Horoscope Today: ಈ ರಾಶಿಯವರಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ

ಇಂದಿನ ರಾಶಿಭವಿಷ್ಯ(11-11-2022): ಮಿಥುನ ರಾಶಿಯವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಾರೆ. ವೃಶ್ಚಿಕ ರಾಶಿಯವರಿಗೆ ಶೀಘ್ರವೇ ಶುಭ ಸುದ್ದಿಯೊಂದು ಸಿಗಲಿದೆ.

Written by - Zee Kannada News Desk | Last Updated : Nov 11, 2022, 06:38 AM IST
  • ಮೇಷ ರಾಶಿಯ ಜನರಿಗೆ ಮದುವೆ ವಿಷಯದಲ್ಲಿ ಅಡಚಣೆ ಉಂಟಾಗಲಿದೆ
  • ಸಿಂಹ ರಾಶಿಯವರಿಗೆ ಸಕಾರಾತ್ಮಕವಾಗಿ ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ
  • ಮೀನ ರಾಶಿಯ ಜನರಿಗೆ ಸಂಸಾರದಲ್ಲಿ ಸ್ನೇಹಿತರಿಂದ ಕಂಟಕವಾಗಲಿದೆ
Horoscope Today: ಈ ರಾಶಿಯವರಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ title=
ಇಂದಿನ ರಾಶಿಭವಿಷ್ಯ

ದಿನಾಂಕ: 11-11-2022 ವಾರ: ಶುಕ್ರವಾರ ತಿಥಿ: ತೃತೀಯ ಪಕ್ಷ: ಕೃಷ್ಣ ಪಕ್ಷ ನಕ್ಷತ್ರ: ಮೃಗಶೀರ ಯೋಗ: ಶಿವ ಕರಣ: ಭದ್ರೆ ಗ್ರಹದ ಬದಲಾವಣೆ: ಶುಕ್ರಗ್ರಹ ವೃಶ್ಚಕ ರಾಶಿಗೆ ಪ್ರವೇಶ

Horoscope Today (11-11-2022): ಮೇಷ ರಾಶಿಯವರಿಗೆ ಮದುವೆ ವಿಷಯದಲ್ಲಿ ಅಡಚಣೆ ಉಂಟಾಗಲಿದೆ. ಸಿಂಹ ರಾಶಿಯವರಿಗೆ ಸಕಾರಾತ್ಮಕವಾಗಿ ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ. ಶುಕ್ರವಾರದ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ನಿಮಗೆ ಅಸಹಜವಾದ ಭಯ ಇರಲಿದೆ. ತಾಯಿಯ ಕಡೆಯಿಂದ ಸಹಾಯ. ಮದುವೆ ವಿಷಯದಲ್ಲಿ ಅಡಚಣೆ ಉಂಟಾಗಲಿದೆ.

ವೃಷಭ ರಾಶಿ: ವ್ಯಾಸಂಗದಲ್ಲಿ ಪ್ರಗತಿ. ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಹೊರರಾಜ್ಯ ಪ್ರಯಾಣ. ಕಾರ್ಯಸಿದ್ದಿಯಾಗಲಿದೆ.

ಮಿಥುನ ರಾಶಿ: ಆಸೆಗಳನ್ನು ಈಡೇರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತೀರಿ. ಗುರು-ಹಿರಿಯರ ಭೇಟಿಯಾಗಲಿದೆ. ಬಂಧನದ ಭೀತಿ ಇರಲಿದೆ.

ಕಟಕ ರಾಶಿ: ನಿಮಗೆ ಗಾಯಗಳು ಆಗುವ ಸಂಭವ. ಸ್ನೇಹಿತರಲ್ಲಿ ಮನಸ್ತಾಪ ಉಂಟಾಗಲಿದೆ. ಬೆಟ್ಟ-ಗುಡ್ಡಗಳಲ್ಲಿ ಪ್ರಯಾಣ ಮಾಡುತ್ತೀರಿ.

