ಬೆಂಗಳೂರು: ಮನೆ ಬೀಗಾನ ಕಿಟಕಿ ಮೇಲೆ ಶೂ ಬಾಕ್ಸ್ ನಲ್ಲಿ ಬಿಟ್ಟು, ಹೊರಗೆ ಇಟ್ಟು ಅಕ್ಕಪಕ್ಕದವರಿಗೆ ಹೇಳಿ ಹೋಗೋಕು ಮುನ್ನ ಈ ಸ್ಟೋರಿ ನೀವು ಒದಲೇಬೇಕು. ಏಕೆಂದರೆ ಮನೆ ಕೀ ಹೊರಗೆ ಇಟ್ಟು ಹೋದರೆ ನಿಮ್ಮ ಮನೆಗೆ ಕಳ್ಳರು ಕನ್ನ ಹಾಕಬಹುದು, ಎಚ್ಚರ!
ತಿಲಕ್ನಗರ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು ಕಳ್ಳತನವಾದ ಎರಡೇ ಗಂಟೆಯಲ್ಲಿ 250 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಆದರೆ, ಕಳ್ಳ ಮಾತ್ರ ಸಿಕ್ಕಿ ಬಿದ್ದಿಲ್ಲ. ನಿನ್ನೆ ತಿಲಕ್ನಗರದ ಡಿಮಾರ್ಟ್ ಪಕ್ಕದ ಸ್ಲಂ ಬೋರ್ಡ್ ಅಪಾರ್ಟ್ಮೆಂಟ್ ನ ಅಂಬಿಕಾ ಎಂಬುವವರ ಮನೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿತ್ತು. ಮನೆ ಲಾಕ್ ಮಾಡಿ ಕೀಯನ್ನ ಅಂಬಿಕ ಶೂನಲ್ಲಿ ಇಟ್ಟು ಹೋಗಿದ್ದರು. ನಂತರ ಮನೆಗೆ ಬಂದಾಗ ಶೂನಲ್ಲಿ ಕೀ ಇರಲಿಲ್ಲ. ಕೀ ಹುಡುಕಾಡಿದಾಗ ನೆರೆ ಮನೆಯವರು ಕೀ ಹುಡುಕಿ ಕೊಟ್ಟಿದ್ದರು. ಮನೆಯೊಳಗೆ ಹೋಗಿ ಲಾಕರ್ ಚೆಕ್ ಮಾಡಿದಾಗ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿತ್ತು. ಇದಾದ ಕೆಲವೇ ಕ್ಷಣದಲ್ಲಿ ಅಂಬಿಕಾ ತಿಲಕ್ ನಗರ ಪೊಲೀರಿಗೆ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ- ಕಿಲ್ಲರ್ ಬಿಎಂಟಿಸಿಗೆ ಬೈಕ್ ಸವಾರ ಬಲಿ
ಕಳ್ಳತನದ ಬಗ್ಗೆ ದೂರು ಪಡೆಯುತ್ತಿದ್ದಂತೆ ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಡಾಗ್ ಸ್ಕ್ವಾಡ್, ಫಿಂಗರ್ ಪ್ರಿಂಟ್ ಟೀಂ ಸಮೇತ ದೂರುದಾರರಾದ ಅಂಬಿಕಾ ಮನೆಗೆ ಬಂದಿದ್ದಾರೆ. ಪೊಲೀಸರು ಚಿನ್ನಾಭರಣಕ್ಕಾಗಿ ತಲಾಶ್ ಮಾಡುತ್ತಿದ್ದಂತೆ ಮತ್ತದೆ ನೆರೆ ಮನೆಯವರು ಸಾರ್ ಇಲ್ಲೊಂದು ಗಂಟು ಬಿದ್ದಿದೆ ನೋಡಿ ಎಂದು ಚಿನ್ನದ ಗಂಟು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ- Shradhha Murder Case: 25 ಹುಡುಗಿಯರ ಜೊತೆ ಸಂಬಂಧ ಬೆಳೆಸಿದ್ದ ಅಫ್ತಾಬ್.!
ಪೊಲೀಸರು ಬಂದಿದ್ದಾರೆ ಎಂದು ಕಳ್ಳರು ಚಿನ್ನವನ್ನ ತಾವೇ ಹೊರಗೆ ಎಸೆದಿರುವ ಬಗ್ಗೆ ಅನುಮಾನ ಶುರುವಾಗಿದೆ. ಕಳ್ಳತನವಾಗಿದ್ದ ಚಿನ್ನ ಸಿಕ್ಕಿದೆ ಎಂದು ಅಂಬಿಕಾ ಸಂತಸದಲ್ಲಿದ್ದಾರೆ. ಆದರೆ ಪೊಲೀಸರು ಮಾತ್ರ ಕಳ್ಳ ಯಾರೂ ಎಂದು ಹುಡುಕಾಟ ಮುಂದುವರೆಸಿದ್ದಾರೆ. ಇನ್ನೂ ಸಾರ್ವಜನಿಕರಿಗೆ ಮನೆ ಹೊರಗೆ ಕೀ ಇಟ್ಟು ಹೋಗುವ ಮುನ್ನ ಎಚ್ಚರ ವಹಿಸಿ ಅಂತ ಪೊಲೀಸರು ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.