ನವರಾತ್ರಿಯ 9 ದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಏಕೆ ತಿನ್ನಬಾರದು? ಇದರ ಬಗ್ಗೆ ತಿಳಿದುಕೊಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನದಿರುವುದರ ಹಿಂದಿನ ಅತ್ಯಂತ ಪ್ರಸಿದ್ಧ ಕಥೆಯು ರಾಹು ಕೇತುವಿಗೆ ಸಂಬಂಧಿಸಿದೆ. ಸಾಗರ ಮಂಥನದಿಂದ ಹೊರಬಂದು ಅಮೃತವನ್ನು ವಿತರಿಸುವಾಗ, ವಿಷ್ಣುದೇವ ಮೋಹಿನಿ ರೂಪದಲ್ಲಿ ಅದನ್ನು ದೇವತೆಗಳಿಗೆ ಹಂಚುತ್ತಿದ್ದರು.

Written by - Puttaraj K Alur | Last Updated : Oct 9, 2021, 06:52 AM IST
  • ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಪ್ರವೃತ್ತಿಯ ಆಹಾರವನ್ನಾಗಿ ಪರಿಗಣಿಸಲಾಗಿದೆ
  • ಧರ್ಮಗ್ರಂಥಗಳ ಪ್ರಕಾರ ಈರುಳ್ಳಿ-ಬೆಳ್ಳುಳ್ಳಿ ಭಾವೋದ್ರೇಕ, ಮನೋವಿಕಾರ ಮತ್ತು ಅಜ್ಞಾನ ಉತ್ತೇಜಿಸುತ್ತವೆ
  • ನವರಾತ್ರಿಯ 9 ದಿನ ಉಪವಾಸವಿಲ್ಲದವರು ರಾಜಸಿಕ ಮತ್ತು ತಾಮಸಿಕ ಆಹಾರದಿಂದ ದೂರವಿರಬೇಕು
ನವರಾತ್ರಿಯ 9 ದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಏಕೆ ತಿನ್ನಬಾರದು? ಇದರ ಬಗ್ಗೆ ತಿಳಿದುಕೊಳ್ಳಿ title=
ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದು ಏಕೆ ತಪ್ಪು?

ನವದೆಹಲಿ: ಶರದ್ ನವರಾತ್ರಿಯ ಹಬ್ಬ(Navratri 2021)ವು ಅಕ್ಟೋಬರ್ 7 ರಿಂದ ಆರಂಭವಾಗಿದ್ದು, ಅ.15 ರಂದು ವಿಜಯದಶಮಿ (ದಸರಾ)ವರೆಗೂ ಮುಂದುವರಿಯಲಿದೆ. ಈ ಸಮಯದಲ್ಲಿ ಜನರು ದೇವಸ್ಥಾನಗಳಲ್ಲಿ ಹಾಗೂ ದೇಶದಾದ್ಯಂತ ಮನೆಗಳಲ್ಲಿ ಕಲಶಗಳನ್ನು ಸ್ಥಾಪಿಸುವ ಮೂಲಕ ಮಾತಾ ರಾಣಿಯನ್ನು ಪೂಜಿಸುವುದರಲ್ಲಿ ನಿರತರಾಗಿದ್ದಾರೆ. ಈ 9 ದಿನಗಳಲ್ಲಿ ತಾಯಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಯಾರು ಉಪವಾಸ ಮಾಡುತ್ತಾರೋ ಅವರು ಹಣ್ಣುಗಳು ಅಥವಾ ಧಾನ್ಯಗಳನ್ನು ಮಾತ್ರ ಸೇವಿಸುತ್ತಾರೆ. ಆದರೆ ಉಪವಾಸ ಮಾಡದವರು ಈ 9 ದಿನಗಳಲ್ಲಿ ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. ಮಾಂಸಾಹಾರದಿಂದ ದೂರವಿರುವ ಜನರು ಈ ದಿನಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ(Onion and Garlic) ಸೇವಿಸುವುದಿಲ್ಲ. ಇದಕ್ಕೆ ಕಾರಣವೇನು? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.  

ಆಹಾರವನ್ನು 3 ವರ್ಗಗಳಾಗಿ ವಿಂಗಡಿಸಲಾಗಿದೆ

ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ರೀತಿಯ ಉಪವಾಸ ಅಥವಾ ಪೂಜೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ(Use of Onion and Garlic in Navratri) ತಿನ್ನುವುದನ್ನು ನಿಷೇಧಿಸಲಾಗಿದೆ. ಇದರ ಹಿಂದಿನ ಕಾರಣವೇನೆಂದು ತಿಳಿಯುವ ಮೊದಲು ಆಯುರ್ವೇದದಲ್ಲಿ ಅಂದರೆ ಆಹಾರ ಪದಾರ್ಥಗಳನ್ನು 3 ವರ್ಗಗಳಾಗಿ ವಿಂಗಡಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.

