Weight Loss Home Remedies: ವೇಗವಾಗಿ ತೂಕ ಇಳಿಕೆಗೆ ಈ ಕಪ್ಪು ಹಣ್ಣಿನ ಸೇವನೆ ಒಂದು ರಾಮಬಾಣ ಮನೆಮದ್ದು!

Weight Loss Home Remedies: ವಿಟಮಿನ್ ಸಿ, ಫೈಬರ್, ಆಂಟಿ-ಆಕ್ಸಿಡೆಂಟ್‌ಗಳು, ಸಾವಯವ ಆಮ್ಲಗಳು ಮತ್ತು ಪಾಲಿಯೋಸ್‌ನಂತಹ ಪೋಷಕಾಂಶಗಳು ದ್ರಾಕ್ಷಿಯಲ್ಲಿ ಕಂಡುಬರುತ್ತವೆ. (Lifestyle News In Kannada / Health News In Kannada)  

Written by - Nitin Tabib | Last Updated : Jan 13, 2024, 09:15 PM IST
  • ಕಪ್ಪು ದ್ರಾಕ್ಷಿಯು ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕಲು ಸಹ ಸಹಾಯ ಮಾಡುತ್ತದೆ.
  • ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಆಂತರಿಕ ಅಂಗಗಳಿಗೆ ಲಾಭವಾಗುತ್ತದೆ.
  • ಯಕೃತ್ತು ಮತ್ತು ಮೂತ್ರಪಿಂಡಗಳು ಸೇರಿದಂತೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಕಪ್ಪು ದ್ರಾಕ್ಷಿಯನ್ನು ಸೇವಿಸಬೇಕು.
Weight Loss Home Remedies: ವೇಗವಾಗಿ ತೂಕ ಇಳಿಕೆಗೆ ಈ ಕಪ್ಪು ಹಣ್ಣಿನ ಸೇವನೆ ಒಂದು ರಾಮಬಾಣ ಮನೆಮದ್ದು! title=

ಬೆಂಗಳೂರು: ಹೆಚ್ಚುತ್ತಿರುವ ತೂಕ ಮತ್ತು ಬೊಜ್ಜು ಇಂದಿನ ಕಾಲದ ದೊಡ್ಡ ಸಮಸ್ಯೆಯಾಗಿವೆ. ಆಹಾರ ಮತ್ತು ಜೀವನಶೈಲಿ ಸಂಬಂಧಿತ ಅಡಚಣೆಗಳು ಮತ್ತು ಆನುವಂಶಿಕ ಕಾರಣಗಳಿಂದಾಗಿ ಜನರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥೂಲಕಾಯದಿಂದಾಗಿ, ದೇಹವು ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್‌ನಂತಹ ಗಂಭೀರ ಕಾಯಿಲೆಗಳಿಗೆ ಗುರಿಯಾಗಬಹುದು. ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಅಥವಾ ತೂಕವನ್ನು ಇಳಿಕೆ ಮಾಡಲು, ಜನರು ವಿವಿಧ ರೀತಿಯ ಆಹಾರ ಮತ್ತು ಪೂರಕಗಳನ್ನು ಸೇವಿಸುತ್ತಾರೆ. ಆದರೆ ಕಪ್ಪು ದ್ರಾಕ್ಷಿಯನ್ನು ಸೇವಿಸುವುದರಿಂದ ಅದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಕಪ್ಪು ದ್ರಾಕ್ಷಿಯನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಿ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ತೂಕವನ್ನು ಇಳಿಸಿಕೊಳ್ಳಲು ಕಪ್ಪು ದ್ರಾಕ್ಷಿಯನ್ನು ತಿನ್ನುವ ಪ್ರಯೋಜನಗಳು ಮತ್ತು ಸರಿಯಾದ ಮಾರ್ಗ ಯಾವುದು ತಿಳಿದುಕೊಳ್ಳೋಣ ಬನ್ನಿ.(Lifestyle News In Kannada / Health News In Kannada)

