ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ಮನೆಯಲ್ಲಿ ಸಂತೋಷದ ವಾತಾವರಣವನ್ನು ಬಯಸುತ್ತಾನೆ. ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಕೆಲವು ಅಲಂಕಾರಿಕ ವಸ್ತುಗಳನ್ನು ಬಳಸಬಹುದು. ಇಂತಹ ಅಲಂಕಾರಿಕ ವಸ್ತುಗಳಲ್ಲಿ ಲಾಫಿಂಗ್ ಬುದ್ಧ(Laughing Buddha) ಕೂಡ ಒಂದು. ಇದನ್ನು ಮನೆಯಲ್ಲಿಟ್ಟರೆ ಸಂತೋಷದ ವಾತಾವರಣ ಇರುತ್ತದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಇದನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ ಹಾನಿಯುಂಟಾಗುತ್ತದೆ. ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ಲಾಫಿಂಗ್ ಬುದ್ಧನ ವಿಗ್ರಹ(Laughing Buddha Statue)ವನ್ನು ಹೇಗೆ ಮತ್ತು ಎಲ್ಲಿ ಇಡಬೇಕೆಂದು ತಿಳಿಯಿರಿ.
ಇದನ್ನೂ ಓದಿ: ಕುಬೇರ ಯೋಗದಿಂದ ಭಾರೀ ಅದೃಷ್ಟ ಪಡೆಯಲಿವೆ ಈ ಮೂರು ರಾಶಿಗಳು.! ನಿಮ್ಮ ರಾಶಿ ಇದರಲ್ಲಿದೆಯೇ ನೋಡಿಕೊಳ್ಳಿ
ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಎಲ್ಲಿ ಇಡಬೇಕು?
- ಲಾಫಿಂಗ್ ಬುದ್ಧನ ಬಗ್ಗೆ ಸಾಮಾನ್ಯವಾಗಿ ಅನೇಕ ವಿಷಯಗಳು ಜನಪ್ರಿಯವಾಗಿವೆ. ಉದಾಹರಣೆಗೆ ಯಾರಿಗಾದರೂ ಆರ್ಥಿಕ ಹೊರೆಯಾದರೆ ಅಥವಾ ಮನೆಯಲ್ಲಿ ದುಃಖದ ವಾತಾವರಣವಿದ್ದರೆ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇಟ್ಟುಕೊಂಡರೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
- ವಾಸ್ತು ಶಾಸ್ತ್ರ(Vastu Shastra)ದಲ್ಲಿ ಲಾಫಿಂಗ್ ಬುದ್ಧನನ್ನು ಸಂತೋಷ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಾಗಿ ಇದನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ.
- ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆ, ಕೆಲಸದ ಸ್ಥಳ, ವ್ಯಾಪಾರ ಸ್ಥಳ ಅಥವಾ ಊಟದ ಕೋಣೆಯಲ್ಲಿ ಇರಿಸಬಹುದು. ಆದರೆ ಅದನ್ನು ನೆಲದಿಂದ ಎರಡೂವರೆ ಅಡಿ ಎತ್ತರದಲ್ಲಿ ಅಥವಾ ಮುಖ್ಯ ಬಾಗಿಲಿನ ಮುಂದೆ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.
- ವಾಸ್ತು ಶಾಸ್ತ್ರದಲ್ಲಿ ಬುದ್ಧನ ನಗುತ್ತಿರುವ ಮುಖವನ್ನು ಸಂತೋಷ ಮತ್ತು ಸಮೃದ್ಧಿ(Happiness and Prosperity)ಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರ ದಪ್ಪ ಹೊಟ್ಟೆಯು ಸಮೃದ್ಧಿಯ ಸಂಕೇತವಾಗಿದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಮುಖ್ಯ ದ್ವಾರದ ಮುಂದೆ ಇಡುವುದರಿಂದ ಧನಾತ್ಮಕ ಶಕ್ತಿ ಹರಡುತ್ತದೆ. ಭತ್ತದ ಮೂಟೆ ಹೊತ್ತ ಬುದ್ಧನ ವಿಗ್ರಹವನ್ನು ಉತ್ತಮವೆಂದು ಪರಿಗಣಿಸಲಾಗಿದೆ.
- ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ ಮಲಗುವ ಕೋಣೆ ಮತ್ತು ಅಡುಗೆಮನೆಯಲ್ಲಿ ಲಾಫಿಂಗ್ ಬುದ್ಧನ ಚಿತ್ರವನ್ನು ಇಡಬಾರದು. ಏಕೆಂದರೆ ಇದನ್ನು ಆ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹರಿಯುತ್ತದಂತೆ.
ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಶೀಘ್ರವೇ ಶುಭಸುದ್ದಿ ಸಿಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.