Weight Loss Tips: ಕೆಲವೇ ವಾರಗಳಲ್ಲಿ ಸ್ಲಿಮ್ ಆಗಬೇಕೆ? ನಿತ್ಯ 20ನಿಮಿಷ ಈ ಕೆಲಸ ಮಾಡಿ

Weight Loss Tips: ಈ ಬದಲಾದ ಜೀವನ ಶೈಲಿಯಲ್ಲಿ ತೂಕ ಹೆಚ್ಚಳ ಬಹುತೇಕ ಜನರ ಸಾಮಾನ್ಯ ಸಮಸ್ಯೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ, ಕಠಿಣ ಆಹಾರ ಪದ್ಧತಿಯನ್ನು ಅನುಸರಿಸಿದರೂ ಕೂಡ ತೂಕವನ್ನು ಕಡಿಮೆ ಮಾಡುವುದು, ಅದರಲ್ಲೂ ಬೆಲ್ಲಿ ಫ್ಯಾಟ್ ಕರಗಿಸುವುದು ಅಷ್ಟು ಸುಲಭವಲ್ಲ. 

Written by - Yashaswini V | Last Updated : Jul 6, 2023, 02:00 PM IST
  • ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ, ಗಂಟೆಗಟ್ಟಲೆ ಜಿಮ್‌ನಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲವೇ?
  • ಮನೆಯಲ್ಲಿ ಯೋಗ, ವ್ಯಾಯಾಮ ಮಾಡಲು ಆಗುತ್ತಿಲ್ಲವೇ?
  • ಡೋಂಟ್ ವರಿ... ನೀವು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಒಂದೇ ಒಂದು ವ್ಯಾಯಾಮ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
Weight Loss Tips: ಕೆಲವೇ ವಾರಗಳಲ್ಲಿ ಸ್ಲಿಮ್ ಆಗಬೇಕೆ? ನಿತ್ಯ 20ನಿಮಿಷ ಈ ಕೆಲಸ ಮಾಡಿ  title=

Weight Loss Tips: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕರೋನಾ ಸಾಂಕ್ರಾಮಿಕದ ಬಳಿಕ ಬಹುತೇಕ ಜನರನ್ನು ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಎಂದರೆ ತೂಕ ಹೆಚ್ಚಳ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ, ತೂಕವನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಅದು ಹಲವಾರು ಕಾಯಿಲೆಗಳ ಉಗ್ರಾಣವಾಗುತ್ತದೆ. 

ಮೊದಲನೆಯದಾಗಿ, ಈ ಬದಲಾದ ಜೀವನ ಶೈಲಿಯಲ್ಲಿ ಎಲ್ಲರಿಗೂ ಕೂಡ ಜಿಮ್, ವ್ಯಾಯಾಮ, ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಮತ್ತೊಂದೆಡೆ, ನಾವು ಎಷ್ಟೇ ಪ್ರಯತ್ನಿಸಿದರೂ, ಆಹಾರ-ಪಾನೀಯಗಳನ್ನು ನಿಯಂತ್ರಿಸಿದರೂ ಕೂಡ ನಮ್ಮ ತೂಕ ಕಡಿಮೆ ಆಗುತ್ತಲೇ ಇಲ್ಲ. ಅದರಲ್ಲೂ ಹೊಟ್ಟೆಯ ಕೊಬ್ಬು ಕರಗುತ್ತಿಲ್ಲ ಎಂದು ದೂರುವವರೇ ಹೆಚ್ಚು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ನಿತ್ಯ ಈ ಒಂದೇ ಒಂದು ಕೆಲಸ ಮಾಡುವುದರಿಂದ ನಿಮ್ಮ ಬೆಲ್ಲಿ ಫ್ಯಾಟ್ ಅನ್ನು ಕರಗಿಸಬಹುದು. ಯಾವುದೀ ಕೆಲಸ ಎಂದು ತಿಳಿಯೋಣ... 

