ತೆಲುಗು ಚಿತ್ರನಟ ಮಹೇಶ್ ಬಾಬು ಅವರಿಗೆ 2022 ವರ್ಷ ನಿಜಕ್ಕೂ ಅಘಾತ ಉಂಟುಮಾಡಿದೆ. ಅಣ್ಣನ ನಿಧನದಿಂದ ಮನನೊಂದಿದ್ದ ಮಹೇಶ್ಗೆ ಅಮ್ಮನ ಅಗಲಿಕೆ ಭಾರೀ ನೋವು ತಂದಿತ್ತು. ಈಗ ಅವರ ತಂದೆ ನಟ ಸೂಪರ್ ಸ್ಟಾರ್ ಕೃಷ್ಣ ಅವರ ಸಾವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಗವಂತನೇ ಅವರಿಗೆ ಧೈರ್ಯ ತುಂಬಬೇಕಾಗಿದೆ.
Mahesh Babu father Krishna : ತೆಲುಗು ಚಿತ್ರನಟ ಮಹೇಶ್ ಬಾಬು ಅವರಿಗೆ 2022 ವರ್ಷ ನಿಜಕ್ಕೂ ಅಘಾತ ಉಂಟುಮಾಡಿದೆ. ಅಣ್ಣನ ನಿಧನದಿಂದ ಮನನೊಂದಿದ್ದ ಮಹೇಶ್ಗೆ ಅಮ್ಮನ ಅಗಲಿಕೆ ಭಾರೀ ನೋವು ತಂದಿತ್ತು. ಈಗ ಅವರ ತಂದೆ ನಟ ಸೂಪರ್ ಸ್ಟಾರ್ ಕೃಷ್ಣ ಅವರ ಸಾವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಗವಂತನೇ ಅವರಿಗೆ ಧೈರ್ಯ ತುಂಬಬೇಕಾಗಿದೆ.
ಘಟ್ಟಮನೇನಿ ಕುಟುಂಬ ಅಂದ್ರೆ ಟಾಲಿವುಡ್ ಸಿನಿ ಪ್ರೇಕ್ಷಕರಿಗೆ ಬಲು ಅಚ್ಚುಮೆಟ್ಟು. ಸೂಪರ್ ಸ್ಟಾರ್ ಕೃಷ್ಣ ಒಂದು ಕಾಲದಲ್ಲಿ ಸಿನಿರಂಗದ ಟಾಪ್ ಹಿರೋಗಳ ಪಟ್ಟಿಯಲ್ಲಿ ಮಿಂಚಿದ್ದರು. ವಯಸ್ಸಾಗಿದ್ದರೂ ಸಹ ನಟನೆಯನ್ನು ಬಿಟ್ಟಿರಲಲಿಲ್ಲ. ಇಂದಿಗೂ ಅವರ ಸಿನಿಮಾಗಳು ಯುವ ಪೀಳಿಗೆಗೆ ತುಂಬಾ ಇಷ್ಟ. ಅಲ್ಲದೆ, ಯುವ ನಟರಿಗೆ ಸ್ಪೂರ್ತಿ.
ಇದೇ ವರ್ಷ ಜನವರಿಯಲ್ಲಿ (ಜ.8) ಮಹೇಶ್ ಬಾಬು ಅವರ ಸಹೋದರ ಘಟ್ಟಮನೇನಿ ರಮೇಶ್ ಬಾಬು ನಿಧನರಾದರು. 56 ವರ್ಷದ ರಮೇಶ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 1987ರಲ್ಲಿ ತೆರೆಕಂಡ ಸಾಮ್ರಾಟ್ ಸಿನಿಮಾ ಮೂಲಕ ರಮೇಶ್ ಸಿನಿರಂಗವನ್ನು ಪ್ರವೇಶಿಸಿ ನಟಿಸಿ ಸೈ ಎನಿಸಿಕೊಂಡರು. ಬಾಲನಟನಾಗಿಯೂ ಅನೇಕ ಸಿನಿಮಾಗಳಲಿ ರಮೇಶ್ ಕಾಣಿಸಿಕೊಂಡಿದ್ದರು.
ಮಹೇಶ್ಬಾಬು ಅವರಿಗೆ ಅವರ ತಾಯಿ ಇಂದಿರಾ ದೇವಿ ಅವರು ಅಂದ್ರೆ ಪಂಚಪ್ರಾಣ. ಅಲ್ಲದೆ, ಮಹೇಶ್ ಮಗಳು ಸಿತಾರ ನೋಡುವುದಕ್ಕೆ ಥೇಟ್ ಅವರ ಅಮ್ಮನ ತರ ಇದ್ದಾರೆ ಎಂದು ಹಲವು ಕಾರ್ಯಕ್ರಮಗಳಲ್ಲಿ ಸ್ವತಃ ಮಹೇಶ್ ಬಾಬು ಅವರೇ ಹೇಳಿದ್ದರು. ವಯೋಸಹಜ ಕಾಯಿಲೆಯಿಂದ ತಾಯಿ ಇಂದಿರಾ ದೇವಿ ಅವರು ಸೆ.28ರಂದು ನಿಧನರಾಗಿದ್ದರು. ಅಮ್ಮನ ಅಗಲಿಗೆ ಬಾಬುಗೆ ನುಂಗಲಾರದ ತುತ್ತಾಗಿತ್ತು.
ಸದ್ಯ ವಿಧಿಯ ನಿರ್ಣಯ ಎಂಬಂತೆ ಮಹೇಶ್ ತಂದೆ ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರು ನಿಧನರಾಗಿದ್ದು, ಇದು ಘಟ್ಟಮನೇನಿ ಕುಟುಂಬ ಅಷ್ಟೇ ಅಲ್ಲ ಭಾರತೀಯ ಸಿನಿರಂಗಕ್ಕೆ ತುಂಬಲಾರದಂತೆ ನೋವನ್ನು ಕೊಟ್ಟಿದೆ. ಸೋಮವಾರ ಲಘು ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಸಿನಿ ದೃವತಾರೆ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ಗಾಯದ ಮೇಲೆ ಬರೆ ಎಳೆದಂತೆ ಒಂದೇ ವರ್ಷದಲ್ಲಿ ಪ್ರೀತಿಯ ಅಣ್ಣ, ಅಮ್ಮ ಸೇರಿದಂತೆ ಇದೀಗ ಅಪ್ಪನನ್ನು ಮಹೇಶ್ ಬಾಬು ಅವರು ಕಳೆದುಕೊಂಡಿದ್ದು, ಆಘಾತದಲ್ಲಿ ಮುಳುಗಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಮಹೇಶ್ ಬಾಬು ಅವರಿಗೆ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.