ಈ ದಿನ ನಡೆಯಲಿದೆ ವರ್ಷದ ಮೊದಲ ಸೂರ್ಯಗ್ರಹಣ : ಇಲ್ಲಿದೆ ಸಂಪೂರ್ಣ ಮಾಹಿತಿ

2021 ರ ಗ್ರಹಣಗಳ ಬಗ್ಗೆ ಹೇಳುವುದಾದರೆ, ಈ ವರ್ಷ ಒಟ್ಟು 4 ಗ್ರಹಣಗಳು ಗೋಚರಿಸಲಿವೆ. ಇವುಗಳಲ್ಲಿ 2 ಚಂದ್ರ ಗ್ರಹಣ ಮತ್ತು 2 ಸೂರ್ಯಗ್ರಹಣ.   

Written by - Ranjitha R K | Last Updated : May 30, 2021, 11:19 AM IST
  • ಈ ವರ್ಷ ನಾಲ್ಕು ಗ್ರಹಣಗಳ ಗೋಚರ
  • ಎರಡು ಚಂದ್ರಗ್ರಹಣ, ಎರಡು ಸೂರ್ಯಗ್ರಹಣ
  • ಜೂನ್ 10ರಂದು ವರ್ಷದ ಪ್ರಥಮ ಸೂರ್ಯಗ್ರಹಣ ಗೋಚರ
ಈ ದಿನ ನಡೆಯಲಿದೆ ವರ್ಷದ ಮೊದಲ ಸೂರ್ಯಗ್ರಹಣ : ಇಲ್ಲಿದೆ ಸಂಪೂರ್ಣ ಮಾಹಿತಿ title=
ಜೂನ್ 10ರಂದು ವರ್ಷದ ಪ್ರಥಮ ಸೂರ್ಯಗ್ರಹಣ (file photo zee newz)

ನವದೆಹಲಿ : ಚಂದ್ರ ಗ್ರಹಣ (Lunar Eclipse) ಮತ್ತು ಸೂರ್ಯಗ್ರಹಣ  (Solar Eclipse) ಎನ್ನುವುದು ಜ್ಯೋತಿಷ್ಯ ಮತ್ತು ಧಾರ್ಮಿಕ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆ ಪಡೆದಿದೆ. ಅವು ದೇಶ, ಜಗತ್ತು ಮತ್ತು ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಈ ಗ್ರಹಣಗಳು ಜನರ ಜೀವನದಲ್ಲಿ ಘಟಿಸುವ ಕೆಲ ಘಟನೆಗಳಿಗೂ ಕಾರಣವಾಗುತ್ತದೆ. ಆದರೆ ಪ್ರಪಂಚದಲ್ಲಿ ಸಂಭವಿಸುವ ಅನೇಕ ಅನಾಹುತಗಳಿಗೂ  ಕಾರಣವಾಗುತ್ತವೆ. 2021 ರ ಗ್ರಹಣಗಳ ಬಗ್ಗೆ ಹೇಳುವುದಾದರೆ, ಈ ವರ್ಷ ಒಟ್ಟು 4 ಗ್ರಹಣಗಳು ಗೋಚರಿಸಲಿವೆ. ಇವುಗಳಲ್ಲಿ 2 ಚಂದ್ರ ಗ್ರಹಣ ಮತ್ತು 2 ಸೂರ್ಯಗ್ರಹಣ. 

ಜೂನ್ ನಲ್ಲಿ ಮೊದಲ ಸೂರ್ಯಗ್ರಹಣ : 
ಇತ್ತೀಚೆಗೆ, ಮೇ 26 ರಂದು, ವರ್ಷದ ಮೊದಲ ಚಂದ್ರಗ್ರಹಣ ಗೋಚರಿಸಿದೆ. ಇನ್ನು ವರ್ಷದ ಮೊದಲ ಸೂರ್ಯಗ್ರಹಣ (Surya Grahan 2021) ಜೂನ್ 10 ರಂದು ನಡೆಯಲಿದೆ. ಎರಡನೇ ಸೂರ್ಯಗ್ರಹಣವು (Solar Eclipse)  ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 4 ರಂದು ಗೋಚರಿಸಲಿದೆ. ಎರಡನೇ ಚಂದ್ರಗ್ರಹಣವು (Lunar Eclipse)  ನವೆಂಬರ್ 19 ರಂದು ನಡೆಯಲಿದೆ. 

ಇದನ್ನೂ ಓದಿ : Vastu Tips: ಮನೆಯಲ್ಲಿ ಅನಗತ್ಯವಾಗಿ ಜಗಳವಾಗುತ್ತಿದೆಯೇ? ಅದನ್ನು ಈ ರೀತಿ ತಪ್ಪಿಸಿ

ಭಾರತದಲ್ಲಿ ಭಾಗಶಃ ಗೋಚರ : 
ಜೂನ್ 10 ರಂದು ನಡೆಯಲಿರುವ ಸೂರ್ಯಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸುತ್ತದೆ. ಇದು ಕೆನಡಾ (Canada), ರಷ್ಯಾ, ಏಷ್ಯಾ, ಉತ್ತರ ಅಮೆರಿಕಾ, ಗ್ರೀನ್‌ಲ್ಯಾಂಡ್ (Green Land) ಸೇರಿದಂತೆ ಹಲವು ದೇಶಗಳಲ್ಲಿಯೂ ಕಾಣಿಸುತ್ತದೆ. ಸೂರ್ಯಗ್ರಹಣದ ಅವಧಿಯು ಸುಮಾರು 5 ಗಂಟೆಗಳಾಗಿರುತ್ತದೆ. ಇದು ಜೂನ್ 10 ರಂದು ಮಧ್ಯಾಹ್ನ 1. 42 ನಿಮಿಷಕ್ಕೆ ಆರಂಭವಾಗಲಿದ್ದು, ಸಂಜೆ 6 ಗಂಟೆ 41 ನಿಮಿಷಕ್ಕೆ ಕೊನೆಗೊಳ್ಳುತ್ತದೆ. 

ಗ್ರಹಣ ಕಾಲದಲ್ಲಿ ಶುಭ ಕೆಲಸ ಮಾಡುವುದಿಲ್ಲ : 
ದೇಶದಲ್ಲಿ ಗ್ರಹಣದ ಬಗ್ಗೆ ಅನೇಕ ನಂಬಿಕೆಗಳಿವೆ. ಧಾರ್ಮಿಕ ನಂಬಿಕೆಯ ಪ್ರಕಾರ ಗ್ರಹಣ ಅಶುಭ ಎಂದು ನಂಬಲಾಗುತ್ತದೆ. ಹಾಗಾಗಿ ಗ್ರಹಣ ಕಾಲದಲ್ಲಿ ಯಾವುದೇ ಶುಭ ಕೆಲಸಗಳನ್ನು ಮಾಡುವುದಿಲ್ಲ. ಸೂರ್ಯಗ್ರಹಣ ಸಮಯದಲ್ಲಿ, ಹಸುಗಳಿಗೆ ಹುಲ್ಲು ತಿನ್ನಿಸುವುದು, ಪಕ್ಷಿಗಳಿಗೆ ಧಾನ್ಯವನ್ನು ನೀಡುವುದು ಮತ್ತು ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ (Donate) ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ : ಪ್ರತಿನಿತ್ಯ ಈ ಕೆಲಸಗಳನ್ನು ಮಾಡುತ್ತಾ ಬಂದರೆ ಸಿಗಲಿದೆ ಭಾರೀ ಪ್ರಯೋಜನ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News