Guru Mahadasha: 16 ವರ್ಷಗಳವರೆಗೆ ಗುರು ಮಹಾದಶಾ- ಯಾರಿಗೆಲ್ಲಾ ಹಣ, ಗೌರವ, ಸಂತೋಷ ಕರುಣಿಸಲಿದ್ದಾನೆ ಗುರು!

Guru Mahadasha: ವೈದಿಕ ಜ್ಯೋತಿಷ್ಯದ ಪ್ರಕಾರ, ಗುರು ಗ್ರಹದ ಮಹಾದಶಾ 16 ವರ್ಷಗಳು. ಇದು ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಕೆಲವರಿಗೆ ಗುರುವಿನ ಮಹಾದಶಾ ಮಂಗಳಕರವಾಗಿರುತ್ತದೆ. 

Written by - Yashaswini V | Last Updated : Nov 3, 2022, 11:52 AM IST
  • ಯಾರ ಜಾತಕದಲ್ಲಿ ಗುರು ಗ್ರಹವು ಶುಭ ಸ್ಥಾನದಲ್ಲಿದೆಯೋ ಅಂತಹ ಜನರು ತಮ್ಮ ವೃತ್ತಿಯಲ್ಲಿ ಬಹಳಷ್ಟು ಲಾಭವನ್ನು ಪಡೆಯುತ್ತಾರೆ.
  • ಈ ಜನರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ.
  • ಶಿಕ್ಷಣದ ವಿಷಯದಲ್ಲಿ ಅವರು ಮೇಲುಗೈ ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ.
Guru Mahadasha: 16 ವರ್ಷಗಳವರೆಗೆ ಗುರು ಮಹಾದಶಾ- ಯಾರಿಗೆಲ್ಲಾ ಹಣ, ಗೌರವ, ಸಂತೋಷ ಕರುಣಿಸಲಿದ್ದಾನೆ ಗುರು! title=
Guru Mahadasha

Guru Mahadasha: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಎಲ್ಲಾ ಗ್ರಹಗಳ ಸ್ಥಾನವನ್ನು ಹೊರತುಪಡಿಸಿ, ಮಹಾದಶಾ ಮತ್ತು ಅಂತರದಶಾ ಜೀವನದ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತವೆ. ಈ ಗ್ರಹಗಳ ದಶಾಗಳು ಮತ್ತು ಅಂತರದಶಗಳು ಮಂಗಳಕರವೆಂದು ಸಾಬೀತುಪಡಿಸಿದರೆ, ವ್ಯಕ್ತಿಯ ಅದೃಷ್ಟವು ಪ್ರಕಾಶಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ವ್ಯಕ್ತಿಯ ಜಾತಕದಲ್ಲಿ  ಗುರು ಗ್ರಹವು ಮಂಗಳಕರ ಸ್ಥಾನದಲ್ಲಿದ್ದರೆ, ಅವರು ತುಂಬಾ ಅದೃಷ್ಟವಂತರು. ಅದೇ ಸಮಯದಲ್ಲಿ, ಅವರು ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ, ಸಾಕಷ್ಟು ಜ್ಞಾನವನ್ನುಪಡೆಯುವರು. ಮಾತ್ರವಲ್ಲ ಅವರು  ಸ್ವಭಾವತಃ ಶಾಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ. 

ಜೀವನದ ಮೇಲೆ ಗುರುವಿನ ಮಹಾದಶಾ ಪ್ರಭಾವ:
ಯಾರ ಜಾತಕದಲ್ಲಿ ಗುರು ಗ್ರಹವು ಶುಭ ಸ್ಥಾನದಲ್ಲಿದೆಯೋ ಅಂತಹ ಜನರು ತಮ್ಮ ವೃತ್ತಿಯಲ್ಲಿ ಬಹಳಷ್ಟು ಲಾಭವನ್ನು ಪಡೆಯುತ್ತಾರೆ. ಈ ಜನರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ಶಿಕ್ಷಣದ ವಿಷಯದಲ್ಲಿ ಅವರು ಮೇಲುಗೈ ಸಾಧಿಸುತ್ತಾರೆ.  ಅಂತಹ ಜನರು ಬಹಳ ತಿಳುವಳಿಕೆಯುಳ್ಳವರು ಮತ್ತು ಉದಾರ ಮನೋಭಾವದವರೂ ಆಗಿರುತ್ತಾರೆ.  ಅಂತಹವರು ಶಿಕ್ಷಣ ಮತ್ತು ಜ್ಯೋತಿಷ್ಯ ಕ್ಷೇತ್ರದಲ್ಲಿ ಹೋದರೆ, ಅವರು ಸಾಕಷ್ಟು ಹೆಸರು ಗಳಿಸುತ್ತಾರೆ. ಅದರಲ್ಲೂ ಗುರುವಿನ ಮಹಾದಶಾ ನಡೆಯುತ್ತಿರುವಾಗ ಹೆಚ್ಚಿನ ಪ್ರಗತಿ, ಗೌರವ, ಸಂಪತ್ತು, ದಾಂಪತ್ಯ ಸುಖ ಸಿಗುತ್ತದೆ. ಅಂತಹ ಜನರು ಸ್ವಭಾವತಃ ತುಂಬಾ ಧಾರ್ಮಿಕರು. ಅವರು ಬಹಳಷ್ಟು ದಾನ ಮಾಡುತ್ತಾರೆ ಎಂಬ ನಂಬಿಕೆಯೂ ಇದೆ. 

