ಮನೆಯಲ್ಲಿನ ಈ ಸಂಗತಿಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ, ಇಂದೇ ತೆಗೆದುಹಾಕಿ!

Vastu Tips For Prosperity: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಾಕಷ್ಟು ಹಣ, ಘನತೆ-ಗೌರವವನ್ನು ಸಂಪಾದಿಸಲು ಬಯಸುತ್ತಾರೆ, ಆದರೆ, ಕೆಲವರ ಈ ಕನಸು ಎಂದಿಗೂ ಈಡೇರುವುದಿಲ್ಲ. ವಾಸ್ತುವಿಗೆ ಸಂಬಂಧಿಸಿದ ಸಣ್ಣ ಸಣ್ಣ ತಪ್ಪುಗಳು ಇದಕ್ಕೆ ಕಾರಣವಾಗಿರಬಹುದು. (Lifestyle News In Kannada)  

Written by - Nitin Tabib | Last Updated : Dec 4, 2023, 11:20 PM IST
  • ಮನೆಯಲ್ಲಿ ಹಾಳಾದ ಅಥವಾ ಮುರುಕಲು ಪಾತ್ರೆಗಳನ್ನು ಕೂಡಿ ಹಾಕುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚುತ್ತದೆ.
  • ನಿರುಪಯುಕ್ತ ವಸ್ತುಗಳ ರಾಶಿ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ.
  • ಅಂತಹ ಮನೆಯಲ್ಲಿ ಮನೆಯ ಸದಸ್ಯರ ಎಲ್ಲಾ ಪ್ರಯತ್ನಗಳ ನಂತರವೂ ಕೂಡ ಪ್ರಗತಿಯಾಗಲೀ ಅಥವಾ ಆದಾಯವಾಗಲೀ ಹೆಚ್ಚಾಗುವುದಿಲ್ಲ.
ಮನೆಯಲ್ಲಿನ ಈ ಸಂಗತಿಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ, ಇಂದೇ ತೆಗೆದುಹಾಕಿ! title=

Vastu Tips For Prosperity: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಾಕಷ್ಟು ಹಣ, ಘನತೆ-ಗೌರವವನ್ನು ಸಂಪಾದಿಸಲು ಬಯಸುತ್ತಾರೆ, ಆದರೆ, ಕೆಲವರ ಈ ಕನಸು ಎಂದಿಗೂ ಈಡೇರುವುದಿಲ್ಲ. ವಾಸ್ತುವಿಗೆ ಸಂಬಂಧಿಸಿದ ಸಣ್ಣ ಸಣ್ಣ ತಪ್ಪುಗಳು ಇದಕ್ಕೆ ಕಾರಣವಾಗಿರಬಹುದು. ಈ ತಪ್ಪುಗಳು ಏಳಿಗೆಗೆ ಅಡ್ಡಿಪಡಿಸುತ್ತವೆ ಮತ್ತು ಮನೆಯಲ್ಲಿ ಹಣದ ಹರಿವು ನಿಂತುಹೋಗಿ, ಮನೆಯ ಸುಖ-ನೆಮ್ಮದಿ ಎಲ್ಲವೂ ಕೂಡ ಹಾಳಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆ ತಪ್ಪುಗಳು ನಡೆಯದಂತೆ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಯಾವ ದೋಷಗಳು ಆರ್ಥಿಕ ನಷ್ಟ ಸೇರಿದಂತೆ ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ ತಿಳಿದುಕೊಳ್ಳೋಣ ಬನ್ನಿ. (Lifestyle News In Kannada)

ಪೊರಕೆಯನ್ನು ಸಾಮಾನ್ಯವಾಗಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಸಂಬಂಧ ಕಲ್ಪಿಸಲಾಗುತ್ತದೆ. ಪೊರಕೆಯನ್ನು ಒದೆಯುವುದು, ಅದನ್ನು ತಪ್ಪು ದಿಕ್ಕಿನಲ್ಲಿ ಅಥವಾ ತಪ್ಪು ದಾರಿಯಲ್ಲಿ ಇಡುವುದು ಮನೆಯಲ್ಲಿ ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ. ಪೊರಕೆಯನ್ನು ಈಶಾನ್ಯದಿಕ್ಕಿನಲ್ಲಿ ಎಂದಿಗೂ ಕೂಡ ಇಡಬೇಡಿ ಮತ್ತು ಅದನ್ನು ಯಾವಾಗಲೂ ಯಾರಿಗೂ ಕಾಣದ ಸ್ಥಾನದಲ್ಲಿಡಿ. ಅಲ್ಲದೆ, ಅದನ್ನು ಎಂದಿಗೂ ನಿಲ್ಲಿಸಬೇಡಿ.

