ಶುಕ್ರನ ರಾಶಿ ಬದಲಾವಣೆಯಿಂದ ಈ ನಾಲ್ಕು ರಾಶಿಯವರಿಗೆ ಆಗಲಿದೆ ಧನ ವೃಷ್ಟಿ, ನಿಮ್ಮ ರಾಶಿ ಇದರಲ್ಲಿದೆಯಾ ?

ಮಕರ ರಾಶಿಗೆ ಶುಕ್ರನ ಪ್ರವೇಶವು 4 ರಾಶಿಚಕ್ರ ಚಿಹ್ನೆಗಳ ಜನರಿಗೆ ಅದ್ಭುತ ಅವಕಾಶವನ್ನು ನೀಡುತ್ತದೆ.  ಈ ರಾಶಿಯವರ ಮೇಲೆ ಶುಕ್ರನ ವಿಶೇಷ ಕೃಪೆ ಇರಲಿದೆ.

Written by - Ranjitha R K | Last Updated : Nov 27, 2021, 03:58 PM IST
  • ರಾಶಿ ಪರಿವರ್ತನೆ ಮಾಡಲಿದೆ ಶುಕ್ರ ಗ್ರಹ
  • ಧನ, ಸುಖ, ಸೌಂದರ್ಯದ ಅಧಿಪತಿ ಶುಕ್ರ
  • ನಾಲ್ಕು ರಾಶಿಯವರಿಗೆ ಆಗಲಿದೆ ಧನ ಲಾಭ
ಶುಕ್ರನ ರಾಶಿ ಬದಲಾವಣೆಯಿಂದ ಈ ನಾಲ್ಕು ರಾಶಿಯವರಿಗೆ ಆಗಲಿದೆ ಧನ ವೃಷ್ಟಿ, ನಿಮ್ಮ ರಾಶಿ ಇದರಲ್ಲಿದೆಯಾ ?   title=
Venus transit (File photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology) ಎಲ್ಲಾ ಗ್ರಹಗಳು ತಮ್ಮ ತಮ್ಮ ರಾಶಿಯನ್ನು ಆಯಾ ಕಾಲದಲ್ಲಿ ಬದಲಾಯಿಸುತ್ತಲೇ ಇರುತ್ತವೆ. ಇದಲ್ಲದೆ, ಈ ಗ್ರಹಗಳು ಪರಸ್ಪರ ಸಂಯೋಗವನ್ನು ಮಾಡುತ್ತವೆ. ಹಿಮ್ಮುಖವಾಗಿ ಚಲಿಸುತ್ತವೆ. ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನ ಬದಲಾವಣೆಗಳು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ (Zodiac sign) ಮೇಲೆ ಪರಿಣಾಮ ಬೀರುತ್ತವೆ. ಈ ಪ್ರಮುಖ ಗ್ರಹಗಳಲ್ಲಿ ಒಂದಾದ ಶುಕ್ರ ಗ್ರಹವು ಡಿಸೆಂಬರ್ 8 ರಂದು ರಾಶಿಚಕ್ರವನ್ನು ಬದಲಾಯಿಸಲಿದೆ. ಶುಕ್ರನು ಧನು ರಾಶಿಯಿಂದ ಮಧ್ಯಾಹ್ನ 12:56 ಕ್ಕೆ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ರಾಶಿ ಬದಲಾವಣೆಯು ನಾಲ್ಕು ರಾಶಿಯ ಜನರಿಗೆ ಭಾರಿ  ಶುಭವಾಗಿ ಪರಿಣಮಿಸಲಿದೆ.  

ಈ ರಾಶಿಯವರ ಜೀವನದಲ್ಲಿ ಹಣದ ಮಳೆಗರೆಯಲಿದ್ದಾನೆ ಶುಕ್ರ : 
ಮಕರ ರಾಶಿಗೆ ಶುಕ್ರನ ಪ್ರವೇಶವು (Venus transit)  4 ರಾಶಿಚಕ್ರ ಚಿಹ್ನೆಗಳ ಜನರಿಗೆ ಅದ್ಭುತ ಅವಕಾಶವನ್ನು ನೀಡುತ್ತದೆ.  ಈ ರಾಶಿಯವರ ಮೇಲೆ ಶುಕ್ರನ ವಿಶೇಷ ಕೃಪೆ ಇರಲಿದೆ. ಇದರೊಂದಿಗೆ ಸೌಲಭ್ಯಗಳೂ ಹೆಚ್ಚಲಿವೆ. 

ಇದನ್ನೂ ಓದಿ : ಸೂರ್ಯಗ್ರಹಣ: ಈ 6 ರಾಶಿಯವರಿಗೆ ಹಣಕಾಸಿನ ಲಾಭದಿಂದ ವೃತ್ತಿ ಲಾಭದವರೆಗೆ ಅದೃಷ್ಟ ಲಭಿಸಲಿದೆ

ಮೇಷ: ಶುಕ್ರನ ರಾಶಿ (Venus) ಪರಿವರ್ತನೆ ಮೇಷ  ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ, ಗೌರವ ಸಿಗಲಿದೆ. ಸಂಪಟ್ಟು ಹೆಚ್ಚಾಗಲಿದೆ. ಸೌಕರ್ಯಗಳು ಹೆಚ್ಚಾಗಲಿವೆ. ಒಟ್ಟಿನಲ್ಲಿ ಎಲ್ಲಾ ಕಡೆಯಿಂದ ಲಾಭವಾಗಲಿದೆ. 

ವೃಷಭ ರಾಶಿ : ವೃಷಭ ರಾಶಿಯವರಿಗೆ (Taurus) ಮಕರ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಅಪಾರ ಧನ ಲಾಭವಾಗಲಿದೆ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ ಮತ್ತು ಭವಿಷ್ಯದಲ್ಲಿ  ದೊಡ್ಡ ಲಾಭ ಸಿಗಲಿದೆ. ಈ ರಾಶಿಯವರ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಉದ್ಯಮಿಗಳ ಕಠಿಣ ಪರಿಶ್ರಮವೂ ಫಲ ನೀಡುತ್ತದೆ ಮತ್ತು ಹೆಚ್ಚಿನ ಲಾಭ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು. 

ಸಿಂಹ:  ಈ ಅವಧಿಯು ಸಿಂಹ ರಾಶಿಯವರಿಗೆ (Leo)ತುಂಬಾ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಈ ರಾಶಿಯವರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಿದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆಕರ್ಷಣೆ ಹೆಚ್ಚಾಗಲಿದೆ.  

ಇದನ್ನೂ ಓದಿ : ಡಿಸೆಂಬರ್ ನಲ್ಲಿ ಆರಕ್ಕಿಂತ ಹೆಚ್ಚು ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ, ಈ ರಾಶಿಯವರ ಪಾಲಿಗೆ ಎಲ್ಲವೂ ಶುಭ 

ಕನ್ಯಾ : ಕನ್ಯಾ ರಾಶಿಯವರಿಗೆ  (Virgo) ಶುಕ್ರ ಗ್ರಹದ ಅನುಗ್ರಹವೂ ಇರುತ್ತದೆ. ಯಾವುದೇ ಹೊಸ ಆದಾಯದ ಮೂಲವನ್ನು ಹುಡುಕುತ್ತಿದ್ದರೆ ಧನಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ಆರ್ಥಿಕ ಸ್ಥಿತಿಯನ್ನು ಬಲಗೊಳ್ಳಲಿದೆ. ನೀವು ಬಯಸಿದ ಕೆಲಸದ ಪ್ರಸ್ತಾಪವನ್ನು ಪಡೆಯಬಹುದು.  ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News