White Hair Myths: ಬಿಳಿ ಕೂದಲನ್ನು ಕಪ್ಪಾಗಿಸುವ ಕುರಿತಾದ ಈ 3 ಮಿಥ್ಯಗಳನ್ನು ಇಂದೇ ತಲೆಯಿಂದ ತೆಗೆದುಹಾಕಿ!

White Hair Myths: ತಲೆಗೂದಲನ್ನು ಕಪ್ಪಾಗಿಸಲು ನೀವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಆದರೆ, ಕೆಲ ಉಪಾಯಗಳ ಮೇಲೆ ನೀವು ಕಿಂಚಿತ್ತು ಕೂಡ ಟೈಮೆ ವೆಸ್ಟ್ ಮಾಡಬಾರದು. ಆ ವಿಧಾನಗಳು ಯಾವುವು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)   

Written by - Nitin Tabib | Last Updated : Apr 6, 2024, 03:05 PM IST
  • ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಲ್ಫರ್ ಅಂಶವಿದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ,
  • ಆದರೆ ನೀವು ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿದರೆ ಅದು ಎಂದಿಗೂ ನಿಮ್ಮ ತಲೆ ಕೂದಲು ಕಪ್ಪಾಗುವುದಿಲ್ಲ,
  • ನೀವೂ ಕೂಡ ಒಂದು ವೇಳೆ ಈ ರೀತಿ ಪ್ರಯತ್ನಿಸುತ್ತಿದ್ದರೆ, ಅದನ್ನು ಇಂದೇ ಬಿಟ್ಟುಬಿಡಿ .
White Hair Myths: ಬಿಳಿ ಕೂದಲನ್ನು ಕಪ್ಪಾಗಿಸುವ ಕುರಿತಾದ ಈ 3 ಮಿಥ್ಯಗಳನ್ನು ಇಂದೇ ತಲೆಯಿಂದ ತೆಗೆದುಹಾಕಿ! title=

White Hair  Home Remedy: ಇತ್ತೀಚಿನ ದಿನಗಳಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಯುವಕರ ಕೂದಲು ಬಿಳಿಯಾಗಲಾರಂಭಿಸಿವೆ, ಇದರಿಂದ ಯುವಕರು ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಉತ್ಪನ್ನಗಳು ಮತ್ತು ಹೇರ್ ಡೈಗಳನ್ನು ಬಳಸುವುದರಿಂದ ಲಾಭದ ಬದಲು ಹಾನಿಯೇ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.

ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮನೆಯಲ್ಲಿಯೇ ಇರುವ ಕೆಲ ವಸ್ತುಗಳನ್ನು ಬಳಸಲಾಗುತ್ತದೆ, ಇದರಿಂದ ನೀವು ಬಯಸಿದ ಫಲಿತಾಂಶವನ್ನು ಕೂಡ ನೀವು ಕಾಣಬಹುದು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕೆಲವರು ಕಪ್ಪು ಕೂದಲನ್ನು ಮರಳಿ ಪಡೆಯಲು ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನು ಬಳಸುತ್ತಾರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ (White Hair Remedies). ಹೌದು, ಇದರಿಂದ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಇರುವುದು ಉತ್ತಮ
ಈ 3 ವಸ್ತುಗಳಿಂದ ಬಿಳಿ ಕೂದಲು ಹೋಗುವುದಿಲ್ಲ (White hair misconceptions in india, )

1. ಈರುಳ್ಳಿ
ಸಾಮಾನ್ಯವಾಗಿ ಕೂದಲಿನ ಬಲವರ್ಧನೆ ಮತ್ತು ಕೂದಲಿನ ಬೆಳವಣಿಗೆಗೆ ಈರುಳ್ಳಿ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗುತ್ತದೆ, ಇದರಲ್ಲಿರುವ ಗಂಧಕವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ, ಅನೇಕ ಜನರು ಈ ತರಕಾರಿಯನ್ನು ಬಿಳಿ ಕೂದಲಿಗೆ ಪರಿಹಾರವೆಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ಸತ್ಯವೆಂದರೆ ಕೂದಲು ಕಪ್ಪಾಗಿಸಲು ಈರುಳ್ಳಿ ಉಪಯುಕ್ತವಲ್ಲ.
 
2. ಮೊಸರು (white hair mythology)
ಮೊಸರಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ಇಳಿದೆ ಇದೆ, ಮೊಸರಿನ ಬ್ಯಾಕ್ಟೀರಿಯಾ ವಿರೋಧಿ ಗುಣವು ತಲೆಹೊಟ್ಟು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ವಿಪರ್ಯಾಸ ಎಂಬಂತೆ ತಲೆಗೂದಲು ಕಪ್ಪಾಗುತ್ತದೆ ಎಂಬ ಆಸೆಯಿಂದ ಕೆಲವರು ಸ್ನಾನ ಮಾಡುವಾಗ ಮೊಸರನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಆದರೆ ಅಂತಹದ್ದೇನೂ ಆಗುವುದಿಲ್ಲ.

ಇದನ್ನೂ ಓದಿ-Hair Fall Remedy: ಬಾದಾಮಿ-ದಾಸವಾಳ ಎಣ್ಣೆಯಲ್ಲಿದೆ ಕೂದಲು ಉದುರುವಿಕೆ ತಡೆಗಟ್ಟುವ ಶಕ್ತಿ, ಈ ರೀತಿ ಬಳಸಿ!
 
3. ಬೆಳ್ಳುಳ್ಳಿ (grey hair myths pluck one)
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಲ್ಫರ್ ಅಂಶವಿದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಆದರೆ ನೀವು ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿದರೆ ಅದು ಎಂದಿಗೂ ನಿಮ್ಮ ತಲೆ ಕೂದಲು ಕಪ್ಪಾಗುವುದಿಲ್ಲ, ನೀವೂ ಕೂಡ ಒಂದು ವೇಳೆ ಈ ರೀತಿ ಪ್ರಯತ್ನಿಸುತ್ತಿದ್ದರೆ, ಅದನ್ನು ಇಂದೇ ಬಿಟ್ಟುಬಿಡಿ .

ಇದನ್ನೂ ಓದಿ-Cardamom Benefits: ನೀವೂ ಕೂಡ ಊಟದ ಬಳಿಕ ಏಲಕ್ಕಿ ತಿನ್ನುತ್ತೀರಾ? ಲಾಭವೇ ಅಥವಾ ನಷ್ಟವೆ ಇಲ್ಲಿ ತಿಳಿದುಕೊಳ್ಳಿ!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News