Weekly Horoscope: ಈ ರಾಶಿಯವರಿಗೆ ಭಾರೀ ಲಾಭ, ಹೋಳಿ ಹಬ್ಬದಂದು ಹಣದ ಸುರಿಮಳೆ!

Weekly Horoscope: ಬಣ್ಣದ ಹಬ್ಬ ಹೋಳಿಯನ್ನು ಮಾರ್ಚ್ 2ನೇ ವಾರದಲ್ಲಿ ಆಚರಿಸಲಾಗುತ್ತದೆ. ಹೋಳಿ ಈ ವಾರ ಕೆಲವು ರಾಶಿಗಳ ಜೀವನದಲ್ಲಿ ಸಂತೋಷ, ಪ್ರಗತಿ ಮತ್ತು ಹಣದ ಬಣ್ಣಗಳನ್ನು ತರುತ್ತದೆ.

Written by - Puttaraj K Alur | Last Updated : Mar 5, 2023, 09:09 AM IST
  • ಮೇಷ ರಾಶಿಯವರ ಕುಟುಂಬದಲ್ಲಿ ಸಂಭ್ರಮದ ವಾತಾವರಣವಿರುತ್ತದೆ
  • ವೃಷಭ ರಾಶಿಯವರಿಗೆ ಈ ಸಮಯವು ತುಂಬಾ ಮಂಗಳಕರವಾಗಿರುತ್ತದೆ
  • ಕರ್ಕ ರಾಶಿಯವರಿಗೆ ಆಕಸ್ಮಿಕ ಧನಲಾಭ & ವೃತ್ತಿಯಲ್ಲಿ ಪ್ರಗತಿಯಾಗಲಿದೆ
Weekly Horoscope: ಈ ರಾಶಿಯವರಿಗೆ ಭಾರೀ ಲಾಭ, ಹೋಳಿ ಹಬ್ಬದಂದು ಹಣದ ಸುರಿಮಳೆ! title=
ವಾರದ ಭವಿಷ್ಯ

ನವದೆಹಲಿ: ಬಣ್ಣದ ಹಬ್ಬ ಹೋಳಿಯನ್ನು ಮಾರ್ಚ್ 2ನೇ ವಾರದಲ್ಲಿ ಆಚರಿಸಲಾಗುತ್ತದೆ. ಹೋಳಿ ಈ ವಾರ ಕೆಲವು ರಾಶಿಗಳ ಜೀವನದಲ್ಲಿ ಸಂತೋಷ, ಪ್ರಗತಿ ಮತ್ತು ಹಣದ ಬಣ್ಣಗಳನ್ನು ತರುತ್ತದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಹೊಂದುವ ಸಾಧ್ಯತೆಯಿದೆ ಮತ್ತು ವಿತ್ತೀಯ ಪ್ರಯೋಜನ ಪಡೆಯುತ್ತಾರೆ. 2023ರ ಮಾರ್ಚ್ 6ರಿಂದ 12ರವರೆಗಿನ ಅವಧಿಯು ಯಾರಿಗೆ ಶುಭವಾಗಿರುತ್ತದೆ ಎಂದು ತಿಳಿಯಿರಿ.

ಮೇಷ ರಾಶಿ: ಈ ವಾರ ನೀವು ಉತ್ತಮ ಕೆಲಸ ಮಾಡುವ ಮೂಲಕ ಲಾಭ ಪಡೆಯುತ್ತೀರಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಕಾಣಬಹುದು. ಪ್ರಯಾಣದ ಸಾಧ್ಯತೆಗಳಿವೆ. ವಿದೇಶದಿಂದ ಲಾಭವಾಗಲಿದೆ.

ವೃಷಭ ರಾಶಿ: ಈ ಸಮಯವು ನಿಮಗೆ ತುಂಬಾ ಮಂಗಳಕರವಾಗಿದೆ. ನೀವು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದರೆ ಇದು ಉತ್ತಮ ಸಮಯ. ನಿಮಗೆ ಇದು ಸುವರ್ಣ ಅವಕಾಶದ ಸಮಯ. ಇದು ನಿಮಗೆ ದೀರ್ಘಕಾಲದವರೆಗೆ ಪ್ರಯೋಜನ ನೀಡುತ್ತದೆ. ಹಣ ಗಳಿಸುವ ಬಲವಾದ ಅವಕಾಶಗಳಿವೆ.

ಮಿಥುನ ರಾಶಿ: ಈ ವಾರ ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುವಿರಿ. ಬಡ್ತಿಯ ಅವಕಾಶಗಳಿವೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಕರ್ಕ ರಾಶಿ: ಈ ವಾರ ಕೆಂಪು ಬಣ್ಣ ಬಳಸುವುದರಿಂದ ನಿಮಗೆ ಬಹಳಷ್ಟು ಪ್ರಯೋಜನಗಳು ಸಿಗುತ್ತವೆ. ಆಕಸ್ಮಿಕ ಹಣ ಸಿಗುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯಾಗಬಹುದು.

