October 10 ರವರೆಗಿನ ಸಮಯ ಈ 4 ರಾಶಿಗಳ ಜನರ ಪಾಲಿಗೆ ವರದಾನಕ್ಕೆ ಸಮಾನ

Weekly Horoscope: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ನಡೆ ಪರಿವರ್ತನೆಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಗ್ರಹ ನಕ್ಷತ್ರಗಳ ನಡೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಈ ಗ್ರಹಗಳ ನಡೆ ಕೆಲ ರಾಶಿಗಳ ಪಾಲಿಗೆ ಉತ್ತಮ ಫಲಿತಾಂಶಗಳನ್ನು ನೀಡಿದರೆ, ಕೆಲ ರಾಶಿಗಳ ಪಾಲಿಗೆ ಅಹಿತಕರ ಫಲಿತಾಂಶಗಳನ್ನು ನೀಡುತ್ತದೆ.

Written by - Nitin Tabib | Last Updated : Oct 5, 2022, 04:18 PM IST
  • ಈ ಗ್ರಹಗಳ ನಡೆ ಕೆಲ ರಾಶಿಗಳ ಪಾಲಿಗೆ ಉತ್ತಮ ಫಲಿತಾಂಶಗಳನ್ನು ನೀಡಿದರೆ,
  • ಕೆಲ ರಾಶಿಗಳ ಪಾಲಿಗೆ ಅಹಿತಕರ ಫಲಿತಾಂಶಗಳನ್ನು ನೀಡುತ್ತದೆ.
  • ಗ್ರಹಗಳ ಈ ನಡೆ ಬದಲಾವಣೆಯಿಂದಲೇ ರಾಶಿ-ಭವಿಷ್ಯದ ಲೆಕ್ಕಾಚಾರ ಹಾಕಲಾಗುತ್ತದೆ.
October 10 ರವರೆಗಿನ ಸಮಯ ಈ 4 ರಾಶಿಗಳ ಜನರ ಪಾಲಿಗೆ ವರದಾನಕ್ಕೆ ಸಮಾನ title=
Weekly Horoscope

Sapatahik Rashifal - ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ನಡೆ ಪರಿವರ್ತನೆಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಗ್ರಹ ನಕ್ಷತ್ರಗಳ ನಡೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಈ ಗ್ರಹಗಳ ನಡೆ ಕೆಲ ರಾಶಿಗಳ ಪಾಲಿಗೆ ಉತ್ತಮ ಫಲಿತಾಂಶಗಳನ್ನು ನೀಡಿದರೆ, ಕೆಲ ರಾಶಿಗಳ ಪಾಲಿಗೆ ಅಹಿತಕರ ಫಲಿತಾಂಶಗಳನ್ನು ನೀಡುತ್ತದೆ. ಗ್ರಹಗಳ ಈ ನಡೆ ಬದಲಾವಣೆಯಿಂದಲೇ ರಾಶಿ-ಭವಿಷ್ಯದ ಲೆಕ್ಕಾಚಾರ ಹಾಕಲಾಗುತ್ತದೆ. ಗ್ರಹಗಳ ಈ ನಡೆಗಳ ಕಾರಣ ಅಕ್ಟೋಬರ್ 10ರವರೆಗೆ ಕೆಲ ರಾಶಿಗಳ ಪಾಲಿಗೆ ಅತ್ಯಂತ ಶುಭ ಫಲಿತಾಂಶ ನೀಡಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

1. ಮೇಷ ರಾಶಿ - ಉದ್ಯಮ ವಿಸ್ತಾರ ಯೋಜನೆಗಳು ಸಾಕಾರಗೊಳ್ಳಲಿವೆ. ಸಹೋದರರ ಬೆಂಬಲ ನಿಮಗೆ ಸಿಗಲಿದೆ. ಆದರೆ ಕಠಿಣ ಪ್ರರಿಶ್ರಮವಿರಲಿದೆ ಎಂಬುದನ್ನು ನೆನಪಿನಲ್ಲಿಡಿ. ಮನೆ-ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಉದೊಗೊರೆಯ ರೂಪದಲ್ಲಿ ವಸ್ತ್ರಗಳು ಸಿಗುವ ಎಲ್ಲಾ ಸಾಧ್ಯತೆಗಳಿವೆ. ನೌಕರಿಯಲ್ಲಿ ಪರಿವರ್ತನೆಯ ಜೊತೆಗೆ, ಸ್ಥಾನ ಪರಿವರ್ತನೆಯ ಸಾಧ್ಯತೆ ಕೂಡ ಇದೆ. ಆಮದು-ರಫ್ತು ವ್ಯಾಪಾರದಲ್ಲಿ ಲಾಭದ ಅವಕಾಶಗಳು ಕೂಡಿಬರಲಿವೆ. ತಾಯಿಯ ಸಾನಿಧ್ಯ ಪ್ರಾಪ್ತಿಯಾಗಲಿದೆ. ವಾಹನ ಸುಖದಲ್ಲಿ ವೃದ್ಧಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಉದ್ಯೋಗದಲ್ಲಿ ವರಿಷ್ಠರ ಬೆಂಬಲ ನಿಮಗೆ ಸಿಗಲಿದೆ

