ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಬೇಕೆ? ಆಹಾರದಲ್ಲಿರಲಿ ಈ ಸಂಗತಿಗಳು!

Detoxicate Body: ಹೆಚ್ಚಿನ ನಾರಿನಂಶವಿರುವ ಆಹಾರಗಳು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ ಎಂಬುದು ಬಹುತೇಕ ಜನರಿಗೆ ತಿಳಿದಿದೆ. ಆದರೆ, ಹೆಚ್ಚಿನ ನಾರಿನಂಶವಿರುವ ಪದಾರ್ಥಗಳನ್ನು ನಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿದರೆ ಅವು ನಮ್ಮ ಶರೀರವನ್ನು ನಿರ್ವಿಷಗೊಳಿಸುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? Lifestyle News In Kannada  

Written by - Nitin Tabib | Last Updated : Oct 12, 2023, 11:04 PM IST
  • ಮಲಬದ್ಧತೆಯ ನಿಯಮಿತ ಸಮಸ್ಯೆಯು ಪೈಲ್ಸ್‌ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು,
  • ಹೀಗಾಗಿ, ಮಲಬದ್ಧತೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು.
  • ದೇಹದಲ್ಲಿ ಫೈಬರ್ ಕೊರತೆಯು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ ಎಂಬುದು ಇಲ್ಲಿ ಗಮನಾರ್ಹ.
ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಬೇಕೆ? ಆಹಾರದಲ್ಲಿರಲಿ ಈ ಸಂಗತಿಗಳು! title=

Superfoods To Detox Your Body: ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಬಹುತೇಕರಿಗೆ ತಿಳಿದಿದೆ. ಇನ್ನೊಂದೆಡೆ ಆಹಾರದಲ್ಲಿ ಫೈಬರ್ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಉಳಿಯುತ್ತದೆ ಎಂಬುದು ಆರೋಗ್ಯ ತಜ್ಞರು ನಂಬುತ್ತಾರೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯಂತಹ ಗಂಭೀರ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ, ಆದರೆ ಫೈಬರ್ ಭರಿತ ಆಹಾರಗಳನ್ನು ಸೇರಿಸುವ ಮೂಲಕ ದೇಹದಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಲಾಗುತ್ತದೆ ಎಂಬುದು ಕೆಲವೇ ಜನರಿಗೆ ತಿಳಿದಿದೆ.

ಫೈಬರ್ ಆಹಾರ ಸೇವನೆಯ ಪ್ರಯೋಜನಗಳು
1. ನೀವು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿದರೆ, ಅದು ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

2. ಹಬ್ಬ ಹರಿದಿನಗಳ ಸಮಯ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಾವು ನಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನುವುದು ಆರೋಗ್ಯವನ್ನು ಹದಗೆಡಿಸುತ್ತದೆ ಮತ್ತು ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಫೈಬರ್ ಸಮೃದ್ಧವಾಗಿರುವ ಆಹಾರಗಳು ಈ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

3. ದೇಹದಿಂದ ವಿಷವನ್ನು ಹೊರಹಾಕಲು ನೀರು ಕುಡಿಯುವುದು ಸಹ ಪ್ರಯೋಜನಕಾರಿಯಾಗಿದೆ. ನೀವು ದಿನವಿಡೀ 3-4 ಲೀಟರ್ ನೀರನ್ನು ಕುಡಿದರೆ, ಅದು ದೇಹವನ್ನು ತೇವಾಂಶದಿಂದ ಇರಿಸುತ್ತದೆ.

4. ಫೈಬರ್ ಭರಿತ ಆಹಾರವು ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ವ್ಯಾಯಾಮವು ಸಹ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

5. ಅಧಿಕ ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಮೂಡ್ ಸುಧಾರಿಸುತ್ತದೆ ಎಂದು ಸಂಶೋಧನೆಯೊಂದರಲ್ಲಿ ಹೇಳಲಾಗಿದೆ. ಇದರೊಂದಿಗೆ, ಅದು ಕರುಳಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

6. ದೇಹದಲ್ಲಿ ಫೈಬರ್ ಕೊರತೆಯಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದರಿಂದಾಗಿ ದೇಹದಲ್ಲಿ ಕೊಬ್ಬು ವೇಗವಾಗಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಫೈಬರ್ ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

7. ಮಲಬದ್ಧತೆಯ ನಿಯಮಿತ ಸಮಸ್ಯೆಯು ಪೈಲ್ಸ್‌ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು, ಹೀಗಾಗಿ, ಮಲಬದ್ಧತೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ದೇಹದಲ್ಲಿ ಫೈಬರ್ ಕೊರತೆಯು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ ಎಂಬುದು ಇಲ್ಲಿ ಗಮನಾರ್ಹ. 

ಇದನ್ನೂ ಓದಿ-ತೆಂಗಿನ ಎಣ್ಣೆಯಲ್ಲಿ ಕೇವಲ ಈ 2 ಸಂಗತಿಗಳನ್ನು ಬೆರೆಸಿ, ಕೇವಲ ವಾರದಲ್ಲಿ 2 ದಿನ ತಲೆಗೆ ಹಚ್ಚಿ, ಬುಡದಿಂದ ಕಪ್ಪಾಗುತ್ತವೆ ಬಿಳಿ ಕೂದಲುಗಳು!

ಈ ಪದಾರ್ಥಗಳಲ್ಲಿ ಅಧಿಕ ಫೈಬರ್ ಕಂಡುಬರುತ್ತದೆ
1. ಸ್ಟ್ರಾಬೆರಿಗಳು
2. ಹಸಿರು ಬಟಾಣಿ
3. ಬ್ರೊಕೊಲಿ
4. ಆಲೂಗಡ್ಡೆ
5. ಮಸೂರಿ ಬೇಳೆ
6. ಎಲೆಕೋಸು
7. ಕ್ಯಾರೆಟ್
8. ಓಟ್ಸ್
9. ಕ್ವಿನೋವಾ
10. ಬಾದಾಮಿ
11. ಚಿಯಾ ಬೀಜಗಳು
12. ಪಿಯರ್
13. ಬಾಳೆಹಣ್ಣು
14. ಸಿಪ್ಪೆಗಳೊಂದಿಗೆ ಸೇಬುಗಳು
15. ಕಿತ್ತಳೆ ಇತ್ಯಾದಿ,

ಇದನ್ನೂ ಓದಿ-ಅಡುಗೆ ಮನೆಯಲ್ಲಿರುವ ಈ 4 ವಸ್ತು ಬಳಸಿ ಕೂದಲು ಸ್ವಚ್ಛಗೊಳಿಸಿ, ಕೂದಲು ಉದುರುವುದಿಲ್ಲ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News