ಅಡುಗೆಗೆ ನಿತ್ಯ ಬಳಸುವ ಈ ತರಕಾರಿ ಕೂದಲು ಉದ್ದ ಬೆಳೆಯಲು ಬಲು ಉಪಕಾರಿ

ಆರೋಗ್ಯಕರ ಮತ್ತು ನೈಸರ್ಗಿಕ ರೀತಿಯಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ಬೆಳ್ಳುಳ್ಳಿ ಸಹಕಾರಿಯಾಗಲಿದೆ. ಬೆಳ್ಳುಳ್ಳಿಯು ವಿಟಮಿನ್ ಬಿ, ವಿಟಮಿನ್ ಸಿ, ಸೆಲೆನಿಯಮ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳನ್ನು ಹೊಂದಿದೆ. ಇದು ಕೂದಲನ್ನು ಉದ್ದ, ದಪ್ಪ ಮತ್ತು  ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.  

Written by - Ranjitha R K | Last Updated : Mar 9, 2023, 12:06 PM IST
  • ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎಲ್ಲರೂ ಎದುರಿಸುತ್ತಿದ್ದಾರೆ.
  • ಕೆಲವರಿಗೆ ಕೂದಲು ಉದುರುವುದು ಸಮಸ್ಯೆ
  • ಇನ್ನು ಕೆಲವರಿಗೆ ಕೂದಲು ಬಿಳಿಯಾಗುವುದು ತೊಂದರೆ ನೀಡುತ್ತದೆ
ಅಡುಗೆಗೆ ನಿತ್ಯ ಬಳಸುವ ಈ ತರಕಾರಿ ಕೂದಲು ಉದ್ದ ಬೆಳೆಯಲು ಬಲು ಉಪಕಾರಿ  title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯಾಗಲಿ ಅಥವಾ ಪುರುಷನಾಗಲಿ ಎಲ್ಲರೂ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಕೆಲವರು ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದರೆ, ಇನ್ನು ಕೆಲವರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲಿಗೆ ಸಂಬಂಧಿತ ಸಮಸ್ಯೆಗಳಿಗೆ ಮಾರುಕಟ್ಟೆಯಲ್ಲಿ ಪರಿಹಾರದ ರೂಪದಲ್ಲಿ ಅನೇಕ ಶಾಂಪೂ, ಎಣ್ಣೆ ಲಭ್ಯವಿವೆ. ಇವುಗಳಲ್ಲಿ ಕೆಲವು ಆಯ್ಕೆಗಳು ಬಹಳ ದುಬಾರಿಯಾಗಿವೆ. ಕೆಲವು ಆಯ್ಕೆಗಳು ರಾಸಾಯನಿಕ ಅಂಶದಿಂದಾಗಿ ಹಾನಿಕಾರಕವಾಗಿದೆ. ಆರೋಗ್ಯಕರ ಮತ್ತು ನೈಸರ್ಗಿಕ ರೀತಿಯಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ಬೆಳ್ಳುಳ್ಳಿ ಸಹಕಾರಿಯಾಗಲಿದೆ. ಬೆಳ್ಳುಳ್ಳಿಯು ವಿಟಮಿನ್ ಬಿ, ವಿಟಮಿನ್ ಸಿ, ಸೆಲೆನಿಯಮ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳನ್ನು ಹೊಂದಿದೆ. ಇದು ಕೂದಲನ್ನು ಉದ್ದ, ದಪ್ಪ ಮತ್ತು  ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.  

ಬೆಳ್ಳುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು :
1. ಕೂದಲನ್ನು ಸದೃಢವಾಗಿಸಲು : ಕೂದಲಿಗೆ ಬೆಳ್ಳುಳ್ಳಿ ರಸವನ್ನು ಬಳಸುವುದು ಬಹಳ ಸಹಕಾರಿಯಾಗಿರಲಿದೆ. ಕೂದಲನ್ನು ಬಲಪಡಿಸಲು ಮತ್ತು  ಫ್ಲೆಕ್ಸಿಬಲ್ ಆಗಿರುವಂತೆ ಮಾಡಲು ಬೆಳ್ಳುಳ್ಳಿ ರಸ ಉಪಯುಕ್ತವಾಗಿರಲಿದೆ. ಬೆಳ್ಳುಳ್ಳಿ ರಸದಲ್ಲಿ ಕಂಡುಬರುವ ಸೆಲೆನಿಯಮ್ ಮತ್ತು ಸಲ್ಫರ್ ಕೂದಲನ್ನು ಸದೃಢವಾಗಿಸುತ್ತದೆ. 

