ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳಬೇಕೆ? ಈ ಪಾನೀಯ ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ!

Weight Loss Drink: ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವ ಜನರು ತಮ್ಮ ಆಹಾರದಲ್ಲಿ ಇಂಗು ನೀರನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಈ ನೀರಿನಿಂದ ತೂಕವು ಬೇಗನೆ ಇಳಿಕೆಯಾಗಲು ಪ್ರಾರಂಭಿಸುತ್ತದೆ. ನೀವೂ ಕೂಡ ನಿಮ್ಮ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಪ್ರತಿದಿನ ಈ ನೀರನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ.  

Written by - Nitin Tabib | Last Updated : Mar 18, 2023, 09:18 PM IST
  • ಇಂಗು ಬೊಜ್ಜನ್ನು ಹೇಗೆ ಕಡಿಮೆ ಮಾಡುತ್ತದೆ ಎಂದು ನೀವೂ ಕೂಡ ಯೋಚಿಸುತ್ತಿರಬಹುದು.
  • ಹೆಚ್ಚು ಯೋಚಿಸುವ ಅಗತ್ಯವಿಲ್ಲ.
  • ಏಕೆಂದರೆ ಇಂಗು ನಿಮ್ಮ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಮೈಗ್ರೇನ್ ಸಮಸ್ಯೆಯಲ್ಲೂ ಸಹ ಸಹಾಯ ಮಾಡುತ್ತದೆ.
ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳಬೇಕೆ? ಈ ಪಾನೀಯ ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ! title=
ವೇಗವಾಗಿ ತೂಕ ಕಳೆದುಕೊಳ್ಳಲು ಇಲ್ಲಿದೆ ಒಂದು ಪಾನೀಯ!

Weight Loss Home Remedy: ತೂಕ ಇಳಿಕೆ ಮಾಡುವಲ್ಲಿ ತೊಡಗಿರುವ ಬಹುತೇಕ ಜನರು ಹೊಸದನ್ನು ಪ್ರಯತ್ನಿಸುತ್ತಿರುತ್ತಾರೆ. ನಾವೂ ಕೂಡ ನಿಮಗೆ ಅಂತಹುದೊಂದು ಪರಿಹಾರವನ್ನು ಸೂಚಿಸುತ್ತಿದ್ದೇವೆ, ಇದು ತೂಕವನ್ನು ವೇಗವಾಗಿ ಇಳಿಕೆ ಮಾಡುತ್ತದೆ. ಬಹುತೇಕ ಜನರಿಗೆ ಇಂಗಿನ ಬಗ್ಗೆ ಮಾಹಿತಿ ಇದ್ದೆ ಇರುತ್ತದೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಇಂಗು, ತರಕಾರಿಗಳ ಸ್ವಾದ ಹೆಚ್ಚಿಸುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಗು ಬೊಜ್ಜನ್ನು ಹೇಗೆ ಕಡಿಮೆ ಮಾಡುತ್ತದೆ ಎಂದು ನೀವೂ ಕೂಡ ಯೋಚಿಸುತ್ತಿರಬಹುದು. ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ಇಂಗು ನಿಮ್ಮ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಮೈಗ್ರೇನ್ ಸಮಸ್ಯೆಯಲ್ಲೂ ಸಹ ಸಹಾಯ ಮಾಡುತ್ತದೆ. ಹಾಗಾದರೆ ತೂಕ ಇಳಿಸಿಕೊಳ್ಳಲು ಇಂಗನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ.

ಇಂಗು ನೀರು ಸೇವನೆಯಿಂದ ಏನು ಲಾಭ ಸಿಗುತ್ತದೆ?
ಇಂಗು ನೀರು ತೂಕವನ್ನು ಇಳಿಕೆ ಮಾಡಲು ತುಂಬಾ ಉಪಯುಕ್ತವಾಗಿದೆ. ಇಂಗು ನೀರನ್ನು ಬಳಸುವುದರ ಮೂಲಕ ನೀವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಬಹುದು. ಇಂಗು ನೀರಿನಿಂದ ಚಯಾಪಚಯವನ್ನು ಸುಧಾರಿಸಬಹುದು. ಉಗುರು ಬೆಚ್ಚನೆಯ ನೀರಿನಲ್ಲಿ ಇಂಗು ಬೆರೆಸಿ ಸೇವಿಸುವುದು ಹೆಚ್ಚಿನ ಲಾಭ ನೀಡಲಿದೆ.

ಇಂಗು ನೀರಿನಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು
ಚಯಾಪಚಯವನ್ನು ಬಲಪಡಿಸಲು, ಇಂಗು ನೀರನ್ನು ಸೇವಿಸಬೇಕು. ದೇಹದ ತೂಕವನ್ನು ಕಡಿಮೆ ಮಾಡುವ ಇಂಗುವಿನೊಳಗೆ ಬೊಜ್ಜು ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ.

ಇದರ ಹೊರತಾಗಿ ಯಾವುದೇ ರೀತಿಯ ತಲೆನೋವನ್ನು ಇಂಗು ನೀರಿನ ಸೇವನೆಯಿಂದ ನೀವು ಕಡಿಮೆ ಮಾಡಬಹುದು. ನೀವು ನಿಮ್ಮ ಆಹಾರದಲ್ಲಿ ಈ ನೀರನ್ನು ಸೇರಿಸಿದರೆ, ನೀವು ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ-ಕೂದಲುದುರುವಿಕೆ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಈ ಜ್ಯೂಸ್ ಟ್ರೈ ಮಾಡಿ ನೋಡಿ!

ಋತುಚಕ್ರದ ನೋವಿನಲ್ಲಿಯೂ ಇಂಗು ನೀರನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಸಾಕಷ್ಟು ನೋವು ಇದ್ದರೆ, ಅವರು ಇಂಗು ನೀರನ್ನು ಸೇವಿಸಬಹುದು.

ಇದನ್ನೂ ಓದಿ-ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದಿಂದ ಕಾಣಿಸಿಕೊಳ್ಳುವ ಈ‌ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News