Diabetes: ಡೈಯಾಬೀಟಿಸ್ ಕುರಿತಾದ ಈ 4 ಮಿಥ್ಯ ಸಂಗತಿಗಳಿಗೆ ಕಿವಿಗೊಡಬೇಡಿ!

Diabetes Myths: ಸಕ್ಕರೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ಸಂಗತಿಯನ್ನು ಒಪ್ಪಿಕೊಂಡರೂ ಕೂಡ, ಮಧುಮೇಹಿಗಳು ಎಲ್ಲಾ ರೀತಿಯ ಸಕ್ಕರೆಯನ್ನು ತ್ಯಜಿಸಬೇಕು ಎಂದು ಇದರ ಅರ್ಥವಲ್ಲ.  

Written by - Nitin Tabib | Last Updated : Apr 16, 2023, 04:58 PM IST
  • ರಕ್ತದ ಸಕ್ಕರೆಯ ಬಗ್ಗೆ ಜನರ ಮನಸ್ಸಿನಲ್ಲಿ ವಿವಿಧ ರೀತಿಯ ಮಿತ್ಯಗಳಿವೆ,
  • ಅವುಗಳನ್ನು ತೊಡೆದುಹಾಕುವುದು ತುಂಬಾ ಮುಖ್ಯ.
  • ಏಕೆಂದರೆ ಈ ತಪ್ಪು ಕಲ್ಪನೆಗಳು ಆರೋಗ್ಯಕ್ಕೆ ಹಾನಿಕರ.
Diabetes: ಡೈಯಾಬೀಟಿಸ್ ಕುರಿತಾದ ಈ 4 ಮಿಥ್ಯ ಸಂಗತಿಗಳಿಗೆ ಕಿವಿಗೊಡಬೇಡಿ! title=
ಡೈಯಾಬೀಟಿಸ್ ಮಿಥ್ಯಗಳು !

Diabetes Myths: ರಕ್ತದಲ್ಲಿನ ಸಕ್ಕರೆ ಅಥವಾ ಗ್ಲೂಕೋಸ್ ದೇಹಕ್ಕೆ ಶಕ್ತಿಯನ್ನು ಪೂರೈಸುವ ಪ್ರಮುಖ ಅಂಶವಾಗಿದೆ. ಆದರೂ ಕೂಡ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಅತಿಯಾದರೆ ಅಥವಾ ಅಗತ್ಯಕ್ಕಿಂತ ಕಡಿಮೆಯಾದರೆ, ಈ ಸ್ಥಿತಿಯು ಕಳವಳಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದ ಸಕ್ಕರೆಯ ಮಟ್ಟವು ಒಳ್ಳೆಯದಲ್ಲ. ಹಾಗಂತ ಕೈಯಾಗುವುದು ಕೂಡ ಸರಿಯಲ್ಲ. ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮಧುಮೇಹ ರೋಗ ಬರಬಹುದು. ಸಕ್ಕರೆಯ ಮಟ್ಟವು ಕಡಿಮೆಯಾದಾಗ ಹೈಪೊಗ್ಲಿಸಿಮಿಯಾ ಸಂಭವಿಸಬಹುದು. ಈ ಎರಡೂ ಪರಿಸ್ಥಿತಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇವುಗಳಿಂದ ಬಳಲುತ್ತಿರುವ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಒಂದು ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ ತಂದೊಡ್ಡಬಹುದು.

ರಕ್ತದ ಸಕ್ಕರೆಯ ಬಗ್ಗೆ ಜನರ ಮನಸ್ಸಿನಲ್ಲಿ ವಿವಿಧ ರೀತಿಯ ಮಿತ್ಯಗಳಿವೆ, ಅವುಗಳನ್ನು ತೊಡೆದುಹಾಕುವುದು ತುಂಬಾ ಮುಖ್ಯ. ಏಕೆಂದರೆ ಈ ತಪ್ಪು ಕಲ್ಪನೆಗಳು ಆರೋಗ್ಯಕ್ಕೆ ಹಾನಿಕರ. ರಕ್ತದಲ್ಲಿನ ಸಕ್ಕರೆಗೆ ಸಂಬಂಧಿಸಿದ 4 ಮಿಥ್ಯಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. 