ಮನೆಯಲ್ಲಿ ಹಾಳಾದ ಅಥವಾ ಮುರುಕಲು ಪಾತ್ರೆಗಳನ್ನು ಕೂಡಿ ಹಾಕುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚುತ್ತದೆ. ನಿರುಪಯುಕ್ತ ವಸ್ತುಗಳ ರಾಶಿ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ. ಅಂತಹ ಮನೆಯಲ್ಲಿ ಮನೆಯ ಸದಸ್ಯರ ಎಲ್ಲಾ ಪ್ರಯತ್ನಗಳ ನಂತರವೂ ಕೂಡ ಪ್ರಗತಿಯಾಗಲೀ ಅಥವಾ ಆದಾಯವಾಗಲೀ ಹೆಚ್ಚಾಗುವುದಿಲ್ಲ.

ಮನೆಯಲ್ಲಿರುವ ಜೇಡರ ಬಲೆಗಳು ಕ್ರಮೇಣ ವ್ಯಕ್ತಿಯನ್ನು ಬಡತನದತ್ತ ಕೊಂಡೊಯ್ಯುತ್ತವೆ. ಆದ್ದರಿಂದ, ಮನೆಯಲ್ಲಿ ಜೇಡರ ಬಲೆಗಳಿಗೆ ಸ್ಥಾನ ಕೊಡಬೇಡಿ.

ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭ, ಆದರೆ ಮನೆಯಲ್ಲಿ ಪಾರಿವಾಳದ ಗೂಡು ಇರುವುದು ಶುಭವಲ್ಲ ಎನ್ನಲಾಗುತ್ತದೆ. ಏಕೆಂದರೆ ಪಾರಿವಾಳದ ಸಂಬಂಧವನ್ನು ಶಾಸ್ತ್ರಗಳಲ್ಲಿ ರಾಹುವಿನ ಜೊತೆಗೆ ಕಲ್ಪಿಸಲಾಗಿದೆ.

ಇದನ್ನೂ ಓದಿ-ಐವತ್ತು ವರ್ಷಗಳ ಬಳಿಕ ವರ್ಷಾಂತ್ಯದಲ್ಲಿ ಮೂರು ರಾಜಯೋಗಗಳ ರಚನೆ, ಹೊಸವರ್ಷ ಆರಂಭಕ್ಕೂ ಮುನ್ನವೇ ಈ ಜನರ ಮನೆ ಪ್ರವೇಶಿಸಲಿದ್ದಾಳೆ ಧನಲಕ್ಷ್ಮಿ!

ಮನೆಯಲ್ಲಿ ಎಂದಿಗೂ ಮುಳ್ಳು ಗಿಡಗಳನ್ನು ನೆಡಬಾರದು. ಮನೆಯಲ್ಲಿ ಜಗಳ ಮತ್ತು ಅಪಶ್ರುತಿಯನ್ನು ಅವು ಹೆಚ್ಚಿಸುತ್ತವೆ. ಇದರೊಂದಿಗೆ ಜೀವನದಲ್ಲಿ ಅನೇಕ ತೊಂದರೆಗಳು ಮತ್ತು ಅಡೆತಡೆಗಳನ್ನು ಉಂಟುಮಾಡುತ್ತವೆ.

ಇದನ್ನೂ ಓದಿ-ನೂರು ವರ್ಷಗಳ ಬಳಿಕ ಗುರು-ಶುಕ್ರರಿಂದ ಸಮಸಪ್ತಕ ಯೋಗ ರಚನೆ, ಈ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News