2. ವೃಶ್ಚಿಕ ರಾಶಿ - ಆತ್ಮವಿಶ್ವಸದಿಂದ ತುಂಬಿರುವಿರಿ. ಮನೆ-ಕುಟುಂಬದಲ್ಲಿ ಸುಖ-ಸೌಕರ್ಯಗಳ ವಿಸ್ತಾರದ ಎಲ್ಲಾ ಸಾಧ್ಯತೆಗಳಿವೆ. ಬಾಳಸಂಗಾತಿಯ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಪರಿವರ್ತನೆಯ ಸಾಧ್ಯತೆ ಇದೆ. ತಾಯಿಯ ಸಾನಿಧ್ಯ ಹಾಗೂ ಬೆಂಬಲ ನಿಮಗೆ ಸಿಗಲಿದೆ. ಲಾಭಾಂಶ ಹೆಚ್ಚಾಗಲಿದೆ. ನೌಕರಿಯಲ್ಲಿ ಅಧಿಕಾರಿಗಳ ಸಹಯೋಗ ನಿಮಗೆ ಪ್ರಾಪ್ತಿಯಾಗಲಿದೆ. ಈ ಸಮಯ ನಿಮಗೆ ಯಾವುದೇ ವರದಾನಕ್ಕಿಂತ ಕಮ್ಮಿಯೇನಿಲ್ಲ ಎಂದರೆ ತಪ್ಪಾಗಲಾರದು.

3. ಧನು ರಾಶಿ - ಆತ್ಮವಿಶ್ವಾಸ ಸಂಪೂರ್ಣವಿರಲಿದೆ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹೊಸ ಮನೆ ಅಥವಾ ವಾಹನ ಖರೀದಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದಾಂಪತ್ಯ ಜೀವನ ಸುಖದಿಂದ ಕೂಡಿರಲಿದೆ. ನೌಕರಿಯಲ್ಲಿ ಪರಿವರ್ತನೆಯ ಸಾಧ್ಯತೆಗಳಿವೆ. ಯಾವುದಾದರೊಂದು ದೂರದ ಪ್ರದೇಶಕ್ಕೆ ಹೋಗಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಕಾಲ ಒಂದು ವರದಾನವೇ ಸರಿ. 

ಇದನ್ನೂ ಓದಿ-Chanakya Niti: ಇಂತಹ ಮಹಿಳೆ ಸಂಗಾತಿಯಾಗಿ ಸಿಗುವುದು ಎಲ್ಲರ ಭಾಗ್ಯದಲ್ಲಿರಲ್ಲ!

4. ಮೀನ ರಾಶಿ - ಕುಟುಂಬದಲ್ಲಿ ಬೆಂಬಲ ಸಿಗಲಿದೆ. ಕುಟುಂಬದ ಜೊತೆ ಸೇರಿ ಯಾವುದಾದರೊಂದು ಧಾರ್ಮಿಕ ಸ್ಥಾನಕ್ಕೆ ಭೇಟಿ ನೀಡುವ ಅವಕಾಶ ಕೂಡಿ ಬರಲಿದೆ. ಯಾವುದಾದರೊಂದು ಹಳೆ ಸ್ನೇಹಿತನ ಸಹಕಾರದಿಂದ ನೌಕರಿಯ ಹೊಸ ಅವಕಾಶಗಳು ಸಿಗಲಿವೆ. ಕಾರ್ಯಕ್ಷೇತ್ರದಲ್ಲಿ ವೃದ್ಧಿಯ ಸಾಧ್ಯತೆ ಇದೆ. ವಸ್ತ್ರಗಳು ಉಡುಗೊರೆಯ ರೂಪದಲ್ಲಿ ಸಿಗುವ ಸಾಧ್ಯತೆಗಳಿವೆ. ಮೀನ ರಾಶಿಯ ಜಾತಕದ ಜನರ ಪಾಲಿಗೆ ಡಿಸೆಂಬರ್ 12ರವರೆಗಿನ ಕಾಲ ಅತ್ಯಂತ ಶುಭ ವಾಗಿರಲಿದೆ.

ಇದನ್ನೂ ಓದಿ-Dussehra 2022: ಜೀವನದಲ್ಲಿನ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಹೊಂದಬೇಕೆ? ನಾಳೆ ತಪ್ಪದೆ ಈ ಕೆಲಸ ಮಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News