Importance Of Decorating Home: ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಲಂಕರಿಸುವುದರ ಹಿಂದಿನ ಮಹತ್ವವಿದು

ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ, ಮನೆ-ಕಚೇರಿಯನ್ನು ಶುಚಿಗೊಳಿಸಿ, ಅಲಂಕರಿಸಲಾಗುತ್ತದೆ. ಇದರ ಉದ್ದೇಶ ಆ ಸ್ಥಳವನ್ನು ಸುಂದರವಾಗಿಸುವುದು ಮಾತ್ರವಲ್ಲ, ಅದರ ಹಿಂದೆ ಮತ್ತೊಂದು ಪ್ರಮುಖ ಕಾರಣವೂ ಇದೆ.

Written by - Yashaswini V | Last Updated : Jul 3, 2021, 12:08 PM IST
  • ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಲಂಕರಿಸುವ ಹಿಂದೆ ಒಂದು ಪ್ರಮುಖ ಕಾರಣವಿದೆ
  • ದೀಪಗಳ ಬೆಳಕು, ಹೂವಿನ ಅಲಂಕಾರ, ಧೂಪದ್ರವ್ಯಗಳು ಸಕಾರಾತ್ಮಕತೆಯನ್ನು ತರುತ್ತವೆ
  • ಅಲಂಕಾರದ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ
Importance Of Decorating Home: ವಿಶೇಷ ಸಂದರ್ಭಗಳಲ್ಲಿ ಮನೆಯನ್ನು  ಅಲಂಕರಿಸುವುದರ ಹಿಂದಿನ ಮಹತ್ವವಿದು title=
ಹಬ್ಬಗಳಲ್ಲಿ ಮನೆ ಅಲಂಕರಿಸುವುದರ ಹಿಂದಿನ ಪ್ರಾಮುಖ್ಯತೆ ಏನೆಂದು ತಿಳಿಯಿರಿ

ಬೆಂಗಳೂರು: ಮನೆಯ ವಾಸ್ತು ಮನೆಯ ಸದಸ್ಯರ ಸಂತೋಷ, ಆರೋಗ್ಯ ಮತ್ತು ಯಶಸ್ಸಿನ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಮನೆಯ ವಾಸ್ತು ಸರಿಯಾಗಿ ಇರುವುದು ಬಹಳ ಮುಖ್ಯ, ಆಗ ಮಾತ್ರ ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ. ನಮ್ಮ ದೇಶದಲ್ಲಿ ಹಬ್ಬಗಳು ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಹೂವು, ದೀಪ, ರಂಗೋಲಿ ಇತ್ಯಾದಿಗಳಿಂದ ಮನೆಯನ್ನು ಅಲಂಕರಿಸುವ ಸಂಪ್ರದಾಯದ ಹಿಂದೆಯೂ ವಾಸ್ತು ಒಂದು ಕಾರಣವಾಗಿದೆ. ಹಬ್ಬಗಳ ಆಚರಣೆ ಎಂದರೆ ಮಹಿಳೆಯರು, ಮಕ್ಕಳು ಸೇರಿದಂತೆ ಮನೆಯವರಿಗೆಲ್ಲಾ ಎಲ್ಲಿಲ್ಲದ ಸಂಭ್ರಮ. ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ, ಮನೆ-ಕಚೇರಿಯ ಮುಖ್ಯ ದ್ವಾರವನ್ನು ವಿಶೇಷವಾಗಿ ಅಲಂಕರಿಸಲಾಗಿದೆ.

ಅಲಂಕರಿಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ:
ವಾಸ್ತು ಶಾಸ್ತ್ರದಲ್ಲಿ (Vastu Shastra) ಮನೆಯ ಮುಖ್ಯ ದ್ವಾರ ಬಹಳ ಮುಖ್ಯ. ಯಾವುದೇ ಹಬ್ಬದಂದು, ಮುಖ್ಯ ದ್ವಾರದಲ್ಲಿ ಹೂವುಗಳು, ರಂಗೋಲಿ, ದೀಪಗಳಿಂದ ಅಲಂಕರಿಸಲಾಗುತ್ತದೆ, ಇದರಿಂದಾಗಿ ಮನೆಯಲ್ಲಿ ಸಕಾರಾತ್ಮಕತೆ ತುಂಬಿದ್ದು ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ. ಅಂತಹ ಸುಂದರವಾದ ಬಾಗಿಲು ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಇತರ ದೇವತೆಗಳನ್ನು ಆಹ್ವಾನಿಸುತ್ತದೆ. ಆದಾಗ್ಯೂ, ಅಲಂಕರಿಸುವ ಮೊದಲು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ- Vastu Tips: ಫ್ಯಾಮಿಲಿ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಬೆಡ್ ರೂಂನಲ್ಲಿ ಎಂತಹ ಫೋಟೋ ಇರಬೇಕು? ಇಲ್ಲಿದೆ ವಾಸ್ತು ಟಿಪ್ಸ್

- ಅಲಂಕಾರದ ಮೊದಲು, ಮುಖ್ಯ ಬಾಗಿಲಲ್ಲಿ ಯಾವುದೇ ರಂಧ್ರ ಅಥವಾ ಬಿರುಕು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಬಾಗಿಲು ತೆರೆಯುವಾಗ ಮತ್ತು ಮುಚ್ಚುವಾಗ ಯಾವುದೇ ರೀತಿಯ ಶಬ್ಧವಾಗಬಾರದು ಎಂಬುದನ್ನು ಗಮನಿಸಿ. ವಾಸ್ತುವಿನ (Vastu) ಷ್ಟಿಕೋನದಿಂದ ಇದನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. 

- ಹಬ್ಬಗಳಲ್ಲಿ ಅಲಂಕಾರಗಳನ್ನು ಮಾಡುವ ಮೊದಲು, ಮನೆಯನ್ನು ಸ್ವಚ್ಛಗೊಳಿಸಿ ಅಲಂಕರಿಸಲಾಗುತ್ತದೆ, ಏಕೆಂದರೆ ಇದರಿಂದ ಬಿರುಕುಗಳು, ಒದ್ದೆಯಾದ ಗುರುತುಗಳು ಮತ್ತು ಬಣ್ಣಬಣ್ಣದ ಗೋಡೆಗಳು ಶುಭ ಶಕ್ತಿಯನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- July Born People: ಜುಲೈನಲ್ಲಿ ಜನಿಸಿದ ವ್ಯಕ್ತಿಯ ಸ್ವಭಾವ ಹೇಗಿರುತ್ತೆ? ಇಲ್ಲಿದೆ ಕೆಲವು ಆಸಕ್ತಿದಾಯಕ ಮಾಹಿತಿ

- ಅಲಂಕಾರದ ಜೊತೆಗೆ, ಧೂಪದ್ರವ್ಯದಗಳಿಂದ ಮನೆಯ ವಾತಾವರಣ ಸುವಾಸನೆ ಭರಿತವಾಗಿರುತ್ತದೆ. ಅಲಂಕಾರ ಎಷ್ಟು ಉತ್ತಮವಾಗಿದ್ದರೂ, ದುರ್ವಾಸನೆ ಇದ್ದರೆ ಲಕ್ಷ್ಮಿಯು ಮನೆಯನ್ನು ಪ್ರವೇಶಿಸಲು ಇಚ್ಚಿಸುವುದಿಲ್ಲ. ಹಾಗಾಗಿಯೇ ಮನೆ ಸದಾ ಶುದ್ಧವಾಗಿರಬೇಕು ಎಂದು ಹಿರಿಯರು ಹೇಳುತ್ತಾರೆ.

- ಹಳೆಯ ಮತ್ತು ಉಪಯೋಗಿಸದ ಸರಕುಗಳನ್ನು, ಮುರಿದ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು. ಅಂತಹ ವಸ್ತುಗಳನ್ನು ಮನೆಯಿಂದ ಹೊರಹಾಕುವುದರಿಂದ ಅದು ಆರ್ಥಿಕ ಪ್ರಗತಿಗೆ ನೇರ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News