ಚಾಮರಾಜನಗರ: ಶಾಲಾ ಪಠ್ಯದಲ್ಲಿರುವ "ನೋಡಿ ಕಲಿ" ಎಂಬ ಮಾತಿನಂತೆ ಈ ಸರ್ಕಾರಿ ಶಾಲಾ ವಿದ್ಯಾರ್ಥಿ ಹಿರಿಯರನ್ನು ನೋಡಿ ದೇಸಿ ಕಲೆಯನ್ನು ರೂಢಿಸಿಕೊಂಡು, ಪ್ರಾವಿಣ್ಯತೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ಹೌದು, ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ 6-7 ವಿದ್ಯಾರ್ಥಿಗಳು ತಮ್ಮೂರಿನ ಹಿರಿಯರು ಪ್ರದರ್ಶನ ಮಾಡುತ್ತಿದ್ದ ದೊಣ್ಣೆ ವರಸೆಯನ್ನು ಕಂಡು ಆಕರ್ಷಿತರಾಗಿ ಏಕಲವ್ಯರಂತೆ ನಿತ್ಯ ಅಭ್ಯಸಿಸಿ ಕಲಿತಿದ್ದು ಹಿರಿಯರನ್ನು ಮೀರಿಸುವಂತೆ ತಾವು ನೋಡಿ ಕಲಿತ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಇದನ್ನೂ ಓದಿ- ಸರ್ವರಿಗೂ ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ
ಸಿದ್ದಯ್ಯನಪುರ ಗ್ರಾಮದಲ್ಲಿ 7-8 ಮಂದಿ ಹಿರಿಯರು ಈಗಲೂ ಹಬ್ಬ-ಹರಿದಿನಗಳಲ್ಲಿ ಪಾರಂಪರಿಕ ಕಲೆಯಾದ ದೊಣ್ಣೆ ವರಸೆಯನ್ನು ಪ್ರದರ್ಶನ ಮಾಡಲಿದ್ದಾರೆ. ಅದರಂತೆ, ಕಳೆದ ದೀಪಾವಳಿ ಹಬ್ಬದಲ್ಲಿ ಹಿರಿಯರು ದೊಣ್ಣೆ ಹಿಡಿದು ಗರಗರನೇ ತಿರುಗಿಸುತ್ತಿದ್ದ ಚಾಕಚಕತ್ಯತೆಗೆ ಮನಸೋತ ಚಿರಂತ್, ಜಯಸುಂದರ್, ಪ್ರೀತಂ, ಜೀವನ್, ಅರ್ಜುನ್ ಎಂಬ ಬಾಲಕರು ತಾವು ದೊಣ್ಣೆ ಹಿಡಿದು ಏಕಲವ್ಯರಂತೆ ವರಸೆಯನ್ನು ಕಲಿತಿದ್ದಾರೆ.
ಇನ್ನು, ಬಾಲಕರು ಶಾಲೆಯಲ್ಲಿ ಪ್ರದರ್ಶನ ಮಾಡುತ್ತಿದ್ದ ದೊಣ್ಣೆ ವರಸೆ ಕಂಡು ಉತ್ತೇಜಿತಗೊಂಡ 8 ನೇ ತರಗತಿ ವಿದ್ಯಾರ್ಥಿನಿಯರಾದ ರೀತುಪ್ರಿಯಾ, ಅಕ್ಷತಾ ಎಂಬವರು ತಾವೇನೂ ಕಡಿಮೆ ಇಲ್ಲಾ ಎಂಬಂತೆ ಬಾಲಕರನ್ನು ನೋಡಿ ದೊಣ್ಣೆ ವರಸೆ ಕಲಿತಿದ್ದಾರೆ.
ಇದನ್ನೂ ಓದಿ- “ಎರಡು ಸಲ ನನ್ನಿಂದ ಸಿದ್ದರಾಮಯ್ಯಗೆ ರಾಜಕೀಯ ಜೀವದಾನ ಸಿಕ್ಕಿದೆ” –ಎಚ್ಡಿಕೆ
ಏಕಲವ್ಯನಂತೆ ಅನುಕರಣೆ: ಈ ವಿದ್ಯಾರ್ಥಿಗಳಿಗೆ ಯಾವ ಗುರುವು ಇಲ್ಲದೆ ದೊಣ್ಣೆ ವರಸೆ ಕಲಿತಿದ್ದಾರೆ. ಹಿರಿಯರ ಕಲೆಯನ್ನು ಕಂಡು ಅವರನ್ನು ಅನುಕರಿಸಿ ಇದನ್ನು ರೂಢಿಸಿಕೊಂಡಿದ್ದು ಅದರಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದಾರೆ. ಎರಡು ಕೈಯಲ್ಲಿ ದೊಣ್ಣೆ ತಿರುಗಿಸುವುದು, ದೊಣ್ಣೆ ಸಹಾಯದಿಂದ ನಡೆಯುವುದು, ಸಮರಾಭ್ಯಾಸದಂತೆ ಪಟ್ಟು ಹಾಕುವುದು ಇವರುಗಳು ಸಿದ್ಧಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.