ವಾಸ್ತು ದೋಷಗಳನ್ನು ಸಮಯಕ್ಕೆ ಸರಿಯಾಗಿ ಸರಿ ಮಾಡುವುದು ಸೂಕ್ತ.
Vastu Tips : ಮನೆಯಲ್ಲಿ ವಾಸ್ತು ದೋಷವಿದ್ದರೆ ಎಷ್ಟೇ ಕಷ್ಟಪಟ್ಟರೂ ಐಶ್ವರ್ಯ ಬರುವುದಿಲ್ಲ. ಎಷ್ಟೇ ದುಸಿದರು ಕೈಯಲ್ಲಿ ಹಣ ಉಳಿಯುವುದಿಲ್ಲ. ಮನೆಯಲ್ಲಿ ಯಾವುದಾದರೊಂದು ಕಾರಣಕ್ಕೆ ಜಗಳ, ಕದನ ಮನಸ್ತಾಪ ನಡೆಯುತ್ತಲೇ ಇರುತ್ತದೆ. ವೈವಾಹಿಕ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಈ ವಾಸ್ತು ದೋಷಗಳನ್ನು ಸಮಯಕ್ಕೆ ಸರಿಯಾಗಿ ಸರಿ ಮಾಡುವುದು ಸೂಕ್ತ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜೇನುನೊಣಗಳು ಸಾಮಾನ್ಯವಾಗಿ ಮನೆಗಳಲ್ಲಿ ಜೇನುಗೂಡುಗಳನ್ನು ಕಟ್ಟುತ್ತವೆ. ಅನೇಕರು ಅವುಗಳನ್ನು ತೆಗೆದುಹಾಕುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಜೇನುಗೂಡು ಇರುವುದು ಮಂಗಳಕರವಲ್ಲ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಅದೇ ರೀತಿ ಬಾವಲಿಗಳು ಮನೆಯೊಳಗೆ ಬರುವುದು ಕೂಡಾ ಅಶುಭ.
ಮನೆಯ ಗೋಡೆಗಳ ಮೇಲೆ ಚಿತ್ರ ಮತ್ತು ವಿಗ್ರಹಗಳನ್ನು ಅಂಟಿಸಬಾರದು. ಇದು ಭಯಾನಕ ವಾಸ್ತು ದೋಷವನ್ನು ತರುತ್ತದೆ ಎನ್ನಲಾಗಿದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಇನ್ನು ದೇವರ ದೊಡ್ಡ ಪ್ರತಿಮೆಯನ್ನು ಮನೆಯಲ್ಲಿ ಇಡಬಾರದು.
ಮನೆಯಲ್ಲಿ ಅಡುಗೆ ಮನೆಯಲ್ಲಿ ಇಟ್ಟಿರುವ ಒಲೆ ಮುಖ್ಯ ಬಾಗಿಲಿಗೆ ಕಾಣಿಸದ ರೀತಿಯಲ್ಲಿ ಇರಬೇಕು. ಇಲ್ಲವಾದರೆ ಮನೆಯ ಶ್ರೇಯಸ್ಸು ದೂರವಾಗುತ್ತದೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಆಹಾರವನ್ನು ತಯಾರಿಸುವಾಗ, ಗೃಹಿಣಿಯು ಪೂರ್ವಕ್ಕೆ ಮುಖ ಮಾಡಬೇಕು. ರಾತ್ರಿಯಲ್ಲಿ ಕೊಳಕು ಪಾತ್ರೆಗಳನ್ನು ಎಂದಿಗೂ ಹಾಗೆಯೇ ಬಿಡಬೇಡಿ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯಗಳನ್ನು ನಿರ್ಮಿಸಬಾರದು. ಈ ಸ್ಥಳದಲ್ಲಿ ಶೌಚಾಲಯವಿದ್ದರೆ ಹಣ ನಷ್ಟವಾಗುತ್ತದೆ. ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಿದ ಕೊಠಡಿಯನ್ನು ಬಾಡಿಗೆಗೆ ನೀಡಬಾರದು.
ಮನೆಯ ಕಿಟಕಿಗಳು ಒಳಮುಖವಾಗಿ ತೆರೆಯಬೇಕು. ಹೊರಕ್ಕೆ ತೆರೆದುಕೊಳ್ಳುವ ಕಿಟಕಿಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಮನೆಯ ಯಾವುದೇ ಬಾಗಿಲು ಸದ್ದು ಮಾಡಿದರೆ, ತಕ್ಷಣ ಅದನ್ನು ಸರಿಪಡಿಸಿ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)