1) ಸಾತ್ವಿಕ (Sattvik): ಮನಸ್ಸು, ಸಂಯಮ ಮತ್ತು ಶುದ್ಧತೆ ಶಾಂತಿ ಮುಂತಾದ ಗುಣಗಳನ್ನು ಇದು ಹೊಂದಿರುತ್ತದೆ

2) ರಾಜಸಿಕ(Rajasic): ಉತ್ಸಾಹ ಮತ್ತು ಸಂತೋಷ ಮುಂತಾದ ಗುಣಗಳನ್ನು ಇದು ಹೊಂದಿರುತ್ತದೆ

3) ತಾಮಸಿಕ (Tamasic): ಅಹಂಭಾವ, ಕೋಪ, ಭಾವೋದ್ರೇಕ ಮತ್ತು ನಾಶ ಮುಂತಾದ ಗುಣಗಳನ್ನು ಇದು ಹೊಂದಿರುತ್ತದೆ.

ಇದನ್ನೂ ಓದಿ: Mysuru Dasara: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ

ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದು ಏಕೆ ತಪ್ಪು?

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಪ್ರವೃತ್ತಿಯ ಆಹಾರ(Tamasic Tendency)ವಾಗಿ ಇರಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತರಕಾರಿಗಳು ಭಾವೋದ್ರೇಕ, ಮನೋವಿಕಾರ ಮತ್ತು ಅಜ್ಞಾನವನ್ನು ಉತ್ತೇಜಿಸುತ್ತವೆ. ಹೀಗಾಗಿ ಇದು ಆಧ್ಯಾತ್ಮಿಕ ಮಾರ್ಗವನ್ನು ತಡೆಯುತ್ತದೆ. ಆದ್ದರಿಂದ ನವರಾತ್ರಿಯ 9 ದಿನಗಳಲ್ಲಿ ಉಪವಾಸವಿಲ್ಲದವರು ರಾಜಸಿಕ ಮತ್ತು ತಾಮಸಿಕ ಆಹಾರದಿಂದ ದೂರವಿರಬೇಕು ಮತ್ತು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು ಎಂದು ತಿಳಿಸಲಾಗಿದೆ.  

ಈರುಳ್ಳಿ ತಿನ್ನುವುದರಿಂದ ದೇಹವು ಜಡವಾಗುತ್ತದೆ

ಧಾರ್ಮಿಕ ನಂಬಿಕೆಗಳ ಪ್ರಕಾರ ನವರಾತ್ರಿ(Navratri)ಯ 9 ದಿನಗಳಲ್ಲಿ ದೇವಿಯನ್ನು ಪೂಜಿಸಲು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿಯ ಅಗತ್ಯವಿದೆ. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಪದಾರ್ಥಗಳನ್ನು ಸೇವಿಸಿದ ನಂತರ ದೇಹದಲ್ಲಿ ಶಾಖ ಹೆಚ್ಚಾಗುತ್ತದೆ. ಈ ಕಾರಣದಿಂದ ಮನಸ್ಸಿನಲ್ಲಿ ಅನೇಕ ರೀತಿಯ ಆಸೆಗಳು ಹುಟ್ಟುತ್ತವೆ ಮತ್ತು ವ್ಯಕ್ತಿಯು ಪೂಜೆಯ ಮಾರ್ಗದಿಂದ ವಿಮುಖನಾಗಬಹುದು. ಇದಲ್ಲದೇ ಉಪವಾಸದ ಸಮಯದಲ್ಲಿ ಹಗಲಿನಲ್ಲಿ ಮಲಗುವುದನ್ನು ಸಹ ನಿಷೇಧಿಸಲಾಗಿದೆ. ಆದರೆ ಈರುಳ್ಳಿ-ಬೆಳ್ಳುಳ್ಳಿಯಂತಹ ಪದಾರ್ಥಗಳನ್ನು ಸೇವಿಸಿದ ನಂತರ ದೇಹದಲ್ಲಿ ಆಲಸ್ಯ ಇರುತ್ತದೆ. ನವರಾತ್ರಿಯ 9 ದಿನಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನದಿರಲು ಇದೇ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: Raw Papaya Paratha: ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ ಪರಂಗಿ ಕಾಯಿ ಪರಾಠ

ಇದಕ್ಕೆ ಸಂಬಂಧಿಸಿದ ಕಥೆ ಏನು ಗೊತ್ತಾ?

