Vishnu Purana: ವಿಷ್ಣು ಪುರಾಣದ ಈ ಭವಿಷ್ಯವಾಣಿಗಳು ನಿಜವಾಗುತ್ತಿವೆ!

ವಿಷ್ಣು ಪುರಾಣವು ಮಾನವನ ಹುಟ್ಟಿನಿಂದ ಸಾವಿನವರೆಗೆ ಅನೇಕ ನಿಗೂಢ ವಿಷಯಗಳನ್ನು ವಿವರಿಸಿದೆ. ಈ ಪುಸ್ತಕದಲ್ಲಿ ಅನೇಕ ವಿಸ್ಮಯಕಾರಿ ಭವಿಷ್ಯವಾಣಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದು ಈಗ ಕಲಿಯುಗದಲ್ಲಿ ನಿಜವಾಗುತ್ತಿವೆ.

Written by - Puttaraj K Alur | Last Updated : May 21, 2022, 08:11 AM IST
  • ಕಲಿಯುಗದಲ್ಲಿ ಜನರು ಅಹಂಕಾರಿಗಳಾಗುತ್ತಾರೆಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ
  • ಕಲಿಯುಗದಲ್ಲಿ ಅನೇಕ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ
  • ವಿಷ್ಣು ಪುರಾಣದಲ್ಲಿ ಮನುಷ್ಯನ ದುರಾಸೆಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ
Vishnu Purana: ವಿಷ್ಣು ಪುರಾಣದ ಈ ಭವಿಷ್ಯವಾಣಿಗಳು ನಿಜವಾಗುತ್ತಿವೆ!    title=
ವಿಷ್ಣುಪುರಾಣದ ಬಗ್ಗೆ ತಿಳಿದುಕೊಳ್ಳಿರಿ

ನವದೆಹಲಿ: ಸನಾತನ ಧರ್ಮದಲ್ಲಿ ಅನೇಕ ವಿಷಯಗಳ ಬಗ್ಗೆ ವಿವರಿಸಲಾಗಿದೆ. ಇವುಗಳಲ್ಲಿ ವಿಷ್ಣು ಪುರಾಣ ಗ್ರಂಥವೂ ಒಂದು. ಈ ಪುಸ್ತಕದಲ್ಲಿ ಮಾನವನ ಹುಟ್ಟಿನಿಂದ ಸಾವಿನವರೆಗೆ ಅನೇಕ ನಿಗೂಢ ವಿಷಯಗಳನ್ನು ವಿವರಿಸಲಾಗಿದೆ. ಶತಮಾನಗಳ ಹಿಂದೆ ಈ ಪುಸ್ತಕದಲ್ಲಿ ಬರೆದ ಅನೇಕ ವಿಷಯಗಳು ಇಂದು ನಿಜವೆಂದು ಸಾಬೀತಾಗುತ್ತಿವೆ. ಇಂದಿನ ದಿನಗಳಲ್ಲಿ ನಿಮ್ಮ ಕಣ್ಣೆದುರು ನಡೆಯುತ್ತಿರುವ ವಿಷ್ಣು ಪುರಾಣದ ವಿಷಯಗಳನ್ನು ನಾವು ನಿಮಗೆ ಹೇಳಲಿದ್ದೇವೆ.

ಜನರು ಹಣದ ಬಗ್ಗೆ ಅಹಂಕಾರ ಹೊಂದುತ್ತಾರೆ

ಕಲಿಯುಗದಲ್ಲಿ ಜನರು ಅಹಂಕಾರಿಗಳಾಗುತ್ತಾರೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಸ್ವಲ್ಪ ಹಣ ಹತ್ತಿರ ಬಂದ ತಕ್ಷಣ ಜನರು ದುರಹಂಕಾರದಿಂದ ವರ್ತಿಸುತ್ತಾರೆ. ಎಲ್ಲಾ ಸಂಬಂಧಗಳು ಕೇವಲ ಹಣದ ಮೇಲೆ ಆಧಾರಿತವಾಗಿರುತ್ತದೆ. ಜಗತ್ತಿನಲ್ಲಿ ಶ್ರೀಮಂತರು ಮಾತ್ರ ಐಷಾರಾಮಿ ಜೀವನ ನಡೆಸುತ್ತಾರೆ ಮತ್ತು ಯಾರೂ ಸಹ ಬಡವರ ಬಗ್ಗೆ ಮಾತನಾಡುವುದಿಲ್ಲ. ಹಣ ಸಂಪಾದನೆಯ ಅನ್ವೇಷಣೆಯಲ್ಲಿ ಮನುಷ್ಯನು ದುಷ್ಟರ ಭದ್ರಕೋಟೆಯಾಗುತ್ತಾ ಹೋಗುತ್ತಾನೆ.

ಇದನ್ನೂ ಓದಿ: Vastu Tips:: ಮನೆಯಲ್ಲಿ ಕಸಗೂಡಿಸುವ ಸರಿಯಾದ ಸಮಯ ಯಾವುದು ಗೊತ್ತಾ? ನಿಮ್ಮೀ ತಪ್ಪು ನಿಮಗೆ ದಾರಿದ್ರ್ಯ ತರಬಹುದು