ಇದನ್ನೂ ಓದಿ: Saturn Transit 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಗೋಚರ, 7 ತಿಂಗಳು ಈ 5 ರಾಶಿಗಳ ಜನರು ಮುಟ್ಟಿದ್ದೆಲ್ಲ ಚಿನ್ನ!

ಸಿಂಹ ರಾಶಿ: ಈ ವಾರದ ಫಲಿತಾಂಶವು ಯಾವುದೇ ವಿಷಯದಲ್ಲಿ ನಿಮ್ಮ ಪರವಾಗಿರಬಹುದು. ದೇವರಲ್ಲಿ ಸಂಪೂರ್ಣ ನಂಬಿಕೆ ಇರಲಿ. ನೀವು ಖಂಡಿತ ಯಶಸ್ಸನ್ನು ಪಡೆಯುತ್ತೀರಿ. ವೈಯಕ್ತಿಕ ಜೀವನದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ಹಣವು ಪ್ರಯೋಜನಕಾರಿಯಾಗಲಿದೆ.

ಕನ್ಯಾ ರಾಶಿ: ಈ ವಾರ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಿಮಗೆ ಸಿಗುವ ಅವಕಾಶವು ಬಹಳಷ್ಟು ಪ್ರಯೋಜನ ನೀಡುತ್ತದೆ. ಬಲವಾದ ವಿತ್ತೀಯ ಲಾಭಗಳನ್ನು ಪಡೆಯುವ ಸಾಧ್ಯತೆಗಳಿವೆ. ಶುಭ ಸುದ್ದಿಗಳಿಂದ ನಿಮಗೆ ಖುಷಿಯಾಗುತ್ತದೆ.

ತುಲಾ ರಾಶಿ: ಈ ವಾರ ಮಹಿಳೆಯರಿಗೆ ಮಂಗಳಕರವಾಗಿರುತ್ತದೆ. ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಅದೃಷ್ಟವು ಬೆಳಗುತ್ತದೆ. ಹಣ ಗಳಿಸುವ ಬಲವಾದ ಅವಕಾಶಗಳಿವೆ. ನೀವು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.

ವೃಶ್ಚಿಕ ರಾಶಿ: ದೀರ್ಘಕಾಲದ ಕಾಯಿಲೆಗಳು ತೊಂದರೆ ಉಂಟುಮಾಡಬಹುದು. ಮಾನಹಾನಿಯಾಗುವ ಸಾಧ್ಯತೆ ಇದೆ. ದೊಡ್ಡ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಅನಾವಶ್ಯಕವಾಗಿ ವಾದ ಮಾಡಬೇಡಿ. ಧ್ಯಾನ ಮಾಡುವುದು ಉತ್ತಮ.

ಇದನ್ನೂ ಓದಿ: Shukra Gochar 2023: ಈ ರಾಶಿಯವರ ಮೇಲೆ ಬಿದ್ದಿದೆ ಶುಕ್ರನ ಕಣ್ಣು: ಭಾರೀ ಅಪರೂಪದ ಸರ್ಪೈಸ್ ಕಾದಿದೆ!

ಧನು ರಾಶಿ: ಈ ವಾರ ನಿಮ್ಮನ್ನು ಧನಾತ್ಮಕವಾಗಿರಿಸಿಕೊಳ್ಳಿ. ಬುದ್ಧಿವಂತಿಕೆಯಿಂದ ವರ್ತಿಸಿ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಸಿಗುತ್ತದೆ. ಆರೋಗ್ಯದ ಬಗ್ಗೆ ಗಮನ ನೀಡಬೇಕು. ಅನಗತ್ಯವಾಗಿ ಯಾರೊಂದಿಗೂ ವಾದ ಮಾಡಬೇಡಿ.

ಮಕರ ರಾಶಿ: ನೀವು ಕೆಲಸದ ಜೊತೆಗೆ ವಿಶ್ರಾಂತಿಗೆ ಗಮನ ಕೊಡಬೇಕು. ಸಾಕಷ್ಟು ನಿದ್ರೆ ಮಾಡಬೇಕು. ಜಗಳಗಳಿಂದ ದೂರವಿರಿ. ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು.

ಕುಂಭ ರಾಶಿ: ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಗತ್ಯ ಒತ್ತಡ ತೆಗೆದುಕೊಳ್ಳಬೇಡಿ. ಈ ವಾರ ಹಲವು ಸವಾಲು ಎದುರಿಸಬೇಕಾಗಬಹುದು. ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ.

ಮೀನ ರಾಶಿ: ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ವಿಶೇಷವಾಗಿ ಮಹಿಳೆಯರಿಗೆ ಈ ಸಮಯ ತುಂಬಾ ಒಳ್ಳೆಯದು. ನೀವು ಮಕ್ಕಳಿಂದ ಸಂತೋಷ  ಪಡೆಯುತ್ತೀರಿ. ಅವಿವಾಹಿತರ ವಿವಾಹ ನಿಶ್ಚಯವಾಗಬಹುದು.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News