Health Tips: ಮನೆಯಿಂದ ಹೊರಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಏಕೆ ತಿನ್ನುತ್ತಾರೆ?

ಮನೆಯಿಂದ ಹೊರಡುವ ಮೊದಲು ಮೊಸರು-ಸಕ್ಕರೆಯನ್ನು ಏಕೆ ತಿನ್ನುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ನೀವು ಅಂದುಕೊಂಡ ಕೆಲಸ ಯಶಸ್ವಿಯಾಗುತ್ತದೆಂಬ ನಂಬಿಕೆ ಇದರ ಹಿಂದಿದೆ. ಮೊಸರು-ಸಕ್ಕರೆಯನ್ನು ಸೇವಿಸಿದರೆ ನೀವು ದಿನವಿಡೀ ಸಕ್ರಿಯರಾಗಿರುತ್ತೀರಿ. ಇವೆರಡನ್ನು ಒಟ್ಟಿಗೆ ಸೇವಿಸಿದರೆ ನಿಮ್ಮ ದೇಹವು ತಕ್ಷಣವೇ ಗ್ಲೂಕೋಸ್ ಅನ್ನು ಪಡೆಯುತ್ತದೆ.

Written by - Puttaraj K Alur | Last Updated : Mar 1, 2022, 03:03 PM IST
  • ಮನೆಯಿಂದ ಹೊರಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಏಕೆ ಸೇವಿಸಲಾಗುತ್ತದೆ?
  • ಮೊಸರು ಮತ್ತು ಸಕ್ಕರೆಯನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ
  • ಮೊಸರು-ಸಕ್ಕರೆ ತಿನ್ನುವುದರಿಂದ ನಮ್ಮ ದೇಹವು ತಕ್ಷಣವೇ ಗ್ಲೂಕೋಸ್ ಪಡೆಯುತ್ತದೆ
Health Tips: ಮನೆಯಿಂದ ಹೊರಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಏಕೆ ತಿನ್ನುತ್ತಾರೆ? title=
ಮೊಸರು & ಸಕ್ಕರೆ ಸೇವಿಸುವ ಪ್ರಯೋಜನಗಳು

ನವದೆಹಲಿ: ಶುಭ ಸಮಾರಂಭದಲ್ಲಿ ಮನೆಯಿಂದ ಹೊರ ಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುವ ಸಂಪ್ರದಾಯ(Curd-Sugar Benefits)ವನ್ನು ನೀವು ನೋಡಿರಬೇಕು. ಇದರ ಹಿಂದೆ ಹಲವು ಕಾರಣಗಳಿವೆ. ಯಾರೇ ಆಗಲಿ ಮನೆಯಿಂದ ಹೊರಹೋಗುವಾಗ ಅವರಿಗೆ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ. ಹೀಗಾಗಿಯೇ ಮನೆಯಿಂದ ಹೊರಗೆ ಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಸೇವಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಇದರ ಹಿಂದಿನ ನಿಖರ ಕಾರಣವೇನು? ಮತ್ತು ಇದನ್ನು ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.    

ಮೊಸರು ಮತ್ತು ಸಕ್ಕರೆ ತಿನ್ನಲು ಕಾರಣವೇನು..?

ವರದಿಗಳ ಪ್ರಕಾರ ಮೊಸರು-ಸಕ್ಕರೆ(Curd-Sugar) ತಿನ್ನುವುದರಿಂದ ನಮ್ಮ ದೇಹವು ತಕ್ಷಣವೇ ಗ್ಲೂಕೋಸ್(Glucose)ಅನ್ನು ಪಡೆಯುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟಾಗ ಮೊಸರು-ಸಕ್ಕರೆ ತಿನ್ನಿಸಲು ಇದೇ ಮುಖ್ಯ ಕಾರಣ. ನೀವು ಗ್ಲೂಕೋಸ್‌ನೊಂದಿಗೆ ದಿನವಿಡೀ ಸಕ್ರಿಯವಾಗಿರುತ್ತೀರಿ. ಮೊಸರು-ಸಕ್ಕರೆಯಿಂದ ಗ್ಲೂಕೋಸ್ ತಕ್ಷಣವೇ ನಿಮ್ಮ ಮನಸ್ಸು ಮತ್ತು ದೇಹವನ್ನು ಶಕ್ತಿಯಿಂದ ತುಂಬಿಸುತ್ತದೆ, ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ. ಇದೇ ಕಾರಣಕ್ಕೆ ಹಿರಿಯರು ಮನೆಯಿಂದ ಹೊರಡುವ ಮೊದಲು ಮೊಸರು-ಸಕ್ಕರೆ ಸೇವಿಸುವಂತೆ ಸಲಹೆ ನೀಡುತ್ತಾರೆ.  

ಇದನ್ನೂ ಓದಿ: Benefits of Walk : ಊಟದ ನಂತರ ಏಕೆ ಮಾಡಬೇಕು ವಾಕಿಂಗ್? ತಜ್ಞರು ಹೇಳಿದ್ದಾರೆ ನೋಡಿ

ಮೊಸರು ತಿನ್ನುವ ಪ್ರಯೋಜನಗಳು

ಮೊಸರು ತಿನ್ನುವುದರಿಂದ(Curd Benefits) ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಇದರಿಂದ ನಿಮಗೆ ಹೊಟ್ಟೆಯ ಸಮಸ್ಯೆಗಳು ಬರುವುದಿಲ್ಲ. ಬೇಸಿಗೆಯಲ್ಲಿ ಮೊಸರು ಮತ್ತು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಮನೆಯಿಂದ ಹೊರಡುವ ಮೊದಲು ಮೊಸರು-ಸಕ್ಕರೆಯನ್ನು ಸೇವಿಸಿದರೆ ನಿಮ್ಮ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ. ಇದಲ್ಲದೆ ಕಡಿಮೆ ನೀರು ಕುಡಿಯುವವರಿಗೆ ಮೊಸರು ಉತ್ತಮ ಆಯ್ಕೆಯಾಗಿದೆ. ಒಟ್ಟಾರೆ ಮೊಸರು ಮತ್ತು ಸಕ್ಕರೆ(Sugar) ತಿನ್ನುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಉಂಟಾಗುವ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ: Hair Fall Treatment: ಕೂದಲು ಎಂದಿಗೂ ಉದುರಬಾರದು ಎಂದರೆ ಹೀಗೆ ಮಾಡಿ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News