Varamahalakshmi Festival: ವರಮಹಾಲಕ್ಷ್ಮಿಗೆ ನೈವೇದ್ಯಕ್ಕಾಗಿ ಯಾವ ತಿಂಡಿಗಳು ಸೂಕ್ತ...ಇಲ್ಲಿದೆ ಮಾಹಿತಿ

Varamahalakshmi Festival Foods : ಹಬ್ಬ ಎಂದರೆ ಮನೆಯಲ್ಲಿ ಸಂಭ್ರಮದ ವಾತಾವರಣ , ಪೂಜೆ, ಅಲಂಕಾರ, ರಂಗೋಲಿ ಆ ದಿನ ಅಡುಗೆ ಮನೆಯಲ್ಲಂತೂ ಭರ್ಜರಿ ಬೋಜನವೇ ರೆಡಿ ಆಗುತ್ತೆ. ಅರಿಶಿಣ ಕುಂಕುಮಕ್ಕಾಗಿ ಮನೆಗೆ ಬರುವ ಮುತೈದೆಯರಿಗೆ, ನೆಂಟರಿಗೆ ವಿಧ ವಿಧ ಭಕ್ಷ ಬೋಜನಗಳನ್ನು ಬಡಿಸುವುದೇ ದೊಡ್ಡ ಸಂಭ್ರಮ. ಆದರೆ ಇದಲ್ಲಕ್ಕಿಂತ ಮೊದಲು ಲಕ್ಷ್ಮಿಗೆ ನೈವೇದ್ಯ ಮಾಡುವುದು ಬಹಳ ಮುಖ್ಯ. 

Written by - Savita M B | Last Updated : Aug 21, 2023, 12:10 PM IST
  • ಶ್ರಾವಣಮಾಸದಲ್ಲಿ ಪ್ರಮುಖವಾಗಿ ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ.
  • ಆಗಸ್ಟ್‌ 25 ರಂದು ವಿಜೃಂಭನೆಯಿಂದ ಆಚರಿಸಲಾಗುವ ಈ ಹಬ್ಬಕ್ಕೆ ಈಗಿನಿಂದಲೇ ತಯಾರಿ ಆರಂಭವಾಗಿದೆ.
  • ಹಾಗಾದರೇ ಲಕ್ಷ್ಮಿಗೆ ಯಾವ ತಿಂಡಿ ಬಹಳ ಇಷ್ಟ? ಏನೆಲ್ಲಾ ಅಡುಗೆ ಮಾಡಬಹುದು ಎನ್ನುವುದನ್ನು ತಿಳಿಯೋಣ.
Varamahalakshmi Festival: ವರಮಹಾಲಕ್ಷ್ಮಿಗೆ ನೈವೇದ್ಯಕ್ಕಾಗಿ ಯಾವ ತಿಂಡಿಗಳು ಸೂಕ್ತ...ಇಲ್ಲಿದೆ ಮಾಹಿತಿ title=

Varamahalakshmi Festival : ಶ್ರಾವಣಮಾಸದಲ್ಲಿ ಪ್ರಮುಖವಾಗಿ ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆಗಸ್ಟ್‌ 25 ರಂದು ವಿಜೃಂಭನೆಯಿಂದ ಆಚರಿಸಲಾಗುವ ಈ ಹಬ್ಬಕ್ಕೆ ಈಗಿನಿಂದಲೇ ತಯಾರಿ ಆರಂಭವಾಗಿದೆ. ಅನೇಕರು ಈಗಾಗಲೇ ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳ ಶಾಪಿಂಗ್‌ನ್ನು ಮುಗಿಸಿದ್ದಾರೆ. 

ಹಬ್ಬ ಎಂದರೇ ಪೂಜೆ, ಮನೆಗೆ ತೋರಣ ಮನೆಗೆ ಅಲಂಕಾರ, ಹಬ್ಬದ ದಿನ ಮನೆಯಲ್ಲಿ ಭರ್ಜರಿ ಬೋಜನವಂತೂ ತಯಾರಾಗಿರುತ್ತೆ. ಹಾಗಾದರೇ ಲಕ್ಷ್ಮಿಗೆ ಯಾವ ತಿಂಡಿ ಬಹಳ ಇಷ್ಟ? ಏನೆಲ್ಲಾ ಅಡುಗೆ ಮಾಡಬಹುದು ಎನ್ನುವುದನ್ನು ತಿಳಿಯೋಣ...

