Shikakai Powder: ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಸೀಗೆಕಾಯಿ ಸಿಗ್ತದೆ ಅದನ್ನ ಬಳಸಿ...!

Shikakai Benefits for Hair: ಶ್ಯಾಂಪ್‌ ಬಳಕೆಯಿಂದ ಚಿಕ್ಕ ವಯಸ್ಸಿನವರಲ್ಲಿ ಬಿಳಿ ಕೂದಲಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ  ನೈಜ್ಯವಾಗಿ ಸಿಗುವ ಸೀಗೆಕಾಯಿ ಬಹಳ ಉಪಯುಕ್ತವಾಗಿದೆ. 

Written by - Zee Kannada News Desk | Last Updated : Jun 6, 2023, 05:21 PM IST
  • ಕೂದಲಿನ ಸಮಸ್ಯೆಗೆ ಶ್ಯಾಂಪ್‌ ಬದಲಾಗಿ ಸೀಗೆಕಾಯಿಯನ್ನು ಬಳಸಿ
  • ಸೀಗೆಕಾಯಿಯನ್ನು ಕೂದಲಿಗೆ ಬಳಸುವುದರಿಂದ ಸಮಸ್ಯೆಗಳನ್ನು ತಪ್ಪಿಸುತ್ತದೆ
  • ಅನೇಕ ಪೋಷಾಕಾಂಶ ಹೊಂದಿರುವ ಸೀಗೆಕಾಯಿ
Shikakai Powder: ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಸೀಗೆಕಾಯಿ ಸಿಗ್ತದೆ ಅದನ್ನ ಬಳಸಿ...! title=

Healthy Hair: ಈ ಆಧುನಿಕರಣದತ್ತ ಬದಲಾದಂತೆ ಎಲ್ಲವೂ ಅಳಿವಿನಂಚಿನಲ್ಲಿದೆ. ಮೊದಲೆಲ್ಲಾ  ತಾಂತ್ರಿಕತೆ ಬರುವ ಮುನ್ನ ರೋಗ ರುಜಿಗಳ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಆದರೆ ಜಗತ್ತು ಅಭಿವೃದ್ದಿ  ಆದತಂತೆ ಎಲ್ಲವೂ ಸಾಲು ಸಾಲಾಗಿ ಒಕ್ಕರಿಸುತ್ತವೆ. ಪ್ರಸ್ತುತದಲ್ಲಿ ಸಮಸ್ಯೆಯಲ್ಲಿ ಕೂದಲಿನ ಆರೋಗ್ಯ ಸಮಸ್ಯೆಯು ಒಂದಾಗಿದೆ.

ಬೆಳೆಯುವ ಯುವಕರು ಸಹ ತಲೆ ಕೂದಲು ಕಳೆದುಕೊಂಡು ದೊಡ್ಡ ವಯಸ್ಸಿನವರಂತೆ ಕಾಣುತ್ತಾರೆ. ಮೊದಲು ಮನೆಯ ಸಮೀಪದ ಕಾಡಿನಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಸೀಗೆಕಾಯಿಯನ್ನು ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಇಂದು ಶ್ಯಾಂಪ್‌ ಬಳಕೆಯಿಂದ ಚಿಕ್ಕ ವಯಸ್ಸಿನವರಲ್ಲಿ ಬಿಳಿ ಕೂದಲಿನ್ನು ಹೊಂದಿರುತ್ತಾರೆ.

ಇದನ್ನೂ ಓದಿ: Turmeric Benefits: ಸರ್ವ ರೋಗಕ್ಕೂ ಮದ್ದು ಅರಿಶಿನ!

ಶ್ಯಾಂಪೂ ಬದಲಾಗಿ ವಾರಕ್ಕೊಂದು ಬಾರಿ ಸೀಗೆ ಕಾಯಿಯಲ್ಲಿ ಕೂದಲು ತೊಳೆಯುವುದರಿಂದ ನಿಮ್ಮ ಕೂದಲನ್ನು ಪೋಷಿಸಿ, ಕೂದಲು ಊದುರುವುದನ್ನು ತಡೆಯುತ್ತದೆ.
ತಲೆಯ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಕಾರಣ ಸೀಗೆಕಾಯಿಯಲ್ಲಿ ಯಾವುದೇ ರೀತಿಯ ರಾಸಯನಿಕ ಇಲ್ಲದಿರುವುದರಿಂದ ಉತ್ತಮ ಕೇಶರಾಶಿ ಹೊಂದಲು ಸಹಕರಿಸುತ್ತದೆ. 

ಇದನ್ನೂ ಓದಿ: Managlore Cucumber: ಮಂಗಳೂರು ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು..?

ನೊರೆ ಬರುವ ಶ್ಯಾಂಪೂ ಬಳಕೆಯಿಂದ ಕೂದಲು ಉದುತ್ತಿದ್ದರೇ ಅಂಥಹ ಸಂದರ್ಭದಲ್ಲಿ ಸೀಗೆಕಾಯಿ ಉತ್ತಮ ಔಷಧಿಯಾಗಿದೆ. ಹಾಗೆಯೇ ಇದರ ಬಳಕೆಯಿಂದ ನೈಸ್‌ ಹೇರ್‌ ಹೊಂದಲು ಯಾವುದೇ ರೀತಿಯ ಕಂಡಿಷಿನರ್‌ ಅವಶ್ಯಕತೆ ಇರುವುದಿಲ್ಲ. ಸೀಗೆಕಾಯಿಯನ್ನು ಒಣಗಿಸಿ, ಪುಡಿ ಮಾಡಿಕೊಂಡು ಸ್ನಾನ ಮಾಡುವಾಗ ಬಳಕೆ  ಮಾಡುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News