ಇದನ್ನೂ ಓದಿ- ಔಷಧಿಗಳ ಅಗತ್ಯವಿಲ್ಲ, ಈ ಮನೆಮದ್ದುಗಳಿಂದ ಗಂಟಲು ನೋವಿಗೆ ಸಿಗುತ್ತೆ ಸುಲಭ ಪರಿಹಾರ

ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ, ಗಂಟೆಗಟ್ಟಲೆ ಜಿಮ್‌ನಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲವೇ, ಮನೆಯಲ್ಲಿ ಯೋಗ, ವ್ಯಾಯಾಮ ಮಾಡಲು ಆಗುತ್ತಿಲ್ಲವೇ? ಡೋಂಟ್ ವರಿ... ನೀವು  ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಒಂದೇ ಒಂದು ವ್ಯಾಯಾಮ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನಿತ್ಯ ಕೇವಲ 20 ನಿಮಿಷಗಳ ನಿಮ್ಮ ಮನೆಯಲ್ಲಿಯೇ ಈ ಒಂದು ವ್ಯಾಯಾಮವನ್ನು ಮಾಡುವುದರಿಂದ ನಿಮ್ಮ ಹೊಟ್ಟೆಯ ಸುತ್ತಲೂ ಶೇಖರಣೆಗೊಂಡಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಅದುವೇ ಸ್ಕಿಪ್ಪಿಂಗ್. 

ಇದನ್ನೂ ಓದಿ- ಮಳೆಗಾಲದಲ್ಲಿ ಕೂದಲಿಗೆ ವಿಶೇಷ ಕಾಳಜಿ ಅವಶ್ಯಕ..! ಇಲ್ಲಿವೆ ಟಿಪ್ಸ್‌.. ತಪ್ಪದೆ ಓದಿ

ಹೌದು, ಫಿಟ್‌ನೆಸ್ ತಜ್ಞರ ಪ್ರಕಾರ, ನಿತ್ಯ ಕನಿಷ್ಠ 20 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ಸುಮಾರು 300 ಕ್ಯಾಲೊರಿಗಳನ್ನುಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಈ ಜಂಪಿಂಗ್ ರೋಪ್ ಆರೋಗ್ಯಕರವಾಗಿ ತ್ವರಿತವಾಗಿ ತೂಕ ಕಳೆದುಕೊಳ್ಳಲು ಕೂಡ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ, ನೀವು ಸ್ಕಿಪ್ಪಿಂಗ್ ಆಡುವಾಗ ಕೆಲವು ವಿಷಯಗಳ ಬಗ್ಗೆ ಗಮನವಹಿಸುವುದು ತುಂಬಾ ಅಗತ್ಯವಾಗಿದೆ. ಅವುಗಳೆಂದರೆ... 
* ನೀವು ಅಪ್ಪಿತಪ್ಪಿಯೂ ಕೂಡ ಖಾಲಿ ಹೊಟ್ಟೆಯಲ್ಲಿ ಸ್ಕಿಪ್ಪಿಂಗ್ ಆಡುವ ತಪ್ಪನ್ನು ಮಾಡಬೇಡಿ. ಈ ರೀತಿ ಮಾಡುವುದರಿಂದ ಹೊಟ್ಟೆ ನೋವು ಉಂಟಾಗಬಹುದು, ಇಲ್ಲವೇ ತಲೆ ಸುತ್ತಬಹುದು. 
* ಹಾಗಂತ ಆಹಾರ ಸೇವಿಸಿದ ತಕ್ಷಣ, ಸ್ಕಿಪಿಂಗ್ ಮಾಡಬಾರದು. 
* ನೀವು ಆಹಾರ ಸೇವಿಸಿದ ಕನಿಷ್ಠ 2-3 ಗಂಟೆಗಳ ನಂತರವಷ್ಟೇ ಸ್ಕಿಪ್ಪಿಂಗ್ ಆಡಬಹುದು. 
* ಸ್ಕಿಪ್ಪಿಂಗ್ ಮಾಡುವ ಮೊದಲು ಲಘು ವ್ಯಾಯಾಮಗಳನ್ನು ಮಾಡುವುದು ಅಗಾಯ್ತ. 
* ತಕ್ಷಣ ಸ್ಕಿಪ್ಪಿಂಗ್ ಆರಂಭಿಸುವ ಬದಲಿಗೆ ಲಘು ವ್ಯಾಯಾಮದಿಂದ ಕೊಂಚ ದೇಹ ಬೆಚ್ಚಗಾದ ಬಳಿಕ ಸ್ಕಿಪ್ಪಿಂಗ್ ಆಡುವುದರಿಂದ ನಿರೀಕ್ಷಿತ ಫಲಿತಾಂಶ ಪಡೆಯಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News