Weekly Horoscope: ಈ ರಾಶಿಯರಿಗೆ ಅದೃಷ್ಟದ ಜೊತೆಗೆ ಧನಲಾಭದ ಸಾಧ್ಯತೆ

Weekly Horoscope: ಡಿಸೆಂಬರ್ 4ರಿಂದ 11ರವರೆಗಿನ ನಿಮ್ಮ ವಾರ ಭವಿಷ್ಯ ಹೇಗಿದೆ ಎಂದು ತಿಳಿಯಿರಿ. ಈ ವಾರ ಯಾವ ರಾಶಿಯವರ ಅದೃಷ್ಟ ಚೆನ್ನಾಗಿದೆ. ಯಾರಿಗೆ ಧನಲಾಭವಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Written by - Zee Kannada News Desk | Last Updated : Dec 5, 2022, 09:35 AM IST
  • ಮಿಥುನ ರಾಶಿಯವರಿಗೆ ಸ್ತ್ರೀಯರಿಂದ ಕಂಟಕ, ಮನೆ ಖರೀದಿಯಲ್ಲಿ ಯಶಸ್ವಿಯಾಗಲಿದ್ದೀರಿ
  • ಸಿಂಹ ರಾಶಿಯವರಿಗೆ ಹಿತಶತ್ರುಗಳಿಂದ ಸಮಸ್ಯೆ ಉಂಟಾಗಲಿದ್ದು, ಧನಲಾಭವಾಗುವ ಸಾಧ‍್ಯತೆಯಿದೆ
  • ತುಲಾ ರಾಶಿಯವರ ಪ್ರಯತ್ನ ಕಾರ್ಯ ಅರ್ಧಕ್ಕೆ ನಿಲ್ಲುವ ಸಾಧ‍್ಯತೆ, ಧನಲಾಭ, ಕೀರ್ತಿಲಾಭವಿರುತ್ತದೆ
Weekly Horoscope: ಈ ರಾಶಿಯರಿಗೆ ಅದೃಷ್ಟದ ಜೊತೆಗೆ ಧನಲಾಭದ ಸಾಧ್ಯತೆ title=
ನಿಮ್ಮ ವಾರಭವಿಷ್ಯ ತಿಳಿಯಿರಿ

ವಾರಭವಿಷ್ಯ: ಡಿಸೆಂಬರ್ 4ರಿಂದ ಡಿಸೆಂಬರ್ 11ರವರೆಗೆ

ವಿಶೇಷ ದಿನಗಳು

5ನೇ ಡಿಸೆಂಬರ್: ಸೋಮವಾರ – ಸೋಮ ಪ್ರದೋಷ

6ನೇ ಡಿಸೆಂಬರ್: ಮಂಗಳವಾರ – ಶಿವ ದೀಪೋತ್ಸವ

7ನೇ ಡಿಸೆಂಬರ್: ಬುಧವಾರ – ದತ್ತಾತ್ರೇಯ ಜಯಂತಿ, ಧನಲಕ್ಷ್ಮಿ ಪೂಜೆ, ಹುತ್ತರಿ ಹಬ್ಬ ಪ್ರಾರಂಭ, ಶ್ರೀ ಸತ್ಯನಾರಾಯಣ ಪೂಜೆ (ಸೂರ್ಯಾಸ್ತದ ನಂತರ)

8ನೇ ಡಿಸೆಂಬರ್: ಗುರುವಾರ – ಹುಣ್ಣಿಮೆ, ವಿಷ್ಣು ದೀಪೋತ್ಸವ, ಮಾರ್ಗಶೀರ್ಷ ಲಕ್ಷ್ಮಿ ವೃತ, ಹುತ್ತರಿ ಹಬ್ಬ

11ನೇ ಡಿಸೆಂಬರ್: ಭಾನುವಾರ – ಶ್ರೀ ಮಹಾಗಣಪತಿ ಸಂಕಷ್ಟ ಚೌತಿ

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ ರಾಶಿ: ಒಡಹುಟ್ಟಿದವರಿಂದ ನಿಮಗೆ ಲಾಭವಾಗಲಿದೆ. ರಹಸ್ಯ ಮಾತುಕತೆ ಮೂಲಕ ಕಾರ್ಯಸಾಧನೆಯಾಗಲಿದೆ.

ವೃಷಭ ರಾಶಿ: ಸರ್ಕಾರಿ ಕೆಲಸಗಳಲ್ಲಿ ಅಡಚಣೆ ಉಂಟಾಗಲಿದೆ. ನಿಮ್ಮ ಶರೀರದಲ್ಲಿ ಪಿತ್ತ ಪ್ರಕೋಪವಿರಲಿದೆ. ಚರ್ಮ ವ್ಯಾಧಿಯ ಸಂಭವ.