ಇದನ್ನೂ ಓದಿ : ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಬೇಕಾದರೆ ಈ ಹಣ್ಣುಗಳಿಂದ ದೂರವಿರಿ

2. ಕೂದಲ ಬೆಳವಣಿಗೆಗೆ ಸಹಕಾರಿ : ಹಲವು ವಿಟಮಿನ್ ಮತ್ತು ಮಿನರಲ್ ಗಳು ಬೆಳ್ಳುಳ್ಳಿಯಲ್ಲಿದ್ದು, ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿಗೆ ಬೆಳ್ಳುಳ್ಳಿ ರಸವನ್ನು ಹಚ್ಚಿದರೆ ಕೂದಲು ವೇಗವಾಗಿ ಬೆಳೆಯುತ್ತದೆ. 

3. ಕೂದಲು ಉದುರುವುದನ್ನು ತಡೆಯುತ್ತದೆ : ಅತಿಯಾದ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾಗಿದ್ದರೂ ಕೂದಲಿಗೆ ಬೆಳ್ಳುಳ್ಳಿ ರಸವನ್ನು ಹಚ್ಚಬಹುದು. ಇದರಿಂದ ಕೂದಲು ಉದುರುವುದು ತಡೆಯುತ್ತದೆ. ಬೆಳ್ಳುಳ್ಳಿ ರಸದಲ್ಲಿ ಕೂದಲು ಉದುರುವುದನ್ನು ತಡೆಯುವ  ಗುಣಗಳು ಕಂಡು ಬರುತ್ತದೆ. 

4. ತಲೆಹೊಟ್ಟು ನಿವಾರಿಸುತ್ತದೆ : ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ನಿಯಮಿತವಾಗಿ ಕೂದಲಿಗೆ ಬಳಸುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ತುರಿಕೆ ಸಮಸ್ಯೆಯೂ ದೂರವಾಗುತ್ತದೆ.

ಇದನ್ನೂ ಓದಿ : ಬೇಸಿಗೆಯಲ್ಲಿ ಹೃದಯವನ್ನು ಆರೋಗ್ಯವಾಗಿಡಲು ಈ 10 ಆಹಾರಗಳು ಸೇವಿಸಿ..!

5. ಕೂದಲು ಹಾನಿಯಾಗದಂತೆ ರಕ್ಷಿಸಿ : ಸೂರ್ಯನ ಪ್ರಖರ ಕಿರಣ, ಧೂಳಿನ    ಕಾರಣದಿಂದ ಚರ್ಮಕ್ಕೆ ಹಾನಿಯಾಗುವುದಲ್ಲದೆ, ಕೂದಲಿನ ಕೆರಾಟಿನ್ ಪ್ರೋಟೀನ್ ಕ್ರಮೇಣ ಕಣ್ಮರೆಯಾಗುತ್ತದೆ. ಈ ಸ್ಥಿತಿಯಲ್ಲಿ ಕೂದಲಿನ ಆರೈಕೆಗಾಗಿ ಬೆಳ್ಳುಳ್ಳಿ ರಸವನ್ನು ಬಳಸಬಹುದು. ಇದು ಕೂದಲನ್ನು ರಕ್ಷಿಸುತ್ತದೆ ಮತ್ತು ಹಾನಿಯಾಗದಂತೆ ತಡೆಯುತ್ತದೆ.

ಬೆಳ್ಳುಳ್ಳಿ ರಸವನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ? : 
ಬೆಳ್ಳುಳ್ಳಿ ರಸವನ್ನು ಮನೆಯಲ್ಲಿಯೇ ತಯಾರಿಸಲು ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ತೆಗೆದುಕೊಂಡು  ಜಜ್ಜಿ ಜ್ಯೂಸ್ ತೆಗೆದುಕೊಳ್ಳಿ. ಈ ಜ್ಯೂಸ್‌ಗೆ ಒಂದು ಚಮಚ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿ ಮತ್ತು ಕೂದಲಿನೊಂದಿಗೆ ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಿ. ನಂತರ 2-4 ಗಂಟೆಗಳ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News