ತೂಕ ಇಳಿಕೆಗೆ ಕಪ್ಪು ದ್ರಾಕ್ಷಿಯ ಪ್ರಯೋಜನಗಳು
ತೂಕವನ್ನು ಇಳಿಸಿಕೊಳ್ಳಲು, ಸಾಕಷ್ಟು ಪ್ರಮಾಣದ ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಹೊಂದಿರುವ ಆಹಾರವನ್ನು ನಿಮ್ಮ ನಿಯಮಿತ ಸೇರಿಸಬೇಕು. ಈ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ದೇಹದ ಚಯಾಪಚಯ ಸುಧಾರಿಸುತ್ತದೆ ಮತ್ತು ತೂಕ ಇಳಿಕೆ ಮಾಡಲು ಅದು ಸಹಾಯ ಮಾಡುತ್ತದೆ. ಈ ಕುರಿತು ಹೇಳುವ ಆರೋಗ್ಯ ತಜ್ನರು, ತೂಕ ಇಳಿಸಿಕೊಳ್ಳಲು ದ್ರಾಕ್ಷಿ ತಿನ್ನುವುದು ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ, ವಿಟಮಿನ್ ಸಿ, ಫೈಬರ್, ಆಂಟಿ ಆಕ್ಸಿಡೆಂಟ್, ಸಾವಯವ ಆಮ್ಲಗಳು ಮತ್ತು ಪಾಲಿಯೋಸ್ ನಂತಹ ಪೋಷಕಾಂಶಗಳು ದ್ರಾಕ್ಷಿಯಲ್ಲಿ ಕಂಡುಬರುತ್ತವೆ. ಈ ಪೋಷಕಾಂಶಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೇ. ಇದಲ್ಲದೆ ಅಜೀರ್ಣ, ಗ್ಯಾಸ್, ಹುಳಿ ಸುಡುವ ಸಂವೇದನೆ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಪ್ಪು ದ್ರಾಕ್ಷಿಯು ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕಲು ಸಹ ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಆಂತರಿಕ ಅಂಗಗಳಿಗೆ ಲಾಭವಾಗುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳು ಸೇರಿದಂತೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಕಪ್ಪು ದ್ರಾಕ್ಷಿಯನ್ನು ಸೇವಿಸಬೇಕು. ಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಪ್ಪು ದ್ರಾಕ್ಷಿಯಲ್ಲಿ ಕಂಡುಬರುತ್ತವೆ, ಇದು ತೂಕವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Diabetes Symptoms: ಮಧುಮೇಹದ ಈ ಲಕ್ಷಣಗಳತ್ತ ಸಾಮಾನ್ಯವಾಗಿ ಯಾರ ಗಮನವೂ ಹರಿಯುವುದಿಲ್ಲ!

ತೂಕ ಇಳಿಸಿಕೊಳ್ಳಲು ಕಪ್ಪು ದ್ರಾಕ್ಷಿಯನ್ನು ಹೇಗೆ ಸೇವಿಸಬೇಕು?
ಕಪ್ಪು ದ್ರಾಕ್ಷಿಯನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸುವುದು ತೂಕವನ್ನು ಇಳಿಕೆ ಮಾಡಲು ಪ್ರಯೋಜನಕಾರಿಯಾಗಿದೆ. ಕಪ್ಪು ದ್ರಾಕ್ಷಿಯನ್ನು ನಿಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು. ಬೆಳಗಿನ ಉಪಹಾರದಿಂದ ಮಧ್ಯಾಹ್ನದ ಊಟ ಮತ್ತು ಸಂಜೆಯ ತಿಂಡಿಯವರೆಗೆ ಇದನ್ನು ಸುಲಭವಾಗಿ ಸೇವಿಸಬಹುದು. ನೀವು ಕಪ್ಪು ದ್ರಾಕ್ಷಿ ರಸವನ್ನು ಸಹ ಕುಡಿಯಬಹುದು, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಕಪ್ಪು ದ್ರಾಕ್ಷಿಯನ್ನು ತಿನ್ನುವುದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Weight Loss Tips: ಶರೀರದ ಹೆಚ್ಚುವರಿ ಬೊಜ್ಜನ್ನು ಬೆಣ್ಣೆಯಂತೆ ಕರಗಿಸುತ್ತೆ ಈ ಆಯುರ್ವೇದ ಗಿಡದ ಎಲೆಗಳು, ಬಳಕೆ ಪದ್ಧತಿ ಇಲ್ಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News