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನದಿರುವುದರ ಹಿಂದಿನ ಅತ್ಯಂತ ಪ್ರಸಿದ್ಧ ಕಥೆಯು ರಾಹು ಕೇತುವಿಗೆ ಸಂಬಂಧಿಸಿದೆ. ಸಾಗರ ಮಂಥನದಿಂದ ಹೊರಬಂದು ಅಮೃತವನ್ನು ವಿತರಿಸುವಾಗ, ವಿಷ್ಣುದೇವ ಮೋಹಿನಿ ರೂಪದಲ್ಲಿ ಅದನ್ನು ದೇವತೆಗಳಿಗೆ ಹಂಚುತ್ತಿದ್ದರು. ನಂತರ ಇಬ್ಬರು ರಾಕ್ಷಸರಾದ ರಾಹು ಮತ್ತು ಕೇತು ಕೂಡ ಬಂದು ಅಲ್ಲಿ ಕುಳಿತುಕೊಂಡಿದ್ದರು. ಇದನ್ನು ತಿಳಿಯದೆ ಅವರನ್ನು ದೇವತೆ ಎಂದು ಪರಿಗಣಿಸಿ ಅಮೃತದ ಹನಿಗಳನ್ನು ನೀಡಿದರು. ಆದರೆ ನಂತರ ಸೂರ್ಯ ಮತ್ತು ಚಂದ್ರ ಇಬ್ಬರೂ ರಾಕ್ಷಸರು ಎಂದು ತಿಳಿಸುತ್ತಾರೆ. ನಂತರ ಭಗವಾನ್ ವಿಷ್ಣು ತಕ್ಷಣವೇ ಇಬ್ಬರ ಶಿರಚ್ಛೇದ ಮಾಡಿದರು. ಈ ವೇಳೆ ಅಮೃತವು ಅವರ ಗಂಟಲಿನಿಂದ ಇಳಿಯಲಿಲ್ಲ. ಅಮೃತವು ಅವರ ದೇಹವನ್ನು ತಲುಪದ ಕಾರಣ ನೆಲದ ಮೇಲೆ ಬಿದ್ದು ನಾಶವಾಯಿತು. ಆದರೆ ಅಮೃತವು ರಾಹು ಮತ್ತು ಕೇತುಗಳ ಬಾಯಿಯನ್ನು ತಲುಪಿತ್ತು, ಆದ್ದರಿಂದ ಈ ಇಬ್ಬರೂ ರಾಕ್ಷಸರ ಮುಖಗಳು ಅಮರವಾಗಿವೆ.

ಈರುಳ್ಳಿ-ಬೆಳ್ಳುಳ್ಳಿಯನ್ನು ಅಶುದ್ಧವೆಂದು ಪರಿಗಣಿಸಲಾಗಿದೆ

ರಾಹು ಮತ್ತು ಕೇತುಗಳ ತಲೆಯು ವಿಷ್ಣುವಿನಿಂದ ಶಿರಚ್ಛೇದಗೊಂಡಾಗ ಅವುಗಳ ಕಡಿದ ತುದಿಗಳಿಂದ ಕೆಲವು ಹನಿ ಅಮೃತಗಳು ನೆಲದ ಮೇಲೆ ಬಿದ್ದವು. ಅದು ಈರುಳ್ಳಿ-ಬೆಳ್ಳುಳ್ಳಿಯನ್ನು ಉತ್ಪಾದಿಸಿತು. ಏಕೆಂದರೆ ಈ ಎರಡೂ ತರಕಾರಿಗಳು ಅಮೃತದ ಹನಿಗಳಿಂದ ಮಾಡಲ್ಪಟ್ಟಿವೆ. ಆದ್ದರಿಂದ ಇದು ರೋಗಗಳು ಮತ್ತು ಸೂಕ್ಷ್ಮಜೀವಿಗಳನ್ನು ನಾಶಪಡಿಸುವಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ. ಆದರೆ ಇವುಗಳು ರಾಕ್ಷಸರ ಬಾಯಿಯಿಂದ ಬಿದ್ದಿದ್ದರಿಂದ ವಾಸನೆಯುಕ್ತ ಮತ್ತು ಅಶುದ್ಧವೆಂದು ಪರಿಗಣಿಸಲಾಗಿದೆ. ಇದನ್ನು ಎಂದಿಗೂ ದೇವರ ಆನಂದಕ್ಕಾಗಿ ಬಳಸುವುದಿಲ್ಲ. ಯಾರು ಈರುಳ್ಳಿ-ಬೆಳ್ಳುಳ್ಳಿಯನ್ನು ತಿನ್ನುತ್ತಾರೋ ಅವರ ದೇಹವು ರಾಕ್ಷಸರ ದೇಹದಂತೆ ಬಲಗೊಳ್ಳುತ್ತದೆ. ಇದೇ ಸಮಯದಲ್ಲಿ ಅವರ ಬುದ್ಧಿಶಕ್ತಿ ಮತ್ತು ಆಲೋಚನೆ ಕೂಡ ಹಾಳಾಗುತ್ತದೆ ಎಂದು ನಂಬಲಾಗಿದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಯಾವುದೇ ಕಾರಣಕ್ಕೂ ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News