1. ಮಧುಮೇಹದಿಂದ ಬಳಲುತ್ತಿರುವವರು ಎಲ್ಲಾ ರೀತಿಯ ಸಕ್ಕರೆಯನ್ನು ತ್ಯಜಿಸಬೇಕು- ಸಕ್ಕರೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ಸಂಗತಿಯನ್ನು ಒಪ್ಪಿಕೊಂಡರೂ ಕೂಡ, ಮಧುಮೇಹ ರೋಗಿಗಳು ಎಲ್ಲಾ ರೀತಿಯ ಸಕ್ಕರೆಯನ್ನು ತ್ಯಜಿಸಬೇಕು ಎಂಬುದು ಇದರ ಅರ್ಥವಲ್ಲ. ಕೆಲವು ಸಿಹಿ ಹಣ್ಣುಗಳನ್ನು ಮಧುಮೇಹ ರೋಗಿಗಳು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು. ಏಕೆಂದರೆ ಈ ಹಣ್ಣುಗಳಲ್ಲಿ ಇರುವ ಸಕ್ಕರೆ ನೈಸರ್ಗಿಕ ಸಕ್ಕರೆಯಾಗಿದ್ದು, ಇದು ಚಹಾ ಅಥವಾ ಕೃತಕ ಸಕ್ಕರೆಗೆ ಸೇರಿಸುವ ಸಕ್ಕರೆಯಂತೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಮಧುಮೇಹ ರೋಗಿಗಳು ಹಣ್ಣುಗಳು, ಕಿವಿ, ದ್ರಾಕ್ಷಿ, ಆವಕಾಡೊ, ಸೇಬು, ಕಿತ್ತಳೆ, ಏಪ್ರಿಕಾಟ್, ಪೇರಳೆ, ಪಪ್ಪಾಯಿ, ಪೀಚ್ ಇತ್ಯಾದಿಗಳನ್ನು ತಿನ್ನಬಹುದು. ಆದಾಗ್ಯೂ, ಅವುಗಳನ್ನು ತಿನ್ನುವ ಮೊದಲು, ವೈದ್ಯರನ್ನು ಸಂಪರ್ಕಿಸಿ.

2. ಅಧಿಕ ತೂಕ ಹೊಂದಿರುವವರಿಗೆ ಮಾತ್ರ ಮಧುಮೇಹ ಬರುತ್ತದೆ- ಅಧಿಕ ತೂಕ ಹೊಂದಿರುವ ಜನರಿಗೆ ಮಧುಮೇಹದ ಅಪಾಯ ಹೆಚ್ಚಾಗಿರುತ್ತದೆ, ಆದರೆ ಅವರ ಜೀವನಶೈಲಿ ಕೆಟ್ಟದಾಗಿದ್ದಾರೆ ಮತ್ತು ಅವರ ಆಹಾರಕ್ರಮವು ಸರಿಯಾಗಿಲ್ಲ ಅಥವಾ ಅವರು ಹೆಚ್ಚು ಅನಾರೋಗ್ಯಕರ ವಸ್ತುಗಳನ್ನು ಸೇವಿಸುತ್ತಿದ್ದಾರೆ ಮಾತ್ರ ಈ ರೋಗವು ಸಂಭವಿಸಬಹುದು. ಇದಲ್ಲದೆ, ಮಧುಮೇಹದ ಕೆಲವು ಅಂಶಗಳಿವೆ - ಅನುವಂಶಿಕತೆ ಮತ್ತು ವಯಸ್ಸು ಕೂಡ ಕಾರಣವಾಗಿರುತ್ತವೆ. ಕೇವಲ ಬೊಜ್ಜು ಮಾತ್ರವೇ ಮಧುಮೇಹಕ್ಕೆ ಕಾರಣವಾಗುತ್ತದೆ ಎಂಬುದು ಮಿಥ್ಯ ಸಂಗತಿ. ತೆಳ್ಳಗಿನವರಿಗೂ ಮಧುಮೇಹ ಬರಬಹುದು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ನಿಯಮಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