ಮಿಥುನ ರಾಶಿ: ಮಕ್ಕಳೊಂದಿಗೆ ಮನಃಸ್ತಾಪ ಉಂಟಾಗಲಿದೆ. ಮನೆ ಖರೀದಿಯಲ್ಲಿ ಯಶಸ್ಸು ಸಿಗಲಿದೆ. ಸ್ತ್ರೀಯರಿಂದ ನಿಮಗೆ ಕಂಟಕ ಉಂಟಾಗಲಿದೆ.

ಕಟಕ ರಾಶಿ: ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಸಂಭವ. ಪ್ರಯಾಣದ ವೇಳೆ ಕಳ್ಳತನವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆಸ್ತಿಯಲ್ಲಿ ಲಾಭವಾಗಲಿದೆ

ಸಿಂಹ ರಾಶಿ: ಹಿತಶತ್ರುಗಳಿಂದ ಹಲ್ಲೆಯಾಗುವ ಸಂಭವ. ಅತಿಯಾದ ಪರಾಕ್ರಮದಿಂದ ತೊಂದರೆಯಾಗಲಿದೆ. ಧನಲಾಭವಾಗುವ ಸಾಧ‍್ಯತೆ ಇದೆ.

ಕನ್ಯಾ ರಾಶಿ: ನೆಮ್ಮದಿಯ ಜೀವನ ನಿಮ್ಮದಾಗಲಿದೆ. ಹೊಸ ಯೋಜನೆಗಳು ಆರಂಭವಾಗುವ ಸಾಧ‍್ಯತೆ. ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು.

ತುಲಾ ರಾಶಿ: ಪ್ರಯತ್ನ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಾಧ‍್ಯತೆ. ಧನಲಾಭ, ಕೀರ್ತಿಲಾಭ ಪೂರ್ಣಪ್ರಮಾಣದಿಂದ ದೊರೆಯುವ ಸಾಧ‍್ಯತೆ. ಮಾತಿನಲ್ಲಿ ಗೌರವ ಇರಲಿ.

ವೃಶ್ಚಿಕ ರಾಶಿ: ವಿವಾಹ ನಿಶ್ಚಯದ ಮಾತುಕತೆಗಳು. ಅನಿರೀಕ್ಷಿತ ಧನಲಾಭವಾಗಲಿದೆ. ನಿದ್ರೆಯಲ್ಲಿ ಸಮಸ್ಯೆ ಉಂಟಾಗಲಿದೆ. ಹೆಚ್ಚು ಖರ್ಚುಗಳ ಸಾಧ್ಯತೆ.

ಇದನ್ನೂ ಓದಿ: Basil Benefits : ಅಪ್ಪಿತಪ್ಪಿಯೂ ಈ ತುಳಸಿಯನ್ನು ಮನೆಯಲ್ಲಿ ನೆಡಬೇಡಿ? ದರಿದ್ರ ಹೆಚ್ಚಾಗುತ್ತದೆ

ಧನು ರಾಶಿ: ಹೊಸ ಉದ್ಯಮಗಳಿಂದ ಯಶಸ್ಸು ಸಿಗಲಿದೆ. ಹೊಸ ನಿವೇಶನ ಖರೀದಿ ಸಾಧ‍್ಯತೆ. ಕೆಟ್ಟ ಕನಸುಗಳು ಬೀಳಲಿವೆ. ತಂದೆಯ ಆರೋಗ್ಯದಲ್ಲಿ ಏರುಪೇರಾಗಲಿದೆ.

ಮಕರ ರಾಶಿ: ಕುಟುಂಬದವರಿಗಾಗಿ ಸಮಯ ಹಾಗೂ ಸಾಮರ್ಥ್ಯದ ವಿನಿಯೋಗ. ಗರ್ಭಿಣಿ ಸ್ತ್ರೀಯರಿಗೆ ಸಮಸ್ಯೆಗಳು ಉಂಟಾಗಲಿದೆ. ಪ್ರೇಮ ಪ್ರಕರಣದಲ್ಲಿ ಸೋಲುಂಟಾಗಲಿದೆ.

ಕುಂಭ ರಾಶಿ: ಗುರು ಬಲದಿಂದ ಕಾರ್ಯಸಿದ್ಧಿಯಾಗಲಿದೆ. ಉತ್ತಮ ಕಾರ್ಯಕ್ರಮಗಳಿಗೆ ಆಹ್ವಾನ. ನಿಮಗೆ ಧನಲಾಭವಾಗಲಿದೆ.

ಮೀನ ರಾಶಿ: ಮನೆಯಲ್ಲಿ ಕಲಹಗಳು ಉಂಟಾಗಲಿವೆ. ಸಂಬಂಧಗಳಲ್ಲಿ ಬಿರುಕು ಸಾಧ್ಯತೆ. ಕೆಲಸದ ನಿಮಿತ್ತ ಬೇರೆ ಮನೆಗೆ ಹೋಗುವ ಸಾಧ‍್ಯತೆ.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News