ಇದನ್ನೂ ಓದಿ: Chanakya Niti : ಪತಿಯಿಂದ ಈ 5 ವಿಷಯಗಳನ್ನು ಯಾವಾಗಲು ಮುಚ್ಚಿಡುತ್ತಾಳೆ ಪತ್ನಿ!

ಸಿಂಹ ರಾಶಿ: ಸಕಾರಾತ್ಮಕವಾಗಿ ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ. ಸನ್ಯದಲ್ಲಿ ಸೇರಲು ಅವಕಾಶ ಸಿಗಲಿದೆ.

ಕನ್ಯಾ ರಾಶಿ: ಕೆಲಸ-ಕಾರ್ಯಗಳಲ್ಲಿ ಗೊಂದಲ ಉಂಟಾಗಲಿದೆ. ಹಣಕಾಸಿನ ಸಮಸ್ಯೆ. ಜೀವನದಲ್ಲಿ ಹತಾಶೆ ಇರಲಿದೆ.

ತುಲಾ ರಾಶಿ: ಕೆಟ್ಟ ಮಾತುಗಳನ್ನು ಆಡಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವಿರಿ. ಅನುಮಾನಪಡುವ ಸ್ವಭಾವ ಇರುತ್ತದೆ. ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳುತ್ತವೆ.

ವೃಶ್ಚಿಕ ರಾಶಿ: ಕೆಲಸದಲ್ಲಿ ಹೆಚ್ಚು ಪ್ರಭಾವ. ನಿಮ್ಮ ವಸ್ತುಗಳು ಕಳುವಾಗುವ ಸಂಭವ ಇದೆ. ಶೀಘ್ರವೇ ಶುಭ ಸುದ್ದಿಯೊಂದು ಸಿಗಲಿದೆ.

ಇದನ್ನೂ ಓದಿ: ಮುಂದಿನ ಮೂರು ದಿನಗಳು 5 ರಾಶಿಯವರಿಗೆ ವರದಾನವಿದ್ದಂತೆ.! ಪ್ರತಿ ಕೆಲಸದಲ್ಲೂ ಯಶಸ್ಸು ನೀಡುತ್ತಾನೆ ಅಂಗಾರಕ

ಧನು ರಾಶಿ: ಮನಸ್ಸಿಗೆ ಏನೋ ಚಿಂತೆ ಇರುತ್ತದೆ. ಶತ್ರುಗಳಿಂದ ಅನಿರೀಕ್ಷಿತ ಲಾಭವಾಗಲಿದೆ. ಜೀವನದಲ್ಲಿ ಯಶಸ್ಸು ಇರುತ್ತದೆ.

ಮಕರ ರಾಶಿ: ಪೂರ್ವ ಕಾರ್ಯಗಳ ಪುಣ್ಯದ ಫಲವಾಗಿ ಶುಭ ಕಾರ್ಯಗಳ ಬಗ್ಗೆ ಮಾತುಕತೆ. ಪರಾಕ್ರಮದಿಂದ ಕಾರ್ಯಸಿದ್ಧಿಯಾಗಲಿದೆ. ವಾಹನದಿಂದ ತೊಂದರೆ ಸಾಧ‍್ಯತೆ ಇದೆ.

ಕುಂಭ ರಾಶಿ: ಹೆಚ್ಚು ಕೆಲಸದ ಒತ್ತಡ ಇರಲಿದೆ. ನಿಮ್ಮ ಕಾಲುಗಳ ಬಗ್ಗೆ ಎಚ್ಚರಿಕೆ ವಹಿಸಿ. ದುಡುಕುತನಿಂದ ನಿಮಗೆ ಚಿಂತೆ ಹೆಚ್ಚಾಗಲಿದೆ.

ಮೀನ ರಾಶಿ: ಸೋದರ ಸಂಬಂಧದಲ್ಲಿ ಕೆಟ್ಟ ಘಟನೆಗಳು ನಡೆಯಲಿವೆ. ಅಲ್ಪ ಸುಖ ಇರುತ್ತದೆ. ಸಂಸಾರದಲ್ಲಿ ಸ್ನೇಹಿತರಿಂದ ಕಂಟಕವಾಗಲಿದೆ.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News