3. ನೀವು ಕಡಿಮೆ ರಕ್ತದ ಸಕ್ಕರೆ ಹೊಂದಿದ್ದರೆ ಚಿಂತೆ ಮಾಡಲು ಏನೂ ಇಲ್ಲ - ಕಡಿಮೆ ರಕ್ತದ ಸಕ್ಕರೆಯು ಕಾಳಜಿಯ ವಿಷಯವಲ್ಲ ಎಂದು ನೀವು ಭಾವಿಸುತ್ತಿದ್ದರೇ ಅದು ಮಿಥ್ಯ ಸಂಗತಿ, ಇದು ಅಪಾಯಕಾರಿ ಸ್ಥಿತಿ ಎಂಬುದು ನಿಮಗೆ ಗೊತ್ತಿರಲಿ, ಅದನ್ನು ನಿರ್ಲಕ್ಷಿಸಲು ಕಷ್ಟವಾಗುತ್ತದೆ. ಕಡಿಮೆ ರಕ್ತದ ಸಕ್ಕರೆ ಮಟ್ಟವನ್ನು ಹೈಪೊಗ್ಲಿಸಿಮಿಯಾ ಎಂದೂ ಕರೆಯುತ್ತಾರೆ. ಮಧುಮೇಹದಂತೆಯೇ, ಹೈಪೊಗ್ಲಿಸಿಮಿಯಾ ಕೂಡ ಒಂದು ಆತಂಕ ಹೆಚ್ಚಿಸುವ ವಿಷಯ. ಇದೇ ಕಾರಣಕ್ಕೆ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾದರೆ, ತಕ್ಷಣವೇ ಅದಕ್ಕೆ ಸಂಬಂಧಿಸಿದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಆಹಾರದ ಬಗ್ಗೆ ವೈದ್ಯರೊಂದಿಗೆ ಮಾತನಾಡಬೇಕು.

ಇದನ್ನೂ ಓದಿ-Diabetes And Cancer: ಮೊಟ್ಟೆ ಸೇವನೆಯಿಂದ ಡೈಯಾಬಿಟಿಸ್, ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆಯೇ? ಇಲ್ಲಿ ತಿಳಿದುಕೊಳ್ಳಿ!

4. ಮಧುಮೇಹ ರೋಗಿಗಳು ಹಣ್ಣುಗಳನ್ನು ತಿನ್ನುವಂತಿಲ್ಲ- ಹಣ್ಣುಗಳು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಆದಾಗ್ಯೂ, ಮಧುಮೇಹದಿಂದ ಬಳಲುತ್ತಿರುವ ಜನರು ಎಲ್ಲಾ ಹಣ್ಣುಗಳನ್ನು ತ್ಯಜಿಸಬೇಕು ಎಂಬುದು ಇದರ ಅರ್ಥವಲ್ಲ. ಹಣ್ಣುಗಳನ್ನು ತಿನ್ನುವ ಮೂಲಕ, ದೇಹದ ಜೀವಸತ್ವಗಳು, ಖನಿಜಗಳು ಮತ್ತು ನಾರಿನ ಅಗತ್ಯವನ್ನು ಪೂರೈಸಲಾಗುತ್ತದೆ. ಈ ಕಾರಣದಿಂದ ಅಧಿಕ ರಕ್ತದ ಸಕ್ಕರೆ ಇರುವ ರೋಗಿಗಳು ಮಿತವಾಗಿ ಹಣ್ಣುಗಳನ್ನು ಸೇವಿಸಬೇಕು. ಆದಾಗ್ಯೂ, ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು, ವೈದ್ಯರನ್ನು ಸಂಪರ್ಕಿಸಿಸುವುದು ಒಳಿತು.

ಇದನ್ನೂ ಓದಿ-Breast Cancer: ಮಹಿಳೆಯರಷ್ಟೇ ಅಲ್ಲ ಪುರುಷರಿಗೂ ಕಾಡುತ್ತೆ ಬ್ರೆಸ್ಟ್ ಕ್ಯಾನ್ಸರ್, ಯಾವ ವಯಸ್ಸಿನವರಿಗೆ ಹೆಚ್ಚು ಅಪಾಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News