ಇದನ್ನೂ ಓದಿ- Shani Margi 2022: ಶನಿಯ ನೇರ ನಡೆಯಿಂದ ಈ ರಾಶಿಯವರಿಗೆ ಸಂಕಷ್ಟ

ಮತ್ತೊಂದೆಡೆ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವು ಅಶುಭ ಸ್ಥಾನದಲ್ಲಿದ್ದರೆ, ಅವರು ತಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅವರಿಗೆ ಯಾವುದೇ ಕೆಲಸದಲ್ಲಿ ಮನಸ್ಸಿರುವುದಿಲ್ಲ. ಅಂತಹ ಜನರು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ದುರ್ಬಲ ಗುರು ದಾಂಪತ್ಯ ಸುಖ ನೀಡುವುದಿಲ್ಲ. ದಾಂಪತ್ಯದಲ್ಲಿ ಅಡೆತಡೆಗಳು ಹೆಚ್ಚಾಗುತ್ತವೆ. ಮಕ್ಕಳ ಸಂತೋಷ ಇರುವುದಿಲ್ಲ. ಅಂತಹವರು ಗುರುವಿನ ಮಹಾದಶಾದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಗುರು ಗ್ರಹವನ್ನು ಬಲಪಡಿಸಲು ಪರಿಹಾರಗಳು:
ಜಾತಕದಲ್ಲಿ ಗುರು ಗ್ರಹ ದುರ್ಬಲವಾಗಿದ್ದರೆ, ಅದನ್ನು ಬಲಪಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಗುರುವಾರದಂದು ಉಪವಾಸವಿದ್ದು ಹಳದಿ ಸಿಹಿತಿಂಡಿ ಅಥವಾ ಬೇಳೆ-ಅರಿಶಿನದಿಂದ ಮಾಡಿದ ಯಾವುದೇ ಪದಾರ್ಥವನ್ನು ಸೇವಿಸುವುದು ಒಳ್ಳೆಯದು. 
 
ಗುರುವು ಅಶುಭ ಸ್ಥಾನದಲ್ಲಿದ್ದರೆ, ಗುರುವನ್ನು ಪೂಜಿಸಿ. ವಿಷ್ಣುವನ್ನು ಸಹ ಪೂಜಿಸಿ. ಇದು ಗುರು ಗ್ರಹವನ್ನು ಬಲಪಡಿಸುತ್ತದೆ. 

ಸ್ನಾನದ ನೀರಿಗೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಿ, ಅದು ಗುರುವಿನ ದುಷ್ಪರಿಣಾಮಗಳನ್ನು ತೊಡೆದುಹಾಕುತ್ತದೆ ಮತ್ತು ಗುರುವನ್ನು ಬಲಪಡಿಸುತ್ತದೆ. 

ಇದನ್ನೂ ಓದಿ- Shukra Gochar: ನವೆಂಬರ್ 11ರಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ, ಶುಕ್ರ ಕರುಣಿಸಲಿದ್ದಾನೆ ಅಪಾರ ಸಂತೋಷ

ಗುರುವಾರ ಬಾಳೆಗಿಡಕ್ಕೆ ಪೂಜೆ ಮಾಡಿ. ಅಲ್ಲದೆ, ಬಾಳೆ ಮರಕ್ಕೆ ಅರಿಶಿನ, ಬೆಲ್ಲ ಮತ್ತು ಬೇಳೆಯನ್ನು ಅರ್ಪಿಸಿ. ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.   

ಗುರುವಾರದಂದು ಬಡವರು ಅಥವಾ ನಿರ್ಗತಿಕರಿಗೆ ಬೇಳೆಕಾಳು, ಬಾಳೆಹಣ್ಣು ಮತ್ತು ಹಳದಿ ಸಿಹಿತಿಂಡಿಗಳನ್ನು ದಾನ ಮಾಡಿ. ಇದರಿಂದ ಸಂಪತ್ತು, ದಾಂಪತ್ಯ ಸುಖ, ಯಶಸ್ಸು ಸಿಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News