಾ ಆಟ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಒಂದೇ ಗುಡಿಯಲ್ಲಿ ಅಪ್ಪು-ಅಂಬಿ ಪುತ್ಥಳಿ : ಸುಮಲತಾ, ಅಶ್ವಿನಿಯವರಿಂದ ನಾಳೆ ಉದ್ಘಾಟನೆ
ಸ್ಟೀಲ್ ಪಾತ್ರೆ, ಸ್ಪೂನ್ ಬಿಟ್ಟು ಮಡಿಕೆ ಕುಡಿಕೆಗಳನ್ನು ಅನ್ನ ಬೇಯಿಸಿ ತಿನ್ನಬೇಕಾದ ಪರಿಸ್ಥಿತಿ ಬಿಗ್ಬಾಸ್ ಸ್ಪರ್ಧಿಗಳದ್ದಾಗಿದೆ. ದೊಡ್ಮನೆಯಲ್ಲಿ ಕಾಡುವಾಸಿಗಳಂತೆ ಬಟ್ಟೆ ಧರಿಸಿ ಮನೆಯ ಆವರಣದಲ್ಲಿ ಮಲಗಿ ಕಾಲ ಕಳೆಯುತ್ತಿದ್ದಾರೆ. ಇನ್ನು ಅರುಣ್ ಸಾಗರ್ ಅವರು ಊದೂದಿ ಊದೂದಿ ಅನ್ನ ಬೇಯಿಸುವ ಅಂತ ಹಾಡು ಹಾಡುತ್ತ ಅಡುಗೆ ಮಾಡುತ್ತಿದ್ದರೆ. ಗುರೂಜಿ ಬಿಸಿಲಿಗೆ ಕುಳಿತು ಎನ್ ಕರ್ಮ ಗುರು ಇದು ಅಂತ ಯೋಚನೆ ಮಾಡುತ್ತಿದ್ದಂತೆ ಇತ್ತು.
ಅಲ್ಲದೆ, ಮಡಿಕೆ ಕುಡಿಯಲ್ಲಿ ಅನ್ನ ಮಾಡಿ ತಿನ್ನಲು ಆಗದೇ ಹಸಿವಿನಿಂದ ಒದ್ದಾಡುತ್ತಿದ್ದ ಸ್ಪರ್ಧಿಗಳಿಗೆ ಅರ್ಧ ಗಂಟೆಯ ಮಟ್ಟಕ್ಕೆ ಕಿಚನ್ ಬಾಗಿಲು ತೆಗೆದಾಗ ವರ್ಷದಿಂದ ಅನ್ನ ಕಾಣದವರ ರೀತಿಯಲ್ಲಿ ಒಳ ಹೊಕ್ಕು ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಅಡುಗೆ ಮಾಡಲು ಮುಂದಾದ್ರೂ ಆದ್ರೆ, ಅಷ್ಟರಲ್ಲಾಗಲೇ ಸಮಯ ಮೀರಿತ್ತು. ಹೊರಗೆ ಬಂದ ಸ್ಪರ್ಧಿಗಳ ಕಣ್ಣಲ್ಲಿ ನೀರು.. ಅನ್ನ ಬೆಲೆ ಈಗ ತಿಳಿಯುತ್ತಿದೆ ಎನ್ನುವ ಮಾತು ಕೇಳಿ ಬಂತು..
ಇದನ್ನೂ ಓದಿ: Virat Kohli and Anushka Sharma : ಅಡುಗೆ ಮನೆಯಲ್ಲಿ ವಿರುಷ್ಕಾ ಜೋಡಿ.. ನಟ್ಟಿಗರು ಹೀಗಂದ್ರು ನೋಡಿ!
ಇನ್ನು ಕಾಡಿನ ವಾಸಿಗಳಂತೆ ಮನೆ ಬಿಟ್ಟು ಹೊರಗೆ ಇರುವ ಸ್ಪರ್ಧಗಳಿಗೆ ವಿವಿಧ ಟಾಸ್ಕ್ ನೀಡಲಾಗುತ್ತಿದೆ. ಈ ಪೈಕಿ ಬಿಲ್ಲು ಬಾಣ ಬಿಡುವುದು. ಈ ಟಾಸ್ಕ್ನಲ್ಲಿಯೂ ಸಹ ಯಥಾಸ್ಥಿತಿ ಜಗಳ ಮನಸ್ತಾಪ ಕೇಳಿ ಬಂದವು. ರೂಪೇಶ ರಾಜಣ್ಣ ಮೇಲೆ ಮತ್ತೇ ದೂರುಗಳ ಸುರಿಮಳೆ. ಕೊನೆಗೆ ಗೆಲುವು ಮಾತ್ರ ಶೂನ್ಯ.. ಒಗ್ಗಟ್ಟಿನ ಮಂತ್ರ ಜಪಿಸಬೇಕಾಗಿದ್ದ ಸ್ಪರ್ಧಿಗಳು ಸದ್ಯ ಒಬ್ಬರನ್ನೊಬ್ಬರು ಕಂಡರೆ ಆಗದಂತಿದ್ದಾರೆ. ಇನ್ನು ಬಿಲ್ಲು ಬಾಣದ ಟಾಸ್ಕ್ ಏನಾಯ್ತು.. ಕಾಡುವಾಸಿಗಳಂತಿರುವ ಸ್ಪರ್ಧಿಗಳಿಗೆ ಊಟ ಸಿಕ್ತಾ ಅಂತ ತಿಳಿದುಕೊಳ್ಳಬೇಕು ಅಂದ್ರೆ ಬಿಗ್ಬಾಸ್ ನೋಡ್ಲೇಬೇಕು..
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.