ಸಜ್ಜಿಗೆ: ರವೆ, ತುಪ್ಪ, ಒಣದ್ರಾಕ್ಷಿ, ಗೋಡಂಬಿಗಳಿಂದ ಮಾಡಿದ ಸಜ್ಜಿಗೆಯನ್ನು ದೇವಿಗೆ ನೈವೇದ್ಯವನ್ನಾಗಿ ತಯಾರಿಸಿಕೊಳ್ಳಬಹುದು. ಏಕೆಂದರೆ ಈ ತಿಂಡಿಯೂ ಮಹಾದೇವಿ ಲಕ್ಷ್ಮಿಗೆ ತುಂಬಾ ಪ್ರಿಯವಾದುದು. 

ಒಬ್ಬಟ್ಟು: ಭಾರತೀಯ ಸಂಪ್ರದಾಯದಲ್ಲಿ ಒಬ್ಬಟ್ಟಿಗೆ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಒಬ್ಬಟ್ಟನ್ನು ಮದುವೆ ಸಮಾರಂಭಗಳಲ್ಲಿಯೂ ಮಾಡಲಾಗುತ್ತದೆ. ನೀವು ಲಕ್ಷ್ಮಿಗೆ ನೈವೇದ್ಯವಾಗಿಡಲು ಕಾಯಿ ಒಬ್ಬಟ್ಟನ್ನು ಸಹ ಮಾಡಿಕೊಳ್ಳಬಹುದು. 

ಇದನ್ನೂ ಓದಿ-ದಿನದ ಈ ಹೊತ್ತಿನಲ್ಲಿ ಎಂದಿಗೂ ಶಾರೀರಿಕ ಸಂಬಂಧ ಬೆಳೆಸಬೇಡಿ... ಇಲ್ದಿದ್ರೆ..!

ಕರ್ಜಿಕಾಯಿ: ಮೈದಾ ಹಿಟ್ಟನ್ನು ನಾದಿಕೊಂಡು ಅದರೊಳಗೆ ಕೊಬ್ಬರಿ ಮತ್ತು ಸಕ್ಕರೆ ಮಿಶ್ರಣ ಮಾಡಿ ಎಣ್ಣೆಯಲ್ಲಿ ಕರಿಯುವ ತಿಂಡಿ ಇದು. ಇದನ್ನು ಸಾಮಾನ್ಯವಾಗಿ ಎಲ್ಲ ಹಬ್ಬಕ್ಕೂ ಮಾಡಲಾಗುತ್ತದೆ.

ಕೋಸಂಬರಿ: ಹೆಸರುಬೇಳೆಯನ್ನು ನೀರಲ್ಲಿ ನೆನಸಿ ಅದಕ್ಕೆ ಸೌತೆಕಾಯಿ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಸೇರಿಸಿ ತಯಾರಿಸುವುದೇ ಕೋಸಂಬರಿ ಇದನ್ನು ಎಲ್ಲಾ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ಇನ್ನು ಈ ಆಹಾರವನ್ನು ಪ್ರತಿ ಹಬ್ಬಕ್ಕೂ ಸಾಮಾನ್ಯವಾಗಿ ತಯಾರಿಸಲಾಗುತ್ತದೆ. 

ಪಾಯಸ: ಲಕ್ಷ್ಮಿ ದೇವಿಗೆ ಪಾಯಸ ಎಂದರೆ ಬಹಳ ಇಷ್ಟ ಎಂದು ಹೇಳಲಾಗುತ್ತದೆ. ಶಾವಿಗೆ, ಗಸಗಸೆ, ಕೊಬ್ಬರಿ, ಅಕ್ಕಿ ಪಾಯಸ ಹೀಗೆ ವಿಧ ವಿಧವಾದ ಪಾಯಸವನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿದೆ.

ಇಷ್ಟೇ ಅಲ್ಲದೆ ಕಡ್ಲೆಕಾಳಿನ ಉಸಳಿ, ಚಕ್ಕುಲಿ, ಬೆಲ್ಲ ಹೀಗೆ ಸಾಕಷ್ಟು ಪದಾರ್ಥಗಳನ್ನು ನೈವೇದ್ಯ ಮಾಡಬಹುದು. ಇವೆಲ್ಲವನ್ನೂ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಒಂದು ಲೋಟ ಹಾಲು ಮತ್ತು ಸಜ್ಜಿಗೆಯನ್ನೂ ಸಹ ನೈವೇದ್ಯ ಮಾಡಬಹುದು. 

ಇದನ್ನೂ ಓದಿ-ಈ ತರಕಾರಿಗಳು ಆರೋಗ್ಯದ ಜೊತೆಗೆ ತ್ವಚೆಯ ಸಮಸ್ಯೆಗಳನ್ನು ಸಹ ಗುಣಪಡಿಸುತ್ತವೆ, ಈ ಫೇಸ್ ಪ್ಯಾಕ್‌ಗಳನ್ನು ಬಳಸಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News