ನವದೆಹಲಿ: Higher Risk Of Coronavirus: ಕರೋನವೈರಸ್ ಸೋಂಕು ವಿಶ್ವಾದ್ಯಂತ ಹೆಚ್ಚುತ್ತಲೇ ಇದೆ. ಏತನ್ಮಧ್ಯೆ, ಮದುವೆಯಾಗಲು ಆಸಕ್ತಿ ಇಲ್ಲದ ಜನರು ಕೋವಿಡ್ -19 ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿ ಹೊಂದಿರುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಅಷ್ಟೇ ಅಲ್ಲ, ಕರೋನಾಗೆ ತುತ್ತಾದ ನಂತರ, ಮದುವೆಯಾದ ಜನರಿಗಿಂತ ಅವಿವಾಹಿತ ಜನರಲ್ಲಿ ಸಾವಿನ ಅಪಾಯವೂ ಹೆಚ್ಚಿರುತ್ತದೆ ಎಂದು ಅಧ್ಯಯನ ಹೇಳಿದೆ.
ಸೋಂಕಿನ ಅಪಾಯ ಏಕೆ ಹೆಚ್ಚಾಗಿರುತ್ತದೆ?
ವಿವಾಹಿತರಿಗಿಂದ ಅವಿವಾಹಿತರ ಜೀವನ ಶೈಲಿ ಕಳಪೆ ಮಟ್ಟದ್ದಾಗಿರುತ್ತದೆ. ಈ ಕಾರಣದಿಂದ ಬಹುತೇಕ ಅವಿವಾಹಿಟರಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಇದರ ಅರ್ಥ ಅವರ ಇಮ್ಯೂನ್ ಸಿಸ್ಟಂ ತುಂಬಾ ವೀಕ್ ಆಗ್ರುತ್ತದೆ. ಈ ಕಾರಣದಿಂದ ಅವಿವಾಹಿತರು ಕೊರೊನಾವೈರಸ್ (Coronavirus) ನಂತಹ ಸೋಂಕಿಗೆ ಸಿಲುಕುವ ಅಪಾಯ ಹೆಚ್ಚಾಗಿರುತ್ತದೆ.
ಮದುವೆಯಲ್ಲಿ ಆಸಕ್ತಿ ಏಕೆ ಇರುವುದಿಲ್ಲ
'ದಿ ನೇಚರ್' ಜರ್ನಲ್ ನಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ಪದೇ ಪದೇ ಕಾಯಿಲೆಯಿಂದ ಬಳಲುವ ಕಾರಣ ಅವಿವಾಹಿತ ಜನರ ಮಾನಸಿಕ ಸ್ಥಿತಿ ಪ್ರಭಾವಿತಗೊಂಡಿರುತ್ತದೆ. ಈ ಕಾರಣದಿಂದ ಜೀವನ ಸಂಗಾತಿಯ ಕುರಿತು ಅವರಲ್ಲಿ ಆಕಷಣೆ ಕಡಿಮೆಯಾಗಿರುತ್ತದೆ. ಇಂತಹ ಯುವಕರಿಗೆ ಮದುವೆ ಹಾಗೂ ರಿಲೇಶನ್ ಶಿಪ್ ನಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ.
ಸ್ವೀಡನ್ ವಿವಿಯಲ್ಲಿ ನಡೆದಿದೆ ಈ ಅಧ್ಯಯನ
ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯವು ಕರೋನಾದಿಂದ ಸೋಂಕಿತ ಜನರ ಆರ್ಥಿಕ, ಸಾಮಾಜಿಕ, ಮಾನಸಿಕ ಮತ್ತು ದೈಹಿಕ ಪರಿಸ್ಥಿತಿಗಳು ಮತ್ತು ಅದರಿಂದ ಸಾವುಗಳು ಸೇರಿದಂತೆ ಜೀವನದ ವಿವಿಧ ಅಂಶಗಳನ್ನು ಅಧ್ಯಯನ ಮಾಡಿದೆ. ಇದರಿಂದ ಹಲವು ಸಂಗತಿಗಳು ಬಹಿರಂಗಗೊಂಡಿವೆ.
