Tulsi Leaves: ಈ ಸಮಸ್ಯೆ ಇರುವವರು ತಪ್ಪಿಯೂ ತುಳಸಿ ಎಲೆಯನ್ನು ತಿನ್ನಲೇಬಾರದು

ತುಳಸಿ ಎಲೆಗಳಲ್ಲಿMercury Content  ಇರುತ್ತದೆ. ತುಳಸಿ ಎಲೆಯನ್ನು ಅಗಿಯುವಾಗ, ಈ ಅಂಶಗಳು ಹೊರಬರುತ್ತವೆ ಮತ್ತು ಅದು ನಿಮ್ಮ ಹಲ್ಲುಗಳಿಗೆ ಹಾನಿ ಮಾಡುತ್ತದೆ.

Written by - Ranjitha R K | Last Updated : Nov 3, 2021, 12:14 PM IST
  • ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ.
  • ತುಳಸಿ ಎಲೆಗಳ ಸೇವನೆಯ ವೇಳೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.
  • ತುಳಸಿ ಎಲೆಗಳನ್ನು ಅತಿಯಾಗಿ ಸೇವಿಸುವುದು ಅಪಾಯಕಾರಿ.
Tulsi Leaves: ಈ ಸಮಸ್ಯೆ ಇರುವವರು ತಪ್ಪಿಯೂ ತುಳಸಿ ಎಲೆಯನ್ನು ತಿನ್ನಲೇಬಾರದು  title=
ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. (file photo)

ನವದೆಹಲಿ : ತುಳಸಿ ಎಲೆಗಳಲ್ಲಿ ಹಲವು ಔಷಧೀಯ ಗುಣಗಳಿವೆ. ಆಯುರ್ವೇದದ (Ayurveda) ಪ್ರಕಾರ, ತುಳಸಿ ಎಲೆಗಳ ಸೇವನೆಯು ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವುದರಿಂದ ಹಿಡಿದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆದರೆ ತುಳಸಿ ಎಲೆಗಳ (Tulsi leaves benefits) ಸೇವನೆಯ ವೇಳೆ ಕೂಡಾ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ ತುಳಸಿ ಎಲೆ ಕೂಡಾ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. 

ಹಲ್ಲುಗಳಿಗೆ ಹಾನಿ :
ತುಳಸಿ ಎಲೆಗಳಲ್ಲಿMercury Content  ಇರುತ್ತದೆ. ತುಳಸಿ ಎಲೆಯನ್ನು ಅಗಿಯುವಾಗ, ಈ ಅಂಶಗಳು ಹೊರಬರುತ್ತವೆ ಮತ್ತು ಅದು ನಿಮ್ಮ ಹಲ್ಲುಗಳಿಗೆ ಹಾನಿ ಮಾಡುತ್ತದೆ. ತುಳಸಿಯ ಎಲೆಗಳು (Tulsi leaves) ಆಮ್ಲೀಯವಾಗಿರುತ್ತವೆ ಮತ್ತು ಅದನ್ನು ಪ್ರತಿದಿನ ಹೆಚ್ಚು ಅಗಿಯುತ್ತಿದ್ದರೆ, ಹಲ್ಲಿನ ದಂತಕವಚದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ  ಓದಿ : Banana: ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಯಿಂದ ಆಗುವ ಪರಿಣಾಮ ತಿಳಿದಿದೆಯೇ?

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಎಚ್ಚರ : 
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಕೂಡಾ ತುಳಸಿ ಎಲೆಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ವೈದ್ಯರ ಸಲಹೆಯಿಲ್ಲದೆ ಯಾವುದೇ ಕಾರಣಕ್ಕೂ ತುಳಸಿ ಎಲೆಗಳನ್ನು (Side effects of tulsi leave) ತಿನ್ನಬಾರದು. ಇದು ಆರೋಗ್ಯಕ್ಕೆ  ಹಾನಿಯನ್ನುಂಟುಮಾಡುತ್ತದೆ.

ಮಧುಮೇಹದ ಸಮಸ್ಯೆಯಿದ್ದರೆ ಹುಷಾರು :
ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಲೆಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ತುಳಸಿ ಎಲೆಗಳು ಅನೇಕ ಗುಣಗಳನ್ನು ಹೊಂದಿದೆ. ಆದರೆ ನೀವುಮೊದಲೇ ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ,  ತುಳಸಿ ಎಳೆಯನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. 

ಇದನ್ನೂ  ಓದಿ : Memory boosting super food: ಮೆದುಳನ್ನು ಚುರುಕಾಗಿಸುತ್ತದೆ ಈ ಐದು ಆಹಾರ ವಸ್ತುಗಳು

ಈ ವಿಚಾರವು ಗೊತ್ತಿರಲಿ :
ಆಯುರ್ವೇದದ (Ayurveda) ಪ್ರಕಾರ, ತುಳಸಿ ಎಲೆಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕುವ ಗುಣವನ್ನು ಹೊಂದಿವೆ.  ಆದರೆ ನಿಮಗೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇಲ್ಲದಿದ್ದರೆ ಮತ್ತು ನೀವು ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ತುಳಸಿ ಎಲೆಗಳನ್ನು ಹೆಚ್ಚು ಸೇವಿಸಬೇಡಿ. ಇದರಿಂದ ರಕ್ತ ತೆಳುವಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News