Shani Gochar 2023: ವರ್ಷ 2023 ರಲ್ಲಿ ಶನಿಯ ಕೆಟ್ಟ ದೆಸೆಯಿಂದ ಮುಕ್ತರಾಗಲಿದ್ದಾರೆ ಈ ಜನರು

Shani Rashi Parivartan 2023: ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಶನಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹವಾಗಿದೆ. 2023ರ ಆರಂಭದಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. 
 

Shani Rashi Parivartan 2023: ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಶನಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹವಾಗಿದೆ. 2023ರ ಆರಂಭದಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಜನವರಿ 17, 2023 ಶನಿ ತನ್ನ ಪ್ರಸ್ತುತ ಇರುವ ರಾಶಿಯನ್ನು ತೊರೆದು ಕುಂಭ ರಾಶಿಗೆ ಪ್ರವೆಶಿಸಲಿದ್ದಾನೆ. ಹೀಗಿರುವಾಗ ಕೆಲ ರಾಶಿಯವರ ಪಾಲಿಗೆ ಶನಿಯ ಮಹಾದೆಸೆ ಮುಕ್ತಾಯವಾಗಲಿದೆ. ಇದರಿಂದ ಅವರಿಗೆ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ.

 

ಇದನ್ನೂ ಓದಿ-Delay In Marriage: ಕಂಕಣ ಬಲ ಕೂಡಿಬರುತ್ತಿಲ್ಲವೇ? ಈ ಉಪಾಯ ಮಾಡಿ ಸಂಬಂಧ ಖುದ್ದಾಗಿ ನಿಮ್ಮ ಮನೆಬಾಗಿಲಿಗೆ ಬರುತ್ತದೆ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

1. ಧನು ರಾಶಿ- ಈ ರಾಶಿಯ ತೃತೀಯ ಭಾವದಲ್ಲಿ ಶನಿ ಗೋಚರಿಸಲಿದ್ದಾನೆ. ಈ ರಾಶಿಯ ಜನರಿಗೆ ಕಳೆದ ಏಳೂವರೆ ವರ್ಷಗಳಿಂದ ಶನಿಯ ಸಾಡೇಸಾತಿ ನಡೆಯುತ್ತಿದೆ. ಹೀಗಿರುವಾಗ ಈ ಜಾತಕದವರಿಗೆ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಒತ್ತಡದಿಂದ ಮುಕ್ತಿ ಸಿಗಲಿದೆ. ಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನೌಕರಿಯಲ್ಲಿಯೂ ಕೂಡ ಪದೋನ್ನತಿಯ ಲಕ್ಷಣಗಳು ಗೋಚರಿಸುತ್ತಿವೆ. ದೀರ್ಘಾವಧಿಯಿಂದ ನೀವು ಪೂರ್ಣಗೊಳಿಸಲು ಯೋಚಿಸುತ್ತಿರುವ ಕೆಲಸಗಳು ಪೂರ್ಣಗೊಳ್ಳಲಿವೆ.

2 /4

2. ತುಲಾ ರಾಶಿ - ಜೋತಿಷ್ಯ ಲೆಕ್ಕಾಚಾರದ ಪ್ರಕಾರ ನಿಮ್ಮ ರಾಶಿಯ ಪಂಚಮ ಭಾವದಲ್ಲಿ ಶನಿಯ ಗೋಚರ ನಡೆಯುತ್ತಿದೆ. ಇದರಿಂದ ಶನಿಯ ಎರಡೂವರೆ ವರ್ಷಗಳ ಕಾಟದಿಂದ ನಿಮಗೆ ಮುಕ್ತಿ ಸಿಗಲಿದೆ. ದೀರ್ಘಾವಧಿಯಿಂದ ಯಾವುದಾದರೊಂದು ಕೆಲಸವನ್ನು ಪೂರ್ಣಗೊಳಿಸಲು ನೀವು ಪ್ರಯತ್ನಿಸುತ್ತಿದ್ದರೆ, ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ಜೀವನದಲ್ಲಿ ತಾಳಮೇಳ ಉತ್ತಮವಾಗಲಿದೆ. ನೌಕರಿ ಹಾಗೂ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಸಿಗಲಿದೆ. ಯಾವುದೇ ಓರ್ವ ವ್ಯಕ್ತಿಯ ಜೊತೆಗೆ ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡಲು ಯೋಚಿಸುತ್ತಿದ್ದರೆ, ಸಮಯ ಅನಕೂಲಕರವಾಗಿದೆ.  

3 /4

3. ಮಿಥುನ ರಾಶಿ- ಶನಿ ನಿಮ್ಮ ರಾಶಿಯ ಅದೃಷ್ಟದ ಸ್ಥಾನದಲ್ಲಿ ಗೋಚರಿಸಲಿದ್ದಾನೆ. 2020 ರಿಂದ ಮಿಥುನ ರಾಶಿಯ ಜಾತಕದವರಿಗೆ ಶನಿಯ ಎರಡೂವರೆ ವರ್ಷಗಳ ದೆಸೆ ನಡೆಯುತ್ತಿದೆ. ಆದರೆ ಶನಿಯ ಈ ಗೋಚರ ಅವರಿಗೆ ಮುಕ್ತಿಯನ್ನು ನೀಡಲಿದೆ. ಕುಂಭ ರಾಶಿಯಲ್ಲಿ ಶನಿಯ ಗೋಚರದಿಂದ ನಿಮ್ಮ ಅದೃಷ್ಟ ಎಚ್ಚತ್ತುಕೊಳ್ಳಲಿದೆ. ಬಿಸ್ನೆಸ್ ಹಾಗೂ ನೌಕರಿಯಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಕುಟುಂಬ ಕಲಹದಿಂದ ಮುಕ್ತಿ ಸಿಗಲಿದೆ. ದೀರ್ಘಾವಧಿಯ ಕಾಯಿಲೆಗಳಿಂದಲೂ ಕೂಡ ನಿಮಗೆ ಮುಕ್ತಿ ಸಿಗಲಿದೆ.   

4 /4

4. ವೃಷಭ ರಾಶಿ - ಜೋತಿಷ್ಯ ಶಾಸ್ತ್ರದ  ಪ್ರಕಾರ, ವೃಷಭ ಜಾತಕದವರ ದಶಮ ಭಾವದಲ್ಲಿ ಶನಿಯ ಈ ಗೋಚರ ನಡೆಯುತ್ತಿದೆ. ಇದರಿಂದ ನಿಮ್ಮ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಶನಿ ನಿಮ್ಮ ಜಾತಕದ ಭಾಗ್ಯ ಸ್ಥಾನದ ಮೇಲೆ ಪ್ರಭಾವ ಬೀರಿದ್ದ. ಆದರೆ, ಜನವರಿಯ ಕುಂಭ ರಾಶಿ ಗೋಚರ ಶನಿಯ ನಿಮ್ಮ ಮೇಲಿನ ಪ್ರಕೋಪವನ್ನು ತೆಗೆದುಹಾಕಲಿದೆ. ಹೀಗಿರುವಾಗ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಲಿದೆ. ಈ ಅವಧಿಯಲ್ಲಿ ವಿದೇಶ ಯಾತ್ರೆಯ ಶುಭಯೋಗ ನಿರ್ಮಾಣಗೊಳ್ಳಲಿದೆ. ಶನಿಯ ಗೋಚರ ಈ ರಾಶಿಯ ಜಾತಕದವರ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಲಿದೆ. ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿರುವ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗಲಿದೆ.