Vastu Tips:ಈ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ

Vastu Tips- ವಾಸ್ತು ಶಾಸ್ತ್ರದ (Vastu Shastra) ನಿಯಮಗಳನ್ನು ಅನುಸರಿಸುವ ಮೂಲಕ, ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಮತ್ತು ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಆದರೆ, ಕೆಲವರು ವಾಸ್ತು ಬಗ್ಗೆ ಕಾಳಜಿಯೇ ವಹಿಸುವುದಿಲ್ಲ. ಇದರಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು, ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

Written by - Nitin Tabib | Last Updated : Jan 29, 2021, 01:07 PM IST
  • ಜೀವನದಲ್ಲಿ ವಾಸ್ತುಶಾಸ್ತ್ರದ ತನ್ನದೇ ಆದ ಮಹತ್ವವಿದೆ
  • ವಾಸ್ತುಶಾಸ್ತ್ರದ ನಿಯಮಗಳನ್ನು ಎಂದಿಗೂ ಕೂಡ ಪಾಲಿಸಬೇಕು.
  • ವಾಸ್ತುದೋಷದಿಂದ ಮನೆಯಲ್ಲಿ ದಾರಿದ್ರ್ಯ ಹಾಗೂ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
Vastu Tips:ಈ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ title=
Vastu Tips (Representational Image)

Vastu Tips For Prosperity - ನವದೆಹಲಿ: ಮನುಷ್ಯರ ಜೀವನದಲ್ಲಿ ವಾಸ್ತುಶಾಸ್ತ್ರದ (Vastu Shastra) ತನ್ನದೇ ಆದ ಮಹತ್ವವಿದೆ. ಮನುಷರ ಜೀವನದ ಬಹುತೇಕ ಏರಿಳಿತಗಳು ವಾಸ್ತು (Vastu) ಮೇಲೆ ಅವಲಂಭಿಸಿವೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ವಾಸ್ತುದೋಷಗಳು (Vastu Dosh) ಎದುರಾದರೆ, ಆ ವ್ಯಕ್ತಿಯ ಜೀವನದಲ್ಲಿ ಹಲವು ಸಮಸ್ಯೆಗಳು (Problems) ಎದುರಾಗುತ್ತವೆ. ವಾಸ್ತುಶಾಸ್ತ್ರದ ನಿಯಮಗಳು ದಿಕ್ಕು ಹಾಗೂ ಸೂರ್ಯನ ಕರಣಗಳ ಮೇಲೆ ಅವಲಂಭಿಸಿವೆ.

ವಾಸ್ತುಗಳ ಈ ನಿಯಮ ಅನುಸರಿಸುವುದರಿಂದ ಸಮೃದ್ಧಿ  ನೆಲೆಸುತ್ತದೆ
ವಾಸ್ತುಶಾಸ್ತ್ರದ ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುವುದರ ಜೊತೆಗೆ ಸಂಕಷ್ಟಗಳು ದೂರಾಗುತ್ತವೆ. ಆದರೆ, ಕೆಲವರು ವಾಸ್ತುಶಾಸ್ತ್ರದ ಬಗ್ಗೆ ಗಮನವೇ ಹರಿಸುವುದಿಲ್ಲ. ಈ ಕಾರಣದಿಂದ ಮನೆಯಲ್ಲಿ ದಾರಿದ್ರ್ಯ ಹಾಗೂ ಆರೋಗ್ಯ ಸಮಸ್ತ್ಯೆಗಳು ತಲೆದೂರುತ್ತವೆ. ವಾಸ್ತುಶಾಸ್ತ್ರದ (Vastu Tips) ಅನುಸಾರ ಯಾವ ಸಂಗತಿಗಳ ಕುರಿತು ಗಮನಹರಿಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ (Vastu Tips For Money).

ಹರಕಲು ಚಪ್ಪಲಿ (Broaken Slippers) ಮನೆಯಲ್ಲಿಡಬೇಡಿ
ಹರಕಲು ಚಪ್ಪಲಿ ಮನೆಯಲ್ಲಿಟ್ಟುಕೊಳ್ಳುವುದರಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ. ಮನೆಯ ಒಡೆಯ ಯಾವಾಗಲು ಹರಕಲು ಚಪ್ಪಲಿ ಧರಿಸಬಾರದು. ಹೀಗಾಗಿ ತಕ್ಷಣ ಮನೆಯಿಂದ ಹರಕಲು ಚಪ್ಪಲಿ ಹೊರಹಾಕಿ.

ಮನೆಯ ಮಾಳಿಗೆಯ ಮೇಲೆ ಹಾಳಾದ ವಸ್ತುಗಳನ್ನು ಇಡಬೇಡಿ
ಹಲವರು ತಮ್ಮ ಮನೆ ಮಾಳಿಗೆಯ ಮೇಲೆ ಹಾಳಾದ ವಸ್ತುಗಳನ್ನಿಡುತ್ತಾರೆ. ನಿಮ್ಮ ಮನೆಯ ಮೇಲೂ ಕೂಡ ಹಾಳಾದ ಸಾಮಾನುಗಳಿದ್ದರೆ ಅವುಗಳನ್ನು ತಕ್ಷಣ ತೆಗೆದುಹಾಕಿ. ಈ ಸಾಮಾನುಗಳಿಂದ ಮನೆಯಲ್ಲಿ ದಾರಿದ್ರ್ಯಬರುತ್ತದೆ ಹಾಗೂ ಮನೆ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಇದನ್ನು ಓದಿ- Religious Beliefs: ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಗುರುವಾರ ಈ ಕೆಲಸ ತಪ್ಪದೆ ಮಾಡಿ

ದೇವಿ-ದೇವತೆಗಳ ಹಾಳಾದ ಮೂರ್ತಿ ಹಾಗೂ ಭಾವಚಿತ್ರಗಳನ್ನು ನದಿಯಲ್ಲಿ ವಿಸರ್ಜಿಸಿ
ಒಂದು ವೇಳೆ ಮನೆಯಲ್ಲಿ ದೇವಿ-ದೇವತೆಗಳ ಹಾಳಾದ ಮೂರ್ತಿಗಳು ಅಥವಾ ಹಾಳಾದ ಫೋಟೋ ಫ್ರೇಮ್ ಗಳಿದ್ದರೆ ತಕ್ಷಣ ಅವುಗಳನ್ನು ತೆಗೆದುಕೊಂಡು ಹೋಗಿ ನದಿಯಲ್ಲಿ ವಿಸರ್ಜಿಸಿ. ಇದರಿಂದ ಮನೆಯಲ್ಲಿನ ಅನಾರೋಗ್ಯ ಸಮಸ್ಯೆ ದೊರಾಗುತ್ತದೆ. 

ಇದನ್ನು ಓದಿ-  Vastu Tips: ವ್ಯಾಲೆಟ್ ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ, ಆರ್ಥಿಕ ಪ್ರಗತಿ ನಿಂತುಹೋಗುತ್ತದೆ

ಹಾಳಾದ ಪಾತ್ರೆಗಳಿದ್ದರೆ ಅವುಗಳನ್ನು ತಕ್ಷಣ ಮನೆಯಿಂದ ಹೊರಹಾಕಿ 
ಹಲವರು ಮನೆಯಲ್ಲಿರುವ ಹಾಳಾದ ಪಾತ್ರೆಗಳಲ್ಲಿಯೇ ಆಹಾರ ಸೇವಿಸುತ್ತಾರೆ. ಇದರಿಂದ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ತಲೆದೋರುತ್ತದೆ. ಒಂದು ವೇಳೆ ನಿಮ್ಮ ಮನೆಗಳಲ್ಲಿಯೂ ಕೂಡ ಹಾಳಾದ ಪಾತ್ರೆಗಳಿದ್ದರೆ ಅವುಗಳನ್ನು ತಕ್ಷಣ ಮನೆಯಿಂದ ಹೊರಹಾಕಿ.

ಇದನ್ನು ಓದಿ- Sankashti Chaturthi : ಭಾನುವಾರ ಸಂಕಷ್ಟಿ ಚತುರ್ಥಿ, ಸಂತಾನಕ್ಕೆ ದೀರ್ಘಾಯು ಪ್ರದಾಯಕ ಈ ವ್ರತ ಮಾಡೋದು ಹೇಗೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News