ಇನ್ನು ಮೂರೇ ದಿನಗಳಲ್ಲಿ ಬದಲಾಗಲಿದೆ ಈ ಮೂರು ರಾಶಿಯವರ ಅದೃಷ್ಟ , ಅಪಾರ ಸುಖ ಸಂಪತ್ತು ಕರುಣಿಸಲಿದ್ದಾನೆ ಶುಕ್ರ

ಶುಕ್ರನನ್ನು ಐಷಾರಾಮಿ, ಸಂಪತ್ತು, ವೈಭವ, ಪ್ರಣಯ ಮತ್ತು ಐಶ್ವರ್ಯದ ಪ್ರತೀಕ ಗ್ರಹವೆಂದು ಕರೆಯಲಾಗುತ್ತದೆ.  ಈ ಕಾರಣದಿಂದಲೇ ಶುಕ್ರನ ಚಲನೆಗೆ ಜ್ಯೋತಿಷ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ.   

Written by - Ranjitha R K | Last Updated : Sep 21, 2022, 09:10 AM IST
  • ಸೆಪ್ಟೆಂಬರ್ 24 ರಂದು ರಾಶಿ ಪರಿವರ್ತನೆ ಮಾಡಿಕೊಳ್ಳಲಿದ್ದಾನೆ ಶುಕ್ರ
  • ಶುಕ್ರನ ಚಲನೆಗೆ ಜ್ಯೋತಿಷ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ.
  • 3 ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಶುಕ್ರ
ಇನ್ನು ಮೂರೇ ದಿನಗಳಲ್ಲಿ ಬದಲಾಗಲಿದೆ ಈ ಮೂರು ರಾಶಿಯವರ ಅದೃಷ್ಟ , ಅಪಾರ ಸುಖ ಸಂಪತ್ತು ಕರುಣಿಸಲಿದ್ದಾನೆ ಶುಕ್ರ  title=
Venus transit effect (file photo)

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಅದೆ ರೀತಿ ಶುಕ್ರ ಇನ್ನು ಮೂರು ದಿನಗಳಲ್ಲಿ ಅಂದರೆ, ಸೆಪ್ಟೆಂಬರ್ 24 ರಂದು ತನ್ನ ರಾಶಿ ಪರಿವರ್ತನೆ ಮಾಡಿಕೊಳ್ಳಲಿದ್ದಾನೆ. ಈ ಮೂಲಕ ಶುಕ್ರ ಕನ್ಯಾರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನನ್ನು ಐಷಾರಾಮಿ, ಸಂಪತ್ತು, ವೈಭವ, ಪ್ರಣಯ ಮತ್ತು ಐಶ್ವರ್ಯದ ಪ್ರತೀಕ ಗ್ರಹವೆಂದು ಕರೆಯಲಾಗುತ್ತದೆ.  ಈ ಕಾರಣದಿಂದಲೇ ಶುಕ್ರನ ಚಲನೆಗೆ ಜ್ಯೋತಿಷ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಶುಕ್ರನ ಸ್ಥಾನದಲ್ಲಾಗುವ ಬದಲಾವಣೆ, ಎಲ್ಲಾ 12 ರಾಶಿಯವರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಈ ಬಾರಿಯ ಶುಕ್ರ ಸಂಕ್ರಮಣವು ಮೂರು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. 

3 ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಶುಕ್ರ : 
ವೃಷಭ ರಾಶಿ : ಶುಕ್ರ ಸಂಕ್ರಮಣವು ವೃಷಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಶುಕ್ರ ಗ್ರಹವು ವೃಷಭ ರಾಶಿಯ ಅಧಿಪತಿ. ಈ ಕಾರಣದಿಂದ ಶುಕ್ರನ ಸ್ಥಾನ ಪಲ್ಲಟದ ಪರಿಣಾಮ ಈ ರಾಶಿಯವರ ಮೇಲೆ ತುಸು ಹೆಚ್ಚೇ ಆಗುವುದು. ಈ ರಾಶಿಯವರ ಆದಾಯ ಹೆಚ್ಚಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ದಿ ಹೆಚ್ಚಾಗುತ್ತದೆ. ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ : Shani Mahadasha: ಈ ಜನರಿಗೆ 19 ವರ್ಷಗಳ ಕಾಲ ಇರಲಿದೆ ಶನಿ ಮಹಾದಶಾ: ಶೀಘ್ರವೇ ಪರಿಹಾರ ಮಾಡಿ, ಅಶುಭ ನಿವಾರಿಸಿ

ಮಿಥುನ ರಾಶಿ : ಶುಕ್ರನ ರಾಶಿಯ ಬದಲಾವಣೆಯು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.  ಆರ್ಥಿಕ ಲಾಭವಾಗಲಿದೆ. ವ್ಯಾಪಾರದಲ್ಲಿ ಹೆಚ್ಚು ಲಾಭ ಇರುತ್ತದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಆಸ್ತಿಯನ್ನುಖರೀದಿಸುವ ಯೋಗವಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಜೀವನದಲ್ಲಿ ಐಷಾರಾಮ ಹೆಚ್ಚಾಗುತ್ತದೆ. 

ಕನ್ಯಾ ರಾಶಿ : ಶುಕ್ರ ಗ್ರಹವು ಕನ್ಯಾರಾಶಿಯಲ್ಲಿಯೇ ಸಂಕ್ರಮಿಸುತ್ತಿದೆ. ಹಾಗಾಗಿ ಈ ರಾಶಿಯ ಜನರು ಅತ್ಯಂತ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಆದಾಯದ ಮೂಲ ಹೆಚ್ಚಾಗುವುದು. ಅನಿರೀಕ್ಷಿತ ಧನಲಾಭಾವಾಗುವುದು. ಹೂಡಿಕೆ ಮಾಡುವುದಕ್ಕೆ ಇದು ಉತ್ತಮ ಸಮಯ. ವ್ಯಾಪಾರ ವೃದ್ಧಿಯಾಗಲಿದೆ.  ಈವು ಈ ಸ್ಮಾಯ್ದಲ್ಲಿ ಮಾಡುವ ಪ್ರತಿ ಯೊಂದು ಕೆಲಸಕ್ಕೂ ಪ್ರಶಂಸೆ ಸಿಗಲಿದೆ. 

ಇದನ್ನೂ ಓದಿ : Friendship : ಸ್ನೇಹಕ್ಕಾಗಿ ಪ್ರಾಣ ಕೊಡಲೂ ಸಿದ್ಧರು ಈ ರಾಶಿಯವರು.!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News