ಇವರಲ್ಲಿ ಸಾವಿನ ಅಪಾಯ ಹೆಚ್ಚು
ವಿವಾಹಿತರಿಗಿಂತ ಅವಿವಾಹಿತ ಜನರಲ್ಲಿ ಕರೋನವೈರಸ್‌ನಿಂದಾಗುವ ಸಾವಿನ ಅಪಾಯವೂ ಹೆಚ್ಚಾಗಿದೆ ಎಂದು ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಇದಲ್ಲದೆ, ಕಡಿಮೆ ವಿದ್ಯಾವಂತ ಮತ್ತು ಕಡಿಮೆ ಆದಾಯ ಹೊಂದಿರುವ ಜನರು ಸಹ ಕರೋನಾ ಸೋಂಕಿನ ನಂತರ ಹೆಚ್ಚಿನ ಸಾವಿನ ಅಪಾಯವನ್ನು ಹೊಂದಿರುತ್ತಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ- Mucormycosis: Covid-19ನಿಂದ ಚೇತರಿಸಿಕೊಂಡ ರೋಗಿಗಳು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ, ಇಬ್ಬರ ಸಾವು
ಈ ಅಧ್ಯಯನ ಭಾರತಕ್ಕೂ ಅನ್ವಯಿಸುತ್ತದೆಯೇ
ಸ್ವೀಡನ್‌ನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಯನವನ್ನು ನಡೆಸಲಾಗಿದೆ ಹೀಗಾಗಿ ಅಧ್ಯನದ ಹಲವು ಫಲಿತಾಂಶಗಳು ಭಾರತಕ್ಕೆ ಸಂಪೂರ್ಣವಾಗಿ ಅನ್ವಯಿಸಲಾಗುವುದಿಲ್ಲ, ಏಕೆಂದರೆ ನಮ್ಮ ದೇಶದಲ್ಲಿ ಕಡಿಮೆ ಮಟ್ಟದ ಶಿಕ್ಷಣ ಮತ್ತು ಆದಾಯದ ಹೊರತಾಗಿಯೂ, ಕುಟುಂಬ ಬೆಂಬಲವು ತುಂಬಾ ಹೆಚ್ಚಾಗಿದೆ.
ಇದನ್ನು ಓದಿ- No Alcohol after Covid Vaccine: ಕೊರೊನಾ ಲಸಿಕೆ ಹಾಕಿಸಿಕೊಂಡ 2 ತಿಂಗಳು ಮದ್ಯ ಸೇವಿಸಬಾರದೇ? ಇಲ್ಲಿದೆ Experts Advise
ಭಾರತದ ಪರಿಸ್ಥಿತಿ ಕುರಿತು ತಜ್ಞರ ಅಭಿಮತ
ಭಾರತದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂದು ಈ ಅಧ್ಯಯನದ ಅಂಶಗಳ ಬಗ್ಗೆ ತಜ್ಞರು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕುಟುಂಬ ಬಾಂಧವ್ಯವು ತುಂಬಾ ಉತ್ತಮವಾಗಿರುತ್ತದೆ ಮತ್ತು ಅನಾರೋಗ್ಯಕ್ಕೆ ಒಳಗಾದ ನಂತರ ಉತ್ತಮ ಕಾಳಜಿಯನ್ನುವಹಿಸಲಾಗುತ್ತದೆ. ಈ ಕಾರಣಕ್ಕಾಗಿ ಇದನ್ನು ಭಾರತದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಆದರೆ, ಕಡಿಮೆ ವಿದ್ಯಾಭ್ಯಾಸ ಮತ್ತು ಕಡಿಮೆ ಆದಾಯದಿಂದಾಗಿ, ಚಿಕಿತ್ಸೆಯಲ್ಲಾಗುವ ವಿಳಂಬ ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.