ಕಲಿಯುಗದಲ್ಲಿ ಬರಗಾಲದ ಸಾವು ಹೆಚ್ಚಾಗುತ್ತದೆ

ಕಲಿಯುಗದಲ್ಲಿ ಅನೇಕ ಜನರು ತಮ್ಮ ಪೂರ್ಣ ಆಯಸ್ಸನ್ನು ಪೂರೈಸುವುದಿಲ್ಲ ಮತ್ತು ಅಕಾಲಿಕ ಮರಣಕ್ಕೆ ಬಲಿಯಾಗುತ್ತಾರೆ ಎಂದು ಈ ಧಾರ್ಮಿಕ ಗ್ರಂಥದಲ್ಲಿ ಹೇಳಲಾಗಿದೆ. ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ. ಹೊಸ ಸಾಂಕ್ರಾಮಿಕ ರೋಗಗಳಿಗೆ ಲಕ್ಷಾಂತರ ಜನರು ಬಲಿಯಾಗುತ್ತಾರೆ. ಬರ ಮತ್ತು ಅತಿವೃಷ್ಟಿಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ವಿಷ್ಣು ಪುರಾಣದ ಈ ವಿಷಯ ಪ್ರಸ್ತುತ ನಿಜವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಹೆಚ್ಚಿನ ಶಾಖ ಮತ್ತು ನೀರಿನ ಕೊರತೆಯಿಂದ ತೊಂದರೆ

ವಿಷ್ಣು ಪುರಾಣದಲ್ಲಿ ಕಲಿಯುಗದ ಮನುಷ್ಯನ ದುರಾಸೆಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಕಲಿಯುಗದಲ್ಲಿ ತಾಪವು ತುಂಬಾ ಹೆಚ್ಚಾಗುತ್ತದೆ. ಬಲವಾದ ಶಾಖದಿಂದಾಗಿ ಭೂಮಿಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಭೂಮಿಯ ನೀರಿನ ಮಟ್ಟ ಗಣನೀಯವಾಗಿ ಇಳಿಯುತ್ತದೆ. ಎಲ್ಲೋ ಮಳೆ ಬಂದರೆ ಮತ್ತಿನ್ನೆಲ್ಲೋ ಅತಿವೃಷ್ಟಿ ಪರಿಣಾಮ ಜನರು ಇನ್ನಿಲ್ಲದ ತೊಂದರೆ ಅನುಭವಿಸುತ್ತಾರೆ. ಈ ಪರಿಸ್ಥಿತಿಯನ್ನು ಸಹ ನಾವು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ.

ಇದನ್ನೂ ಓದಿ: wheat flour lamps : ಮನೆಯಲ್ಲಿ ಹಿಟ್ಟಿನ ದೀಪಗಳನ್ನು ಏಕೆ ಹಚ್ಚುತ್ತಾರೆ? ಇಲ್ಲಿ ತಿಳಿಯಿರಿ ರಹಸ್ಯ

ಸಂಪಾದನೆಯೆಲ್ಲ ಮನೆ ಕಟ್ಟಲು ಖರ್ಚಾಗುತ್ತದೆ

ಸನಾತನ ಧರ್ಮದ ಈ ಪುಸ್ತಕದಲ್ಲಿ ಕಲಿಯುಗದಲ್ಲಿ ಜನರು ಎಷ್ಟು ಹಣವನ್ನು ಸೇರಿಸುತ್ತಾರೋ ಅದೆಲ್ಲವನ್ನೂ ಮನೆ ಕಟ್ಟಲು ಖರ್ಚು ಮಾಡುತ್ತಾರೆ ಎಂದು ಹೇಳಲಾಗಿದೆ. ಪ್ರತಿಯೊಬ್ಬರೂ ತಮ್ಮ ಸ್ವಂತ ಮನೆ ಹೊಂದಲು ಸಾಕಷ್ಟು ಅದೃಷ್ಟವಂತರಾಗಿರುವುದಿಲ್ಲ. ಜನರು ತಮ್ಮ ಜೀವನದುದ್ದಕ್ಕೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಆದರೆ, ಈ ಕನಸನ್ನು ನನಸಾಗಿಸಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ವಿಷ್ಣು ಪುರಾಣದ ಈ ಮಾತು ಸಹ ಈ ದಿನಗಳಲ್ಲಿ ಫಲಪ್ರದವಾಗುವುದನ್ನು ಕಾಣಬಹುದು. ಜನರು ತಮ್ಮ ಜೀವಮಾನದ ಗಳಿಕೆಯನ್ನು ತಮ್ಮ ಮನೆ ನಿರ್ಮಿಸಲು ಪಣಕ್ಕಿಡುತ್ತಿದ್ದಾರೆ. ಅದೇ ರೀತಿ ಫ್ಲಾಟ್ ಖರೀದಿಸಿದ ನಂತರ ಅನೇಕ ಜನರು EMI ಪಾವತಿಸಲು ಹೆಣಗಾಡುತ್ತಿರುತ್ತಾರೆ.

ಮಹಿಳೆಯರು ಅಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತಾರೆ

ಕಲಿಯುಗದಲ್ಲಿ ಮಹಿಳೆಯರು ತಮ್ಮ ಅಲಂಕಾರಕ್ಕೆ ಗಮನ ಕೊಡುತ್ತಾರೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಅವರು ತಮ್ಮ ಕೂದಲಿನ ಬಗ್ಗೆ ಹೆಮ್ಮೆಪಡುತ್ತಾರೆ. ಇದಕ್ಕಾಗಿ ಅವರು ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧರಿರುತ್ತಾರೆ. ಈ ಪರಿಸ್ಥಿತಿ ಪ್ರಸ್ತುತವೂ ಗೋಚರಿಸುತ್ತಿದೆ. ಮಹಿಳೆಯರು ತಮ್ಮ ಕೂದಲಿನ ಬಗ್ಗೆ ಒಂದು ಮಟ್ಟಿಗೆ ಹುಚ್ಚರಾಗಿರುತ್ತಾರೆ. ಸೋಪು, ಶಾಂಪೂ ಮತ್ತು ಹೇರ್ ಆಯಿಲ್ ಕಂಪನಿಗಳು